ಸಂವಿಧಾನದ ಆಶಯದಂತೆ ಸಮಾನ ಸಮಾಜ ನಿರ್ಮಾಣಕ್ಕೆ ಬದ್ಧರಾಗೋಣ: ಜಿಲ್ಲಾಧಿಕಾರಿ

ಹಾವೇರಿ27: ಭಾರತ ಇಂದು ವಿಶ್ವದಲ್ಲಿಯೇ ಒಂದು ಅತ್ಯಂತ ದೊಡ್ಡದಾದ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ಸಂವಿಧಾನ ಜಾರಿಗೆ ಬಂದ  ಜನವರಿ 26 ರ ಈ ದಿನದಂದು ನಾವೆಲ್ಲ ಸಂವಿಧಾನದ ಆಶಯದಂತೆ ಸಮಾನತೆಯ ಸಮಾಜ ನಿರ್ಮಾಣಕ್ಕೆ ಬದ್ಧರಾಗಬೇಕಾಗಿದೆ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು ಕರೆ ನೀಡಿದರು.

ಹಾವೇರಿ ನಗರದ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ 71ನೇ ಗಣರಾಜ್ಯೋತ್ಸವ ಅಂಗವಾಗಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. 

ಗಣತಂತ್ರದ ಅತಿದೊಡ್ಡ ಹಬ್ಬವನ್ನು ಆಚರಿಸುತ್ತಿರುವ ಈ ಹೊತ್ತಿನಲ್ಲಿ ಅಸಮಾನತೆ ರಹಿತ ಸಮಾಜ ನಿರ್ಮಾಣಕ್ಕೆ, ಶಾಸಕಾಂಗ, ಕಾರ್ಯಂಗ, ನ್ಯಾಯಾಂಗ ಮತ್ತು ಪತ್ರಿಕಾರಂಗ ತನ್ನ ಹೊಣೆಗಾರಿಕೆ ಮತ್ತು ಕರ್ತವ್ಯವನ್ನು ಸರಿಯಾಗಿ ನಿರ್ವಹಿಸುತ್ತಿದೆಯೇ ಎಂಬ ಬಗ್ಗೆ ಅವಲೋಕಿಸಿ ಅದಕ್ಕೆ ತಕ್ಕಂತೆ ಕಾರ್ಯ ನಿರ್ವಹಿಸಬೇಕಾಗಿದೆ. ಇದೇ ಸಂವಿಧಾನಕ್ಕೆ ಸಲ್ಲಿಸಬಹುದಾದ ದೊಡ್ಡ ಗೌರವ. ಈ ನಿಟ್ಟಿನಲ್ಲಿ ನಾವೆಲ್ಲ ಸಂಕಲ್ಪಮಾಡೋಣ ಎಂದು ಹೇಳಿದರು.

ಭಾರತದ ಆಡಳಿತಕ್ಕೆ ಕೈಗನ್ನಡಿಯಾಗಿರುವ ಸಂವಿಧಾನ 1950ರ ಜನವರಿ 26 ರಂದು ಜಾರಿಗೊಳಿಸಲಾಯಿತು. 395 ವಿಧಿಗಳು, 8 ಅನುಸೂಚಿಗಳು, 22 ಅಧ್ಯಯಗಳ ಒಳಗೊಂಡ ಭಾರತ ಸಂವಿಧಾನ ಅಂಗೀಕರಿಸಲಾಗಿದೆ. 26-01-2020ರ ಇಂದಿಗೆ ಸಂವಿಧಾನ ಅಂಗೀಕರಿಸಿ 70 ವರ್ಷಗಳು ಪೂರ್ಣಗೊಂಡಿವೆ ಎಂದು ಹೇಳಿದರು.

ಭಾರತ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು "ಸಮಾನತೆಯ ರಥವನ್ನು ಇಲ್ಲಿಯವರೆಗೆ ಎಳುದುಕೊಂಡು ಬಂದಿದ್ದೇನೆ, ಸಾಧ್ಯವಾದರೆ ಈ ರಥವನ್ನು ಒಂದಿಂಚಾದರು ಮುಂದಕ್ಕೆ ತಳ್ಳಿ. ಆದರೆ ಯಾವುದೇ ಕಾರಣಕ್ಕೂ ಹಿಂದಕ್ಕೆ ತಳ್ಳಬೇಡಿ"  ಎಂದು ಹೇಳಿದ್ದಾರೆ. ಹಾಗಾಗಿ ನಾವು ಸಮಾನತೆಯ ಹಾದಿಯಲ್ಲಿ ನಡೆಯಬೇಕಾದ ಅಗತ್ಯ ಇಂದು ಬಹಳವಾಗಿದೆ. ಸಂವಿಧಾನದ ಅಗತ್ಯತೆ, ಪ್ರಸ್ತುತತೆ ಹಿಂದೆಂದಿಗಿಂತಲೂ ಈಗ ಎದ್ದು ಕಾಣುತ್ತದೆ ಎಂದು ಹೇಳಿದರು.

