ಕಾಗವಾಡ 24: ಮಹಿಳೆಯರು ಯಾರ ಮೇಲೂ ಅವಲಂಬಿತರಾಗದೇ ಸರ್ಕಾರದ ಯೋಜನೆಗಳು ಹಾಗೂ ಕಡ್ಡಾಯ ಶಿಕ್ಷಣದ ಮೂಲಕ ಸ್ವಾವಲಂಬಿಯಾಗಿ ಬದುಕು ನಡೆಸಬೇಕು ಎಂಬುದು ಸರ್ಕಾರದ ಉದ್ದೇಶವಾಗಿದೆಯೆಂದು ಶಾಸಕ ರಾಜು ಕಾಗೆ ಹೇಳಿದ್ದಾರೆ.
ಅವರು, ಗುರುವಾರ ದಿ. 24 ರಂದು ತಾಲೂಕಿನ ಐನಾಪುರ ಪಟ್ಟಣ ಪಂಚಾಯತಿಯಲ್ಲಿ ಆಯೋಜಿಸಿದ್ದ ಸನ್ 2022-23 ನೇ ಸಾಲಿನ ಮುಖ್ಯಮಂತ್ರಿಗಳ ನಗರರೋತ್ಥಾನ ಯೋಜನೆಯ ಹಂತ-4 ರಲ್ಲಿ ಆಯ್ಕೆಯಾದ 410 ಮಹಿಳಾ ಫಲಾನುಭವಿಗಳಿಗೆ ಹೊಲಿಗೆ ಯಂತ್ರ ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ 10 ಪೌರ ಕಾರ್ಮಿಕರಿಗೆ ಬ್ಯಾಟರಿ ಹಾಗೂ ಇನ್ವಟೇರಗಳ ವಿತರಣೆ ಮತ್ತು 15 ನೇ ಹಣಕಾಸು ಯೋಜನೆಯಡಿ ಖರೀದಿಸಿದ ಟ್ರಾಕ್ಟರ್ ಹಾಗೂ ಟೇಲರ್ ಉದ್ಘಾಟಿಸಿ ಮಾತನಾಡುತ್ತಿದ್ದರು. ವಿರೋಧ ಪಕ್ಷಗಳು ಗ್ಯಾರಂಟಿ ಯೋಜನೆಯ ಆರೋಪದ ನಡುವೆಯೂ ಹಲವಾರ ಜನಪರ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಕಾಗವಾಡ ಮತಕ್ಷೇತ್ರ ಒಂದರಲ್ಲಿಯೇ ಇಲ್ಲಿಯ ವರಗೆ ಸುಮಾರ 400 ಕೋಟಿ ಗ್ಯಾರಂಟಿಗೆ ಹಣವನ್ನು ನೀಡಲಾಗಿದೆ. ಪ್ರತಿ ತಿಂಗಳು ಸುಮಾರ 12 ಕೋಟಿ ಹಣವನ್ನು ನೀಡಲಾಗುತ್ತಿದೆ ಇದನ್ನು ಸಹಿಸದ ವಿರೋಧ ಪಕ್ಷದವರು ಸುಕಾಸುಮ್ಮನೆ ಆರೋಪ ಮಾಡುತ್ತಿದ್ದಾರೆ ಎಂದರು.
ಪ.ಪಂ. ಅಧ್ಯಕ್ಷೆ ಸರೋಜಿನಿ ಗಾಣಿಗೇರ, ಸದಸ್ಯರಾದ ಅರುಣ ಗಾಣಿಗೇರ, ಪ್ರವೀಣ ಗಾಣಿಗೇರ, ಸಂಜು ಭಿರಡಿ, ಸುರೇಶ ಅಡಿಶೇರಿ, ಕುಮಾರ ಜಯಕರ, ಸಂಜಯ ಕುಸುನಾಳೆ, ಮುಖ್ಯಾಧಿಕಾರಿ ಮಹಾಂತೇಶ ಕೌಲಾಪೂರ, ಮುಖಂಡರಾದ ಸುಭಾಷ ಪಾಟೀಲ, ಸದಾಶಿವ ಗಾಣಿಗೇರ, ಸುರೇಶ ಗಾಣಿಗೇರ, ಪ್ರಕಾಶ ಕೋರ್ಬು, ಸುರೇಶ ಅಡಿಶೇರಿ, ಚಮ್ಮನರಾವ ಪಾಟೀಲ, ಉಮ್ಮಾಜಿ ನಡೋಣಿ, ಗುರುರಾಜ ಮಡಿವಾಳ, ಅರವಿಂದ ಕಾರ್ಚಿ, ಸುನೀಲ ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.