ಬದುಕು ಎಂದಿಗೂ ಶಾಶ್ವತವಲ್ಲ: ಸಾಮಾಜಿಕ ಸೇವೆಯೇ ಶಾಶ್ವತ: ರಟ್ಟಿಹಳ್ಳಿ ಶ್ರೀ

ರಾಣೇಬೆನ್ನೂರು27: ಈ ಭೂಮಿಯ ಮೇಲಿರುವ 84 ಲಕ್ಷ ಜೀವರಾಶಿಗಳಲ್ಲಿ ಚಿಂತನ ಮಂಥನ ಮಾಡುವ ಏಕೈಕ ಜೀವಿಯಾಗಿರುವ ಮಾನವನು ಜೀವನದುದ್ದಕ್ಕೂ ಸತ್ಯ, ಪ್ರಾಮಾಣಿಕ, ನ್ಯಾಯ, ನೀತಿಯ ದಾರಿಯಲ್ಲಿಯೇ ಸಾಗಿ ಉತ್ತಮ ಹೆಸರು ಮಾಡಬೇಕು ಎಂದು ರಟ್ಟಿಹಳ್ಳಿ ಕಬ್ಬಿಣಕಂತಿ ಮಠದ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು. 

  ಸೋಮವಾರ ತಾಲೂಕಿನ ಆರೇಮಲ್ಲಾಪುರ ಗ್ರಾಮದ ಕರಿಯಮ್ಮ ದೇವಸ್ಥಾನದ ಆವರಣದಲ್ಲಿ ಗ್ರಾಮದ ಸರ್ವಜನರ ವತಿಯಿಂದ ಏರ್ಪಡಿಸಿದ್ದ ದಿ. ಮರಿಯಪ್ಪ ನರಸಪ್ಪ ಹಲವಾಗಲ ಅವರ ಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಉಸಿರಿಗೆ ಬೆಲೆ ಇದೆ. ಆದರೆ ಉಳಿಗಾಲವಿಲ್ಲ. ಈ ಉಸಿರು ಉದ್ದಾರಕ್ಕೂ, ಹಾಳಾಗುವುದಕ್ಕು ಕಾರಣವಾಗಿದೆ ಎಂದರು.

   ಅನೇಕ ಮನುಷ್ಯರು ತಮ್ಮ ಜೀವಿತಾವಧಿಯಲ್ಲಿ ಮಾಡಬಾರದ್ದನ್ನು ಮಾಡಿ, ಇಹಲೋಕ ತ್ಯಜಿಸುತ್ತಾರೆ. ಕೆಲವರು ಬದುಕಿದಂತೆ ಅವರ ಅನುಪಮ ಸೇವೆ ಬಿಟ್ಟು ಹೋಗುತ್ತಾರೆ. ಬದುಕುವುದಕ್ಕಾಗಿ ಜೀವಿಸುವ ಬದಲು ಜೀವಿಸುವ ಸಲುವಾಗಿ ಬದುಕಬೇಕು.           ಬಾಹ್ಯ ಸೌಂದರ್ಯದಿಂದ ಏನನ್ನೂ ಸಾಧಿಸಲಾಗದು. ಆಂತರಿಕ ಸೌಂದರ್ಯದಿಂದ ಸಂಸ್ಕೃತಿಯನ್ನು ಕಾಪಾಡಬೇಕು. ದಾರ್ಶನಿಕರು ಬಾಹ್ಯದ ಬದಲು ಆಂತರಿಕಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದು, ಜೀವನ ನವನವೀನವಾಗಬೇಕು. ಅಂತಹ ಬದುಕು ಸಾಗಿಸಿದವರು ದಿ.ಮರಿಯಪ್ಪ ಹಲವಾಗ ಒಬ್ಬಾರಾಗಿದ್ದರು ಎಂದು ನುಡಿದರು.

   ಸಂಸ್ಕಾರ ಗರ್ಭಧಾರಣೆಯಿಂದ ಹಿಡಿದು ಭೂಗರ್ಭಕ್ಕೆ ಹೋಗುವತನಕ ಇರಬೇಕು. ಪ್ರಾಣಿಪಕ್ಷಿಗಳಲ್ಲಿ ನಾವು ಸಂಸ್ಕಾರವನ್ನು ಕಾಣುತ್ತೇವೆ. ಆದರೆ ಅರಿವಿನ ಜನ್ಮತಾಳಿದ ಮನುಷ್ಯ ಸಂಸ್ಕಾರದಿಂದ ವಂಚಿತನಾಗಬಾರದು ಮರಿಯಪ್ಪನವರ ಜೀವನದ ಲೆಕ್ಕವಾಗಿತ್ತು ಎಂದು ಶ್ರೀಗಳು ನುಡಿದರು.