ಸಂವಿಧಾನದ ಆಶಯಗಳ  ಸಾಕಾರಗೊಳಿಸಲು ಸಮೃದ್ಧ ಕರ್ನಾಟಕ ನಿರ್ಮಾಣದ ಸಂಕಲ್ಪದೊಂದಿಗೆ ಸರ್ಕಾರ  ಕಾಯರ್ೋನ್ಮುಖವಾಗಿದೆ.ಸರ್ಕಾರದ  ಆಶಯದಂತೆ ಜನ ಕಲ್ಯಾಣ ಕಾರ್ಯಕ್ರಮಗಳು ಪರಿಣಾಮಕಾರಿಯಾಗಿ ಜಿಲ್ಲೆಯಲ್ಲಿ ಜಾರಿಗೊಳಿಸಲಾಗಿದೆ. ಸಮೃದ್ಧ ಸಮಾನ ಸಮಾಜ ನಿರ್ಮಾಣಕ್ಕೆ ಪೂರಕವಾಗಿ ಕಾರ್ಯನಿರ್ವಹಿಸಲಾಗುತ್ತಿದೆ.

ಜಿಲ್ಲೆಯಲ್ಲಿ ನೆರೆಹಾವಳಿ ಹಾಗೂ ಅತಿವಷ್ಟಿಯಿಂದ 22,899 ಮನೆಗಳು ಹಾನಿಯಾಗಿದ್ದು, ಎ ಮತ್ತು ಬಿ ವರ್ಗದ ಮನೆಗಳಿಗೆ ತಲಾ ಒಂದು ಲಕ್ಷ ರೂ.ನಂತೆ ಮೊದಲ ಕಂತಾಗಿ ಸಂತ್ರಸ್ಥರಿಗೆ ಪರಿಹಾರ ಪಾವತಿಸಿದೆ ಹಾಗೂ ಸಿ ವರ್ಗದ 14,291 ಮನೆಗಳಿಗೆ ತಲಾ 50 ಸಾವಿರ ರೂ. ನಂತೆ ಸಂತ್ರಸ್ಥರಿಗೆ ಪರಿಹಾರ ಪಾವತಿಸಲಾಗಿದೆ. ಹಾನಿಗೊಳಗದ  ಎ ಮತ್ತು ಬಿ ವರ್ಗದ ಮನೆಗಳ ಪುನರ್ ನಿಮರ್ಾಣಕ್ಕೆ 5 ಲಕ್ಷ ರೂ.ಗಳನು ನಾಲ್ಕು ಕಂತುಗಳಲ್ಲಿ, ಭಾಗಶಃ ಹಾನಿಗೊಳಗಾದ ಬಿ ವರ್ಗದ ಮನೆಗಳನ್ನು ಪೂರ್ಣವಾಗಿ ಕೆಡವದೇ ದುರಸ್ತಿ ಮಾಡಿಕೊಳ್ಳುವದಾದಲ್ಲಿ   ರೂ. 3 ಲಕ್ಷ ಪರಿಹಾರವನ್ನು ಎರಡು ಕಂತುಗಳಲಿ ಪಾವತಿಸಲು ಸಕರ್ಾರ ಆದೇಶಿಸಿದೆ. ಜಿಲ್ಲೆಯಲ್ಲಿ ಹಾನಿಯಾದ ಎ ಮತ್ತು ಬಿ ವರ್ಗದ ಎಲ್ಲ ಮನೆಗಳನ್ನು ಮೂರು ದಿನಗಳ ಒಳಗಾಗಿ ಕಾಮಗಾರಿ ಆರಂಭಿಸಲು ಸೂಚಿಸಲಾಗಿದೆ. ಉಸ್ತುವಾರಿಗಾಗಿ ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದು ಹೇಳಿದರು.

