ಲೋಕದರ್ಶನ ವರದಿ
ರಾಣೇಬೆನ್ನೂರು06: ಇಂದು ಪ್ಲಾಸ್ಟಿಕ್ ಭೂತ ಜಗತ್ತನ್ನು ಆವರಿಸಿ ಪ್ರಕೃತಿ ಮಾತೆಯ ಮಡಿಲು ಸೇರಿ ಜನ, ಜಾನುವಾರುಗಳ ಬದುಕನ್ನು ಕೊಲ್ಲುತ್ತಿದೆ. ಎಲ್ಲರೂ ಪ್ಲಾಸ್ಟಿಕ್ ತ್ಯಜಿಸಿ ಬಟ್ಟೆ ಇಲ್ಲವೇ ಕಾಗದದ ಚೀಲಗಳನ್ನು ಬಳಸಲು ಮುಂದಾಗಬೇಕು ಎಂದು ಗ್ರಾಸಿಂ ಕಂಪನಿ ಘಟಕದ ಮುಖ್ಯಸ್ಥ ಅಜಯಕುಮಾರ್ ಗುಪ್ತಾ ಹೇಳಿದರು.
ಜನಸೇವಾ ಟ್ರಸ್ಟ್ ಹಾಗೂ ಗ್ರಾಮ ಪಂಚಾಯ್ತಿ ಸಹಯೋಗದಲ್ಲಿ ಗಾಂಧೀ ಜಯಂತಿ ಅಂಗವಾಗಿ ತಾಲೂಕಿನ ಐರಣಿಯಲ್ಲಿ ಹಿರಿಯರಿಗಾಗಿ ಏರ್ಪಡಿಸಿದ್ದ ನಮ್ಮ ನಡಿಗೆ ಆರೋಗ್ಯದ ಕಡೆ, ಪ್ಲಾಸ್ಟಿಕ್ ನಿಷೇದ, ಸ್ವಚ್ಛತಾ ಆಂದೋಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು,
ಮೊದಲು ನಮ್ಮ ಮನೆಯ ಸುತ್ತಮುತ್ತಲ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಲು ಆದ್ಯತೆ ನೀಡಬೇಕು, ನಂತರ ಬೀದಿ, ಗ್ರಾಮದ ಕಡೆಗೆ ಹೆಚ್ಚಿನ ಗಮನ ಹರಿಸಬೇಕು. ಮಹಿಳೆಯರು ಮನೆಗಳಲ್ಲಿ ಸ್ವಚ್ಛತೆ ಕಾಪಾಡಿಕೊಂಡು ಕುಟುಂಬದ ಸದಸ್ಯರಿಗೆ ಅದರ ಅರಿವು ಮೂಡಿಸಬೇಕು ಎಂದರು.
ಕಂಪನಿಯ ಜನಸಂಪರ್ಕ ಅಧಿಕಾರಿ ಪಿ. ಶ್ರೀನಿವಾಸ್ ಮಾತನಾಡಿ, ಆಧುನಿಕ ಒತ್ತಡದ ಬದುಕಿನಲ್ಲಿ ಅರವತ್ತು ವರ್ಷ ಮೇಲ್ಪಟ್ಟ ಹಿರಿಯರು ಅನೇಕ ದೈಹಿಕ ತೊಂದರೆ ಎದುರಿಸುವಂತಾಗಿದೆ.
ಪ್ರಕೃತಿ ಮಾತೆಯನ್ನು ಗೌರವದಿಂದ ಕಾಣದಿದ್ದಲ್ಲಿ ನಮಗೆ ತೊಂದರೆ ಕಟ್ಟಿಟ್ಟ ಬುತ್ತಿ ಹಾಗಾಗಿ ರೋಗಭಾಧೆಯನ್ನು ದೂರವಾಗಿಸಲು ಪೌಷ್ಟಿಕ ಆಹಾರ ಸೇವನೆ ಜೊತೆಗೆ ಉತ್ತಮ ಪರಿಸರ ನಿಮರ್ಿಸಿಕೊಳ್ಳಬೇಕು ಎಂದರು.
ಇದೇ ಸಂದರ್ಭದಲ್ಲಿ ಹಿರಿಯರಿಗಾಗಿ ಏರ್ಪಡಿಸಿದ್ದ ನಮ್ಮ ನಡಿಗೆ ಆರೋಗ್ಯದ ಕಡೆಗೆ ಸ್ಪಧ್ರೆಯಲ್ಲಿ ವಿಜೇತರಾದ ಜಯಮ್ಮ ಕಟಿಗೇರ ಅವರಿಗೆ ಬಹುಮಾನ ವಿತರಿಸಿ ಪ್ರೋತ್ಸಾಹಿಸಲಾಯಿತು. ಬಳಿಕ ಪಿಡಿಓ ಹಾಲಸ್ವಾಮಿ ಎಚ್.ಸಿ ಸ್ವಚ್ಛತೆ ಕುರಿತು ಪ್ರತಿಜ್ಞಾವಿಧಿ ಬೋಧಿಸಿದರು.
ಗ್ರಾಪಂ ಅಧ್ಯಕ್ಷ ಬುಳ್ಳಪ್ಪ ಬಣಕಾರ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಶಿವಪ್ಪ ಕಟಗಿ, ಅರುಣ ಮಿಶ್ರಾ, ದಿನೇಶ ನಾಯ್ಕ್, ರೇಣುಕಮ್ಮ ನಾಗನೂರ, ಡಾ. ಜಿ.ಜೆ ಮೆಹೆಂದಳೆ, ನಾಗರಾಜ ಪೂಜಾರ, ರೇಣುಕಮ್ಮ, ಗೌರಮ್ಮ ತೆಗ್ಗಿನ, ಶಶಿಧರ ಕಟ್ಟೀಮನಿ, ಬಸವರಾಜ ಆನ್ವೇರಿ, ಉಮೇಶ ಬಿರಾಳ, ದೇವೇಂದ್ರಪ್ಪ ಹಿರೇಬಿದರಿ ಮತ್ತಿತರರು ಇದ್ದರು.