ಅಲೆಮಾರಿ ಸುಡಗಾಡ ಸಿದ್ಧ ಸಮಾಜ ಬಾಂಧವರಿಗೆ ನಿವೇಶನ ಹಕ್ಕು ಪತ್ರ

ಬೈಲಹೊಂಗಲ :  ಪಟ್ಟಣದ ಇಂದಿರಾ ನಗರದ ಸಿದ್ಧರ ಕಾಲೂನಿಯಲ್ಲಿರುವ ಅಲೆಮಾರಿ ಸುಡಗಾಡ ಸಿದ್ಧ ಸಮಾಜ ಬಾಂದವರಿಗೆ ನಿವೇಶನ ಹಕ್ಕ ಪತ್ರ ಹಾಗೂ ಮೂಲಭೂತ ಸೌಕರ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿ ತಾಲ್ಲೂಕು ಮಟ್ಟದ ಅಲೆಮಾರಿ ಸುಡಗಾಡ ಸಿದ್ದ ಸಮಾಜ ಸೇವಾ ಸಂಘ ವತಿಯಿಂದ ಪ್ರತಿಭಟಿಸಿ ಉಪವಿಭಾಗಾಧಿಕಾರಿಗೆ ಗುರುವಾರ ಮನವಿ ಸಲ್ಲಿಸಲಾಯಿತು.

     ಮುಖಂಡ ಮಾರುತಿ ಕೊಂಡೂರ ಮಾತನಾಡಿ, ಬಿಸಿಎಂ ಹಾಸ್ಟೇಲ್ ಹಿಂದೆ ಪುರಸಭೆಯ 178 ರಿ.ಸ.ನಂ.ಗೈರಾನ ಜಾಗೆಯಲ್ಲಿ ಸುಮಾರು 35 ವರ್ಷಗಳಿಂದ ಅಲೆಮಾರಿ ಸುಡಗಾಡ ಸಿದ್ದ ಸಮಾಜ ಬಾಂದವರು ವಾಸವಾಗಿದ್ದೇವೆ. ಇಲ್ಲಿಯವರೆಗೆ ಸಕರ್ಾರದ ಯಾವುದೇ ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿದ್ದು, ಗುಡಾರ್, ಶೆಡ್ಡಗಳಲ್ಲಿ ವಾಸವಾಗಿದ್ದೇವೆ. 

ಜನರಿಗೆ ಬೆಳಕಿನ, ಕುಡಿಯುವ ನೀರಿನ, ಬೀದಿ ದೀಪ, ರಸ್ತೆ ವ್ಯವಸ್ಥೆ ಇಲ್ಲವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಮನವಿಗೆ ಸ್ಪಂದಿಸಿ ಸಮಾಜ ಬಾಂದವರ ಸಂಕಷ್ಟಕ್ಕೆ ನೆರವಾಗಬೇಕು. ಕೂಡಲೇ ವಸತಿ, ಮೂಲಭೂತ ಸೌಲಭ್ಯ ಕಲ್ಪಿಸಿಕೊಡಬೇಕು ಎಂದು ಮನವಿ ಮಾಡಿದರು. ಮನವಿಗೆ ಸ್ಪಂದಿಸದಿದ್ದರೆ ಉಪವಿಭಾಗಾಧಿಕಾರಿಗಳ ಕಚೇರಿ ಎದುರು ಧರಣಿ ನಡೆಸುವುದಾಗಿ ಎಚ್ಚರಿಸಿದರು. 

    ರಮೇಶ ಸಂಕಣ್ಣವರ, ಸಣ್ಣಮಲ್ಲಪ್ಪ ಡಕ್ಕನ್ನವರ, ಪಾಂಡುರಂಗ ಹಿಪ್ಪರಗಿ, ಬಾಳೇಶ ಡೊಂಕನ್ನವರ, ಕುಬೇರ ಕವಳೆ, ಸಾಯಿರಾಮ ಕವಳೆ ಇದ್ದರು.