ಅತಿವೃಷ್ಟಿ ಹಾಗೂ ನೆರೆಯಿಂದ ಹಾನಿಯಾದ ರಸ್ತೆಗಳ ದುರಸ್ತಿಗಾಗಿ 272 ಕಾಮಗಾರಿಗಳಿಗೆ ಅಂದಾಜು 482.16 ಲಕ್ಷ ರೂ. ಸಿಡಿ-ಕೆರೆ ಕಾಲುವೆ 54 ಕಾಮಗಾರಿಗಳಿಗೆ 65.62 ಲಕ್ಷ ರೂ., 1458 ಶಾಲಾ ಕೊಠಡಿಗಳ ದುರಸ್ತಿಗೆ 1809.52 ಲಕ್ಷ ರೂ., 275 ಅಂಗನವಾಡಿ ಕಟ್ಟಡಗಳ ದುರಸ್ತಿಗೆ 276.68 ಲಕ್ಷ ರೂ. ಹಾಗೂ 115 ಕುಡಿಯುವ ನೀರಿನ ಟ್ಯಾಂಕರ್ಗಳ ಸ್ವಚ್ಛತೆಗಾಗಿ 37.7 ಲಕ್ಷ ರೂ.ಗಳನ್ನು ಮಂಜೂರು ಮಾಡಲಾಗಿದೆ. ಸರ್ಕಾರ  ಮನೆಹಾನಿ ಪರಿಹಾರ ವಿತರಣೆಗೆ 90 ಕೋಟಿ ರೂ ಹಾಗೂ ಮೂಲಭೂತ ಸೌಕರ್ಯಗಳ ದುರಸ್ತಿಗೆ 35 ಕೋಟಿ ರೂ. ಬಿಡುಗಡೆಮಾಡಿದೆ ಎಂದು ತಿಳಿಸಿದರು.

ಪ್ರಸಕ್ತ ವರ್ಷದಲ್ಲಿ 2018-19ನೇ ಸಾಲಿನ ಮುಂಗಾರು ಹಂಗಾಮಿನ ಕನರ್ಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆಯಡಿ ಜಿಲ್ಲೆಯ 75,347  ರೈತರಿಗೆ 160.50 ಕೋಟಿ ರೂ. ಬೆಳೆ ವಿಮೆ ಮಂಜೂರಾಗಿದೆ. ಈ ಪೈಕಿ 70,078 ರೈತರಿಗೆ 149.85 ಕೋಟಿ ರೂ. ಬೆಳೆ ವಿಮೆ ಪರಿಹಾರ ಪಾವತಿಸಲಾಗಿದೆ. ಬಾಕಿ ರೈತರಿಗೆ ಪರಿಹಾರ ಪಾವತಿ ಪ್ರಗತಿಯಲ್ಲಿದೆ. ಹಿಂಗಾರು ಹಂಗಾಮಿನಲ್ಲಿ 6,636 ರೈತರಿಗೆ 8.45 ಕೋಟಿ ರೂ. ಮಂಜೂರಾಗಿದ್ದು,  ಬೆಳೆವಿಮೆ ಮಂಜೂರಾದ ಎಲ್ಲ ರೈತರಿಗೂ ಪರಿಹಾರ ಮೊತ್ತ ವಿತರಿಸಲಾಗಿದೆ. ಕೃಷಿ ಉತ್ಪನ್ನ ಮಾರಾಟ ಸಮಿತಿಯಿಂದ ಪ್ರಸಕ್ತ ವರ್ಷ ಬೆಂಬಲ ಬೆಲೆಯೋಜನೆಯಡಿ ಹತ್ತಿ ಖರೀದಿಗಾಗಿ  ಹಾವೇರಿ, ರಾಣೇಬೆನ್ನೂರು,  ಭತ್ತ ಖರೀದಿಗಾಗಿ ಹಾನಗಲ್, ಹಿರೇಕೆರೂರು, ಶಿಗ್ಗಾಂವಗಳಲ್ಲಿ ಖರೀದಿ ಕೇಂದ್ರ ತೆರೆಯಲಾಗಿದೆ ಎಂದು ಹೇಳಿದರು.

ಪ್ರಸಕ್ತ ಸಾಲಿನಲ್ಲಿ ಮನರೇಗಾ ಯೋಜನೆಯಡಿ 19755.00 ಲಕ್ಷ ರೂ. ಹಂಚಿಕೆಯಾಗಿದೆ. 45 ಲಕ್ಷ ಮಾನವದಿನಗಳ ಸೃಜನೆಯ ಗುರಿ ನಿಗಧಿಪಡಿಸಲಾಗಿದೆ. ಈವರೆಗೆ 12177.18 ಲಕ್ಷ ರೂ. ವೆಚ್ಚಮಾಡಲಾಗಿದೆ. 25,92,857 ಮಾನವ ದಿನಗಳನ್ನು ಸೃಜಿಸಲಾಗಿದೆ ಎಂದು ಹೇಳಿದರು.

