ಲೋಕದರ್ಶನ ವರದಿ
ಬೆಳಗಾವಿ 05: ಕೆ.ಎಲ್.ಎಸ್. ಗೋಗಟೆ ವಾಣಿಜ್ಯ ಮಹಾವಿದ್ಯಾಲಯ ಬೆಳಗಾವಿಯ ಚುನಾವಣಾ ಸಾಕ್ಷರತಾ ಸಂಘ ಹಾಗೂ ಮತದಾರ ಜಾಗೃತಿ ವೇದಿಕೆ ಮೂಲಕ ಮಿಂಚಿನ ಮತದಾರರ ನೋಂದಣಿ ಕಾರ್ಯಕ್ರಮ ನಡೆಯಿತು. ಇದೇ ಸಂದರ್ಭದಲ್ಲಿ ವಿದ್ಯಾಥರ್ಿಗಳಿಗೆ ಚಚರ್ಾ ಸ್ಪಧರ್ೆ, ರಸಪ್ರಶ್ನೆ, ಚಿತ್ರಕಲಾ ಸ್ಪಧರ್ೆ ಹಮ್ಮಿಕೊಳ್ಳಲಾಗಿತ್ತು. ಮತ್ತು ಓಟು ಹಾಕೋಣ ಬನ್ನಿ ಎಂಬ ವಿಷಯದ ಮೇಲೆ ಅಣುಕು ನಾಟಕ ಪ್ರದಶರ್ಿಸಲಾಯಿತು. ಈ ಕಾರ್ಯಕ್ರಮದಲ್ಲಿ ಸುಮಾರು ನಾಲ್ಕನೂರು ವಿದ್ಯಾಥರ್ಿಗಳು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ನಮೂನೆ ನಂ. 6 (ನೋಂದಣಿ) ವಿತರಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಪ್ರಾಚಾರ್ಯ ಡಾ. ಎಚ್.ಎಚ್. ವೀರಾಪೂರ ರವರು ಮಾತನಾಡಿ ದಿ.01ಕ್ಕೆ 18 ವರ್ಷ ತುಂಬಿದ ಎಲ್ಲ ವಿದ್ಯಾಥರ್ಿಗಳು ಮತದಾರರ ಯಾದಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕೆಂದು ತಿಳಿಸಿದರು. ಇದೇ ವೇಳೆ ಡಾ. ಎಮ್.ಎಲ್. ಲಮಾಣಿ ವಿದ್ಯಾಥರ್ಿಗಳನ್ನು ಉದ್ದೇಶಿಸಿ ಪ್ರಜಾಪ್ರಭುತ್ವದಲ್ಲಿ ಮತದಾನದ ಮಹತ್ವವನ್ನು ತಿಳಿಸಿಕೊಟ್ಟರು.
ವಾಣಿಜ್ಯ ಶಾಸ್ತ್ರ ಉಪನ್ಯಾಸಕ ಪ್ರೊ. ಎ.ಆರ್. ನೀರಲಕೇರಿ, ಕಾರ್ಯಕ್ರಮ ಸಂಯೋಜಿಸಿದರು. ವಿನಾಯಕ ಕುಲಕಣರ್ಿ ಕಾರ್ಯಕ್ರಮವನ್ನು ನಿರೂಪಿಸಿ ಕೊನೆಗೆ ವಂದನಾರ್ಪಣೆಯನ್ನು ಕೈಗೊಂಡರು.