ಕುಷ್ಠರೋಗ ಮುಕ್ತ ಭಾರತ ನಿರ್ಮಿಸುವಲ್ಲಿ ಕೈ ಜೋಡಿಸೋಣ: ಗುತ್ತೆಮ್ಮನವರ

ಲೋಕದರ್ಶನ ವರದಿ

ಶಿರಹಟ್ಟಿ 05: ಈಗಿನ ಸಮಾಜದಲ್ಲಿ ಜನರು ಕುಷ್ಠರೋಗಿಗಳನ್ನು ಅಸ್ಪ್ರಶ್ಯತೆಯಿಂದ ಕಾಣುವ ಪರಿಸ್ಥಿತಿ ಎದುರಾಗಿದ್ದು ಅದು ಒಂದು ರೋಗ ಮಾತ್ರವಾಗಿದ್ದು ಅವರನ್ನು ಕೈಕುಲುಕುವುದರಿಂದ ಹಾಗೂ ಅವರೊಂದಿಗೆ ಒಡನಾಟವಿಟ್ಟುಕೊಳ್ಳುವುದರಿಂದ ಕುಷ್ಠರೋಗ ಹರಡುವುದಿಲ್ಲ ಅವರೂ ಸಹ ಈ ಸಮಾಜದಲ್ಲಿ ಮುಕ್ತ ಜೀವನ ನಡೆಸುವ ಹಕ್ಕಿದೆ ಹಾಗೂ ಅವರನ್ನು ಗೌರವದಿಂದ ಕಂಡು ಇನ್ನು ಮುಂದೆ ಕುಷ್ಠರೋಗ ಮುಕ್ತ ಬಾರತ ನಿಮರ್ಿಸುವಲ್ಲಿ ಕೈಜೋಡಿಸೋಣ ಎಂದು ಬೆಳ್ಳಟ್ಟಿ ಗ್ರಾಮ ಪಂಚಾಯಿತಿ ಸದಸ್ಯ ಮೋಹನ ಗುತ್ತೆಮ್ಮನವರ ಕರೆ ನೀಡಿದರು.

ಅವರು ತಾಲೂಕಿನ ಬೆಳ್ಳಟ್ಟಿ ಗ್ರಾಮ ಪಂಚಾಯಿತಿಯಲ್ಲಿ ನಡೆದ ಕುಷ್ಠರೋಗ ಅರಿವು ಅಂದೋಲನ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು. 

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿಯ ಸದಸ್ಯರು, ಆಶಾ ಕಾರ್ಯಕತರ್ೆಯರು, ಊರಿನ ಹಿರಿಯರು ಹಾಗೂ ಯುವಕರು ಉಪಸ್ಥಿತರಿದ್ದರು.