  ಮಾತೃಪೂರ್ಣ, ಪ್ರಧಾನಮಂತ್ರಿ ಮಾತೃ ಒಂದನಾ, ಮುಖ್ಯ ಮಂತ್ರಿಗಳ ಮಾತೃಶ್ರೀ ಯೋಜನೆಯಡಿ 31,116 ಗಭರ್ಿಣಿ ಹಾಗೂ ಬಾಣಂತಿಯರಿಗೆ ನೆರವು ಒದಗಿಸಲಾಗಿದೆ. ಜಿಲ್ಲೆಯ ಪರಿಶಿಷ್ಟ ಜಾತಿ ವಿದ್ಯಾಥರ್ಿಗಳಿಗೆ 2.50 ಕೋಟಿ ರೂ. ವಿದ್ಯಾಥರ್ಿ ವೇತನ ಮಂಜೂರು ಮಾಡಲಾಗಿದೆ. ದೌರ್ಜನ್ಯ ಪ್ರಕರಣದಲ್ಲಿ ನೊಂದ ಪರಿಶಿಷ್ಟ ಜಾತಿ ಸಂತ್ರಸ್ತರಿಗೆ 87.18 ಲಕ್ಷ ರೂ. ಪರಿಹಾರಧನ ಮಂಜೂರು ಮಾಡಲಾಗಿದೆ. ಅಂತರಜಾತಿ ವಿವಾಹ ದಂಪತಿಗಳಿಗೆ 59 ಲಕ್ಷ ರೂ. ಸಹಾಯಧನ ನೀಡಲಾಗಿದೆ. ಜಿಲ್ಲೆಯ  ವಸತಿ ರಹಿತರಿಗೆ 50,010 ಮನೆಗಳು ಮಂಜೂರಾಗಿವೆ. 16795 ಮನೆಗಳು ಪೂರ್ಣಗೊಂಡಿವೆ. ಬಾಕಿ ಮನೆಗಳು ಪ್ರಗತಿಯಲ್ಲಿವೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಜನಸ್ನೇಹಿ ಪೊಲೀಸ್ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಮಹಿಳೆಯರ ಮತ್ತು ಮಕ್ಕಳ ರಕ್ಷಣೆ ಹಾಗೂ ಅವರಿಗೆ ಆತ್ಮ ರಕ್ಷಣೆ ಕೌಶಲ್ಯ ತರಬೇತಿ ನೀಡಲು ವರದಾ ಪಡೆ ರಚಿಸಲಾಗಿದೆ. ಮಹಿಳಾ ಪೊಲೀಸರೇ ಒಳಗೊಂಡ ವರದಾ ಪಡೆಗೆ ಸಾರ್ವತ್ರಿಕವಾಗಿ ಮೆಚ್ಚುಗೆ ವ್ಯಕ್ತವಾಗಿದೆ. ಮಹಿಳೆಯರ ಮತ್ತು ಮಕ್ಕಳ ಮೇಲಿನ  ದೌರ್ಜನ್ಯ ಪ್ರಕರಣಗಳು ಇಳಿಮುಖವಾಗಿವೆ ಎಂದು ಹೇಳಿದರು.

ಇದಕ್ಕೂ ಪೂರ್ವದಲ್ಲಿ ಆಕರ್ಷಕ ಪಥಸಂಚಲನ, ಧ್ವಜವಂದನೆ, ಮೈಲಾರ ಮಹದೇವಪ್ಪ ವೃತ್ತದಿಂದ ವಿದ್ಯಾರ್ಥಿಗಳ ಜಾಥಾ ಜರುಗಿದವು. ಸಮಾರಂಭದಲ್ಲಿ ಎರಡು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಂದ ಆಕರ್ಷಕ ಪಥಸಂಚಲನ, ದೇಶಭಕ್ತಿಗೀತೆಗಳಿಗೆ ನೃತ್ಯ ಕಾರ್ಯಕ್ರಮಗಳು, ವಿವಿಧ ಇಲಾಖೆಯ ಸ್ತಬ್ದಚಿತ್ರಗಳ ಮೆರವಣಿಗೆ, ಸಾಧಕರಿಗೆ ಸನ್ಮಾನ ಕಾರ್ಯಕ್ರಮಗಳು ಜರುಗಿದವು.

ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಸ್.ಕೆ.ಕರಿಯಣ್ಣನವರ, ಶಾಸಕರಾದ ನೆಹರು ಓಲೇಕಾರ, ನಗರಾಭಿವೃದ್ಧಿಕಾರ ಅಧ್ಯಕ್ಷ ಶಿವಕುಮಾರ ಸಂಗೂರ, ತಾಲೂಕು ಪಂಚಾಯತಿ ಅಧ್ಯಕ್ಷೆ ಶ್ರೀಮತಿ ಕಮಲವ್ವ ಹೇಮನಗೌಡ ಪಾಟೀಲ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರಮೇಶ ದೇಸಾಯಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ.ದೇವರಾಜ, ಅಪರ ಜಿಲ್ಲಾಧಿಕಾರಿ ಯೋಗೇಶ್ವರ, ಉಪ ವಿಭಾಗಾಧಿಕಾರಿ ಡಾ.ಎನ್.ತಿಪ್ಪೇಸ್ವಾಮಿ, ತಹಶೀಲ್ದಾರ ಜಿ.ಎಸ್.ಶಂಕರ ಇತರರು ಉಪಸ್ಥಿತರಿದ್ದರು.