ರಾಯಬಾಗ: ಎಲ್ಲ ದಾನಗಳಲ್ಲಿ ಒಂದು ಜೀವ ಉಳಿಸುವ ಅಮೂಲ್ಯವಾದ ದಾನ ಅದು ರಕ್ತದಾನ. ರಕ್ತದಾನ ಮಾಡುವುದರಿಂದ ಪ್ರಾಣಾಪಾಯದಲ್ಲಿರುವ ಓರ್ವ ಮನುಷ್ಯನ ಜೀವ ಉಳಿಸಿದಂತಾಗುತ್ತದೆ ಎಂದು ಜಿ.ಪಂ.ಸದಸ್ಯ ಪ್ರಣಯ ಪಾಟೀಲ ಹೇಳಿದರು.
ಶನಿವಾರ ಪಟ್ಟಣದ ಸ್ಟೇಶನ್ ಹಿಲ್ಲ್ದಲ್ಲಿರುವ ಅಭಾಜಿ ಸಭಾ ಭವನದಲ್ಲಿ ಜನಮಾನ್ಯ ದಿ.ವ್ಹಿ.ಎಲ್.ಪಾಟೀಲ (ಅಭಾಜಿ) ಫೌಂಡೇಶನ್ ಹಾಗೂ ಮಿರಜದ ಸೇವಾಸದನ ಲಾಯಿನ್ ಸುಪರ ಸ್ಪೆಶಾಲಿಟಿ ಸಹಯೋಗದಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ರಕ್ತ ನೀಡಿ ಮಾತನಾಡಿದ ಅವರು, ಯುವಕರು ಮುಂದೆ ಬಂದು ರಕ್ತದಾನ ಮಾಡುವದರ ಮೂಲಕ ಆದರ್ಶ ಮೆರೆಯಬೇಕೆಂದ ಅವರು ಆರೋಗ್ಯವಂತ ಮನುಷ್ಯ ವರ್ಷದಲ್ಲಿ ಒಮ್ಮೆಯಾದರೂ ರಕ್ತದಾನ ಮಾಡಿ ಆರೋಗ್ಯವಂತರಾಗಿ ಸದಾ ಲವಲವಿಕೆಯಿಂದ ಇರಬೇಕೆಂದರು.
ರಾಯಬಾಗ ಬ್ಲಾಕ್ ಕಾಂಗ್ರೆಸ್ ಕಮೀಟಿ ಅಧ್ಯಕ್ಷ ಉತ್ತಮಕುಮಾರ ಶಿಂಧೆ, ಮಹಾದೇವ ಕೋಕಾಟೆ, ಡಾ.ಅಜಿತ ನಾಯಿಕ, ಡಾ.ಸುರೇಶ ಬೆಳಗಾಂವಕರ, ಡಾ.ವಿನಾಯಕ ಕುಲಕಣರ್ಿ ಡಾವ್ಹಿ.ಎಸ್.ಬೋರೆ, ಡಾ. ಆನಂದ ತೋರೋ, ಡಾ.ಡಿ.ಆರ್.ಉಗ್ರಾಣಿ, ಡಾ.ಖನದಾಳೆ, ನ್ಯಾಯವಾದಿಗಳಾದ ಪಿ.ಎಂ.ಪಾಟೀಲ, ಸಿ.ಬಿ.ಬುಸಗುಂಡೆ, ಎಮ್.ಕೆ.ಖೊಂಬಾರೆ, ನಿಂಗಪ್ಪ ಪೂಜೇರಿ, ಶಿವಪುತ್ರ ಹಾಡಕಾರ ಸೇರಿದಂತೆ ಮುಂತಾದವರು ಇದ್ದರು.