ಆಣೂರು ಕೆರೆಗೆ ನೀರು ತುಂಬಿಸಲು ಆಗ್ರಹಿಸಿ ಪತ್ರ ಚಳುವಳಿ

ಬ್ಯಾಡಗಿ: ಆಣೂರು ಕೆರೆಗೆ ನೀರು ತುಂಬಿಸುವ ಮೂಲಕ ತಾಲೂಕಿನ 36 ಕೆರೆಗಳಿಗೆ ನೀರು ಹರಿಸುವಂತೆ ಆಗ್ರಹಿಸಿ ಪಟ್ಟಣದ ನ್ಯಾಯವಾದಿಗಳ ಸಂಘದ ಸದಸ್ಯರು ಹಾಗೂ ರೈತ ಸಂಘದ ಮಹಿಳಾ ಘಟಕಗಳು ಪತ್ರ ಚಳುವಳಿ ಆರಂಭಿಸಿದ್ದಾರೆ.

 ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಅವರಿಗೆ ಪತ್ರ ಬರೆದಿರುವ ಅವರು, ಅಸುಂಡಿ ಜಲಾನಯನದಡಿ ಆಣೂರು ಕೆರೆಯ ಮೂಲಕ ಬ್ಯಾಡಗಿ ಹಾಗೂ ಹಾವೇರಿ ತಾಲೂಕುಗಳ 36 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಅನುದಾನ ನೀಡುವಂತೆ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಕಳೆದ 30 ವರ್ಷಗಳಿಂದ ಹೋರಾಟ ನಡೆಸುತ್ತಾ ಬಂದಿದ್ದಾರೆ ಆದರೆ ಇಲ್ಲಿಯವರೆಗೂ ಯಾವುದೇ ಪ್ರಗತಿ ಕಾಣದ ಹಿನ್ನೆಲೆಯಲ್ಲಿ ಹೋರಾಟವನ್ನು ತೀವ್ರಗೊಳಿಸಲಾಗುತ್ತಿದ್ದು ಪತ್ರ ಚಳುವಳಿ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ. 

        ವಾಸ್ತವ ಮರೆ ಮಾಚುವ ಕೆಲಸ ನಡೆಯದಿರಲಿ: ಈ ಸಂದರ್ಭದಲ್ಲಿ ಮಾತನಾಡಿದ ನ್ಯಾಯವಾದಿಗಳ ಸಂಘದ ಸದಸ್ಯರು ಸದರಿ ಯೋಜನೆಗೆ ಈಗಾಗಲೇ ರೂ.212 ಕೋಟಿ ಮಂಜೂರಾಗಿರುವುದಾಗಿ ಉಸ್ತುವಾರಿ ಸಚಿವರು ಸುಳ್ಳು ಹೇಳುತ್ತಿದ್ದಾರೆ, ವಾಸ್ತವವನ್ನು ಮರೆಮಾಚುವ ಕೆಲಸ ಯಾರಿಂದಲೂ ಆಗುವುದು ಬೇಡ, ಇಲ್ಲಿಯವರೆಗೂ ಯುಟಿಪಿ ಅಧಿಕಾರಿಗಳಿಂದ 0.923 ಟಿಎಂಸಿ ನೀರು ಬಳಕೆ ಮಾಡುವ ಕುರಿತು ಅನುಮತಿ ಕೇಳಲಾಗಿದೆ, ನದಿ ನೀರು ಬಳಕೆ ಮತ್ತು ಹಂಚಿಕೆ ನಿಯಮಾವಳಿಗಳ ಪ್ರಕಾರ ಯಾವ ತಿಂಗಳಿನಲ್ಲಿ ನೀರು ಬಳಸಬಹುದು ಮತ್ತು ಎಷ್ಟು ಅಡಿ ನೀರು ಎತ್ತರ ಬಂದ ಮೇಲೆ ಬಳಕೆ ಮಾಡಬೇಕು, ತುಂಗಾಭದ್ರಾ ದಿಂದ ಕುಡಿಯುವ ನೀರು (ಡ್ರಿಂಕಿಂಗ್ ವಾಟರ್) ಉದ್ದೇಶಕ್ಕಾಗಿ ಅನುಮತಿ ಪಡೆಯಲಾಗಿದೆಯೇ ಅಥವಾ ನೀರಾವರಿ (ಇರಿಗೇಶನ್) ಉದ್ದೇಶಕ್ಕಾಗಿ ಕೇಳಲಾಗು ತ್ತಿದೆಯೇ, ಎಷ್ಟು ವ್ಯಾಸದ ಪೈಪ್ಲೈನ್ ಬಳಕೆ ಮಾಡಲಾಗುತ್ತಿದೆ ಎಷ್ಟು ಆಳಕ್ಕೆ ಪೈಪ್ ಹಾಕಲಾಗುತ್ತಿದೆ, ಹಾಗೂ ಅದರ ರೂಟ್ ಮ್ಯಾಪ್ ಕೊಡಿ ಹೀಗೆ ಹತ್ತು ಹಲವು ಪ್ರಶ್ನೆಗಳ ಮಳೆಯನ್ನೇ ಸುರಿಸಿದರು. ಆದರೆ ಜಿಲ್ಲಾಧಿಕಾರಿಗಳ ಮಾತ್ರ ಇದ್ಯಾವುದಕ್ಕೂ ಸಮರ್ಪಕ ಉತ್ತರವನ್ನ ನೀಡಲಿಲ್ಲ ಬದಲಾಗಿ ನಿಮ್ಮವನಾಗಿ ನನ್ನ ಪ್ರಯತ್ನವನ್ನು ಮಾಡುವೆ ಎಂದಷ್ಟೇ ಹೇಳಿದರು.

