ಸುಣಕಲ್ಬಿದರಿಯಲ್ಲಿ ಮಿಂಚಿನ ಮತದಾನ ಜಾಗೃತಿ ಅಭಿಯಾನ

ರಾಣೇಬೆನ್ನೂರು: ತಾಲೂಕಿನ ಸುಣಕಲ್ಬಿದರಿ ಗ್ರಾಮದ ಶ್ರೀ ಸದ್ಗುರು ಶಿವಾನಂದ ಪಪೂ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಆಶ್ರಯದಲ್ಲಿ ಇತ್ತೀಚಗೆ ಗ್ರಾಮದಲ್ಲಿ ನೂರಾರು ವಿದ್ಯಾರ್ಥಿಗಳೊಂದಿಗೆ ಮತದಾರರ ಮಿಂಚಿನ ಅಭಿಯಾನ ಜಾಗೃತಿ ಜಾಥಾ ನಡೆಸಲಾಯಿತು.  ಬಸವೇಶ್ವರ ದೇವಸ್ಥಾನದಿಂದ ಹೊರಟ ಜನಜಾಗೃತಿ ಮೆರವಣಿಗೆಯು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಕಾಲೇಜು ಸಭಾಂಗಣದಲ್ಲಿ ಸಾಂಗತ್ಯಗೊಂಡಿತು. 

ಮೆರಣಿಗೆಗೆ ಹಸಿರು ನಿಶಾನೆ ತೋರಿಸಿ ಕಾಲೇಜು ಪ್ರಾಚಾರ್ಯ ಪಿ. ಮುನಿಯಪ್ಪ ಅವರು ಚಾಲನೆ ನೀಡಿದರು.  ಈ ಸಂದರ್ಭದಲ್ಲಿ ಎಮ್.ಶಿವಕುಮಾರ, ಚನ್ನಬಸಪ್ಪ.ಸಿ, ಹೆಚ್.ಬಿ.ರಂಗಣ್ಣನವರ, ಶಕ್ತಿ ಎಸ್.ಎಸ್, ಸುಮಾ ಗಂಗಾಯಿಕೊಪ್ಪ, ಕೆ,ಜೆ.ಆಶಾ, ಬಿ.ಎ.ವಿಜಯಕುಮಾರ, ಸಿ.ಜೈಪ್ರಕಾಶ, ಸೇರಿದಂತೆ ಮತ್ತಿತರ ಗಣ್ಯರು, ಗ್ರಾಮದ ಮುಖಂಡರು  ಪಾಲ್ಗೊಂಡಿದ್ದರು.