ಲೋಕದರ್ಶನವರದಿ
ರಾಣೇಬೆನ್ನೂರು05: ಭೂಮಿ ಮೇಲೆ ಜನ್ಮತಾಳಿದ ಪ್ರತಿಯೊಬ್ಬ ಮಾನವ ಜೀವಿಯು ತನ್ನ ಬದುಕಿನಲ್ಲಿ ನ್ಯಾಯ ನೀತಿ, ಆಚಾರ-ವಿಚಾರ, ದಾನ-ಧರ್ಮ ಅಳವಡಿಸಿಕೊಂಡು ಸದಾ ನೆಮ್ಮದಿಯ ಬದುಕನ್ನು ಕಾಣುವ ನಿಟ್ಟಿನಲ್ಲಿ ಮುಂದಾಗಬೇಕು ಎಂದು ದಾವಣಗೆರೆ ತಾಲೂಕು ಹೆಬ್ಬಾಳದ ರುದ್ರೇಶ್ವರ ವೀರಕ್ತಮಠದ ಮಹಾಂತ ರುದ್ರೇಶ್ವರ ಶ್ರೀಗಳು ಹೇಳಿದರು.
ಅವರು ಇಲ್ಲಿನ ದೊಡ್ಡಪೇಟೆಯ ಪುಟ್ಟಯ್ಯನ ವಿರಕ್ತಮಠದಲ್ಲಿ ಬಸವಬಳಗ ಹಾಗೂ ಅಕ್ಕನಬಳಗ ಆಯೋಜಿಸಿದ್ದ, ಮಾಸಿಕ ಶಿವಾನುಭವಗೋಷ್ಠಿ ಧರ್ಮ ಜಾಗೃತಿ ಧಾಮರ್ಿಕ ಕಾರ್ಯಕ್ರಮದ ದಿವ್ಯಸಾನಿಧ್ಯವಹಿಸಿ ಮಾತನಾಡಿದರು.
ಭವಿಷ್ಯದ ಮಕ್ಕಳಿಗೆ ಶಿಕ್ಷಣ ನೀಡಬೇಕು. ಆ ಶಿಕ್ಷಣವು ಸಂಪೂರ್ಣ ಧರ್ಮ ಸಂಸ್ಕೃತಿಯ ತಳಹದಿಯ ಮೇಲೆ ಸಂಸ್ಕಾರಯುತವಾಗಿರಬೇಕು. ಅಂತಹ ಶಿಕ್ಷಣ ಪಡೆದ ಮಕ್ಕಳು ಈ ದೇಶದ ಭವಿಷ್ಯದ ರುವಾರಿಗಳಾಗಲು ಸಾಧ್ಯವಾಗುತ್ತದೆ ಎಂದ ಅವರು ಇದಕ್ಕೆ ಮೊದಲು ಮನೆಯ ಹೆಣ್ಣುಮಕ್ಕಳು ಶಿಕ್ಷಕರಾಗಬೇಕು. ಅಂತಹ ಕಾರ್ಯ ನಿರಂತರವಾಗಿ ನಡೆಯಲು ಪ್ರೋತ್ಸಾಹಿಸುವ ಗುರುತರ ಹೊಣೆ ತಂದೆ-ತಾಯಿಗಳ ಮೇಲಿದೆ ಎಂದರು.
ಸಮಾರಂಭದ ಅಧ್ಯಕ್ಷತೆವಹಿಸಿದ್ದ, ಪುಟ್ಟಯ್ಯನಮಠದ ಮ.ನಿ.ಪ್ರ. ಶ್ರೀ. ಗುರುಬಸವ ಮಹಾಸ್ವಾಮಿಗಳವರು ಅಣ್ಣ ಬಸವಣ್ಣನವರ ಅಮೂಲ್ಯವಾದ ವಚನಗಳ ಸಾರ ಇಂದು ಎಲ್ಲೆಡೆಯು ಪಸರಿಸಬೇಕಾಗಿದೆ. ಮಕ್ಕಳಿಗೆ ಪಾಲಕರು ಅಮೂಲ್ಯವಾದ ವಚನಗಳ ಬಗ್ಗೆ ತಿಳಿಸುವುದರ ಮೂಲಕ ಅವರಲ್ಲಿ ಆಂತರಿಕ ಜ್ಞಾನ ಹೆಚ್ಚಿಸಲು ಪ್ರಯತ್ನಿಸಬೇಕಾಗಿದೆ. ಇಂದಿನ ಪಾಶ್ಚಿಮಾತ್ಯ ಸಂಸ್ಕೃತಿಯ ಪರಂಪರೆಯಲ್ಲಿ ಸಾಗುತ್ತಿರುವ ಬಹುತೇಕ ಮಕ್ಕಳು ನಮ್ಮ ಸಂಸ್ಕೃತಿ ಸಂಸ್ಕಾರ ಮರೆಯುತ್ತಿದ್ದಾರೆ. ಇದು ಸಲ್ಲದು ಎಂದರು.
ಹಾವೇರಿ ಹೊಸಮಠದ ಶಾಂತಲಿಂಗ ಮಹಾಸ್ವಾಮಿಗಳು ದಿವ್ಯನೇತ್ರತ್ವದಲ್ಲಿದ್ದರು. ನಿವೃತ್ತ ಉಪನ್ಯಾಸಕ ರುದ್ರಯ್ಯ ಪ್ರಸಾದಿಮಠ ಅವರು ಶರಣ ಸಾಹಿತ್ಯ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿದರು. ಇದೇ ಸಂದರ್ಭದಲ್ಲಿ ಕನರ್ಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಉಪಾಧ್ಯಕ್ಷ ಜಿ.ಜಿ.ಹೊಟ್ಟಿಗೌಡ್ರ, ನಗರಸಭಾ ಸದಸ್ಯ ಶಶಿಧರ ಬಸೇನಾಯ್ಕರ್ ಮೊದಲಾದವರನ್ನು ಸನ್ಮಾನಿಸಿ ಗೌರವಿಸಲಾಯಿತು.
ವೇದಿಕೆಯಲ್ಲಿ ಪರಮೇಶ್ವರ ಯಡಿಯಾಪುರ, ಬಿದ್ದಾಡೆಪ್ಪ ಚಕ್ರಸಾಲಿ, ಸುನಂದಮ್ಮ ಕುರವತ್ತಿ, ಅನ್ನಪೂರ್ಣಮ್ಮ ದಾನಪ್ಪನವರ, ಪಾರ್ವತೆಮ್ಮ ದಾನಪ್ಪನವರ, ಮಾಹೋರಕರ, ಪಿ.ಆರ್.ಆಘನಾಸಿಕರ, ಶಾಂತಪ್ಪ ಬೆಣ್ಣಿ ಸೇರಿದಂತೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಸ್ಥಳೀಯ ಕಲಾವಿದರು ಸಂಗೀತ ಸೇವೆ ಸಲ್ಲಿಸಿದರು. ವ್ಹಿ.ವ್ಹಿ.ಹರಪನಹಳ್ಳಿ ಸ್ವಾಗತಿಸಿದರು. ಎಸ್.ಜಿ.ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಗಾಯತ್ರಮ್ಮ ಕುರವತ್ತಿ ನಿರೂಪಿಸಿ ವಂದಿಸಿದರು.