  ಮಾಜಿ ಸಭಾಪತಿ ಕೆ.ಬಿ.ಕೋಳಿವಾಡ ಮಾತನಾಡಿ, ಹುಟ್ಟು ಆಕಸ್ಮಿಕ ಸಾವು ನಿಶ್ಚಿತ, ಕೆಲವರು ಇದ್ದೂ ಸತ್ತಂತೆ ಇರುತ್ತಾರೆ, ಕೆಲವರು ಸತ್ತರೂ ಅವರ ಕಾರ್ಯಗಳು ಜೀವಂತವಾಗಿರುತ್ತವೆ. ಅಂತಹವರಲ್ಲಿ ಮರಿಯಪ್ಪನವರು ಒಬ್ಬರು,   ಹುಟ್ಟು-ಸಾವಿನ ಮಧ್ಯದಲ್ಲಿ ಸಾಗಿಸುವ ಜೀವನ, ನಡೆದುಕೊಂಡ ನೀತಿ ಸತ್ಕಾರಗಳೇ ಕೊನೆಗೆ ಸಾವಿನ ಅಂತರದಲ್ಲಿ ಜೀವಂತವಾಗಿರುತ್ತದೆ. ಇದ್ದಾಗ ಜನರು ಸ್ಮರಿಸುವಂತಹ ಕಾಯಕ ಮಾಡಿದಾಗ ಮಾತ್ರ  ಆತನ ಜೀವನ ಪರಿಪೂರ್ಣ ಎಂದರು.

    ನೆಗಳೂರಿನ ಗುರುಶಾಂತ ಶಿವಾಚಾರ್ಯ ಶ್ರೀಗಳು, ಸ್ಥಳೀಯ ಶರಣಬಸವೇಶ್ವರ ಮಠದ ಪ್ರಣವಾನಂದರಾಮ ಶ್ರೀಗಳು, ದಾವಣಗೇರಿಯ ಗುರುದೇವ ಶ್ರೀಗಳು ಆಶೀವಚನ ನೀಡಿದರು. ಮಾಜಿ ಸಚಿವ ರುದ್ರಪ್ಪ ಲಮಾಣಿ, ಎಸ್.ಎಸ್.ರಾಮಲಿಂಗಣ್ಣನವರ, ಮಂಜುನಾಥ ಓಲೇಕಾರ, ಪರಮೇಶಪ್ಪ ಮೇಗಳಮನಿ, ಏಕನಾಥ ಬಾನುವಳ್ಳಿ, ಪುಟ್ಟಪ್ಪ ಮರಿಯಮ್ಮನವರ ಮಾತನಾಡಿದರು.

   ತಾಪಂ ಅಧ್ಯಕ್ಷೆ ಗೀತಾ ಲಮಾಣಿ, ಉಪಾಧ್ಯಕ್ಷೆ ಕಸ್ತೂರವ್ವ ಹೊನ್ನಾಳಿ, ಮಾಜಿ ಅಧ್ಯಕ್ಷ ನೀಲಕಂಠಪ್ಪ ಕುಸಗೂರ, ಬಸನಗೌಡ ಮರದ, ಮಾರುತಿ ರಾಠೋಡ, ಮಂಜುನಗೌಡ ಪಾಟೀಲ, ಶಿವಾನಂದ ಕನ್ನಪ್ಪಳವರ, ಸಂತೋಷ ಪಾಟೀಲ, ಕೃಷ್ಣಪ್ಪ ಕಂಬಳಿ, ಸಣ್ಣತಮ್ಮಪ್ಪ ಬಾಕರ್ಿ, ರತ್ನಾಪುನೀತ, ಶೇಖಪ್ಪ ಬಣಕಾರ, ರುಕ್ಮಣಿಬಾಯಿ ಸಾವುಕಾರ, ಸುರೇಶ ಬೀರಾಳ, ಗಿರೀಶ ಹೆಗ್ಗಪ್ಪನವರ, ನಾಗರಾಜ ಮಾಕನೂರ, ಚಂದ್ರಪ್ಪ ಬೇಡರ, ರಾಜೇಂದ್ರ ಅಂಬಿಗೇರ, ಬಸಪ್ಪ ಎಲಜಿ, ಕೃಷ್ಣಮೂತರ್ಿ ಗುಂಗೇರ, ಶಿವಕುಮಾರ ಜಾಧವ, ಮಂಜುನಾಥ ಹಲವಾಗಲ ಸೇರಿದಂತೆ ಇತರರು ಇದ್ದರು.