   ಇನ್ಮುಂದೆ ನೀರಿಗಾಗಿ ಆತ್ಮಹತ್ಯೆ: ರೈತ ಸಂಘದ ಮುಖಂಡೆ ಫರೀದಾಬಾನು ನದೀಮುಲ್ಲಾ ಮಾತನಾಡಿ, ಕುಡಿಯುವ ನೀರಿಗಾಗಿ ಇಡೀ ಕುಟುಂಬವೇ ಮೂರು ಕಿ.ಮೀ.ಚಲಿಸಬೇಕಾಗಿದೆ.

   ನೀರಿ ಲ್ಲದೇ ಗ್ರಾಮದ ಶಾಲೆಯಲ್ಲಿ ಮಕ್ಕಳಿಗೆ ಬಿಸಿಯೂಟ ಯೋಜನೆ ಸ್ಥಗಿತಗೊಳಿಸಲಾಗಿದೆ, ತಮ್ಮ ನಿದರ್ೇಶನದಂತೆ 600 ಅಡಿಗಿಂತ ಹೆಚ್ಚು ಕೊರೆಯುವಂತಿಲ್ಲ ಆದರೆ ಸಾವಿರ ಅಡಿಗಳಷ್ಟು ಆಳಕ್ಕೆ ಕೊರೆದರೂ ನೀರು ಸಿಗುತ್ತಿಲ್ಲ, ಹಣ ಕೊಟ್ಟರೂ ಸಿಗದ ವಸ್ತು ನೀರು ಎನ್ನುವಂತಾಗಿದೆ.

 ನಮ್ಮ ಅಳಲನ್ನು ಯಾರ ಬಳಿ ತೋಡಿಕೊಳ್ಳಬೇಕು, ನಾವ್ಯಾರು ಸಾಲಮನ್ನಾ ಕೇಳುತ್ತಿಲ್ಲ ಮತ್ತು ಅದಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳುವಂತ ಹ ಹೇಡಿಗಳಲ್ಲ ಆದರೆ ಒಂದು ವೇಳೆ ಏನಾದರೂ ಆತ್ಮಹತ್ಯೆಯಂತಾದೇ ಅದು ಕುಡಿಯುವ ನೀರಿಗಾಗಿಯೇ ಎಂದು ಎಚ್ಚರಿಸಿದರು.

   ನ್ಯಾಯವಾದಿಗಳ ಸಂಘದ ಪ್ರಕಾಶ ಬನ್ನಿಹಟ್ಟಿ ಸೇರಿದಂತೆ ಇನ್ನಿತರ ಸದಸ್ಯರು ರೈತ ಸಂಘ ಮಹಿಳಾ ಘಟಕದ ಸದಸ್ಯರಾದ ರೇಣುಕಾ ಉಪ್ಪಿನವರ ಚೌಡವ್ವ ಚಿನ್ನಮ್ಮನವರ, ಚಂದ್ರಕಲಾ ರಾವಳ ಹಾಗೂ ಇನ್ನಿತರರು ಉಪಸ್ಥಿತರಿದ್ದರು.