ಡಾ ಶಾಮನೂರು ಶಿವಶಂಕರ​‍್ಪನವರು ಲಿಂಗೈಕ್ಯರಾಗಿದ್ದಕ್ಕೆ , ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ, ಅವರು ತೀವ್ರ ಸಂತಾಪ

ಡಾ ಶಾಮನೂರು ಶಿವಶಂಕರ​‍್ಪನವರು ಲಿಂಗೈಕ್ಯರಾಗಿದ್ದಕ್ಕೆ ,  ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ, ಅವರು  ತೀವ್ರ ಸಂತಾಪ Librarian Dr. Suresh D. Horakeri expressed his deep condolences on the passing of Dr. Shamanur Shiva

                     ಹುಬ್ಬಳ್ಳಿ 24:  ನಾಡಿನ ಹಿರಿಯ ಚೇತನ, ದಾವಣಗೆರೆ ದಕ್ಷಿಣ ವಿಧಾನ ಸಭಾ ಕ್ಷೇತ್ರದ ಜನಪ್ರಿಯ ಶಾಸಕರು,  ಸತತ 54 ವರ್ಷಗಳ ಕಾಲ ಬಾಪೂಜಿ ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿಗಳು, ಅದಮ್ಯ ಚೇತನರು, ಸರ್ವ ಜನಾನುರಾಗಿಗಳು, ಧರ್ಮ ಪ್ರವರ್ತಕರಾದ, , ಅಖಿಲ್ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರು,   ಹಿರಿಯರು,ಸಮಾಜದ ಮಾರ್ಗದರ್ಶಿಗಳಾದ ಡಾ ಶಾಮನೂರು ಶಿವಶಂಕರ​‍್ಪನವರು ಲಿಂಗೈಕ್ಯರಾಗಿದ್ದಕ್ಕೆ ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಕಾರ್ಯದರ್ಶಿ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ್ಯದರ್ಶಿ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಘಟಕದ ಉಪಾಧ್ಯಕ್ಷ, ಕರ್ನಾಟಕ ವಚನ ಸಾಹಿತ್ಯ ಪರಿಷತ್ನ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ, ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ ಟ್ರಸ್ಟಿ,  ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ, ಅವರು  ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಆ ಮಹಾನ್ ದಿವ್ಯಚೇತನಕ್ಕೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

                      ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದ್ದಾರೆ ಹಾಗೂ ಕಂಬನಿ ಮಿಡಿದಿದ್ದಾರೆ. ವೀರಶೈವ ಲಿಂಗಾಯತ ಸಮುದಾಯಕ್ಕೆ ಸದಾ ಸ್ಪೂರ್ತಿ ತುಂಬುತ್ತಿದ್ದ, ಅಪರೂಪದ ಕ್ರೀಯಾಶೀಲ ಸಜ್ಜನ ರಾಜಕಾರಣಿ, ಸಂಸ್ಕಾರ, ಸಂಸ್ಖೃತಿಯ ಪ್ರತೀಕದಂತಿದ್ದ   ಶಾಸಕರಾಗಿ, ಬಾಪೂಜಿ ವಿದ್ಯಾ ಸಂಸ್ಥೆ ಗೌರವ ಕಾರ್ಯದರ್ಶಿ, ಶಾಮನೂರು ಗ್ರೂಪ್ ಆಫ್ ಇಂಡಸ್ಟ್ರೀಸನ ಅಧ್ಯಕ್ಷರಾಗಿ, ಮಾಜಿ ಸಚಿವರಾಗಿ, ರಾಜಕ್ಕೆ ಅಮೋಘ ಕೊಡುಗೆ ನೀಡಿದ ಹಿರಿಯ ಜೀವ ಡಾ.ಶಾಮನೂರು ಶಿವಶಂಕರ​‍್ಪನವರು ಎಂದು ಸ್ಮರಣೆ ಮಾಡಿದ್ದಾರೆ. ದೇವರು ಧಣಿವರಿಯದ ಧಣಿಯಾಗಿದ್ದ   ಡಾ. ಶಾಮನೂರು ಶಿವಶಂಕರ​‍್ಪ  ಅವರ ಕುಟುಂಬಕ್ಕೆ ಆದ ದುಃಖ ಭರಿಸುವ ಶಕ್ತಿ ನೀಡಲಿ  ಎಂದು ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

                   ಡಾ.ವಿ.ಬಿ.ನಿಟಾಲಿ,  ಡಾ. ಲಿಂಗರಾಜ ಡಿ. ಹೊರಕೇರಿ ಪ್ರೊ ಎಸ್‌.ಎಂ.ಸಾತ್ಮಾರ, ಡಾ. ಮಹೇಶ್ ಡಿ. ಹೊರಕೇರಿ,     ಪ್ರೊ ಎಸ್‌.ವಿ.ಪಟ್ಟಣಶೆಟ್ಟಿ, ಡಾ. ಸರ್ವಮಂಗಳಾ ಕುದರಿ, ಶಾಂತಪ್ಪ ವಿ. ಹೂಗಾರ, ಶಕುಂತಲಾ ಶಾಂತಪ್ಪ ಹೂಗಾರ,  ಬಸವರಾಜ ಡಿ. ಅಳ್ಳಗಿ,  ಸಿದ್ದಯ್ಯ ಹಿರೇಮಠ, ಮೃತ್ಯುಂಜಯ ಮಟ್ಟಿ, ಚನಬಸಪ್ಪ ಧಾರವಾಡಶೆಟ್ಟರ, ಎಸ್‌.ಐ.ನೇಕಾರ, ಶಿವಯೋಗಿ ಮುಗಬಸ್ತ,  ಸುನಂದಾ ಮುಗಭಸ್ತ, ಎಂಟಿ.ರಾಥೋಡ,  ಸುಭಾಸ ಚವ್ಹಾಣ, ಡಾ. ವಂದನಾ ಕರಾಳೆ, ಪ್ರೊ ಎಸ್‌.ಆರ್‌.ಆಶಿ, ವೀರಣ್ಣ ಹೂಲಿ, ಭಾರತಿ ವಾಲಿ, ಪ್ರೊ ಶೋಭಾ ಜಾಬಿನ, ಡಾ. ನೇತ್ರಾವತಿ ಗಬ್ಬೂರ, ಡಾ. ಬಸವಕುಮಾರತಲವಾಯಿ  ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಆ ಮಹಾನ್ ದಿವ್ಯಚೇತನಕ್ಕೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದ್ದಾರೆ ಹಾಗೂ ಕಂಬನಿ ಮಿಡಿದಿದ್ದಾರ.