ಮಕ್ಕಳನ್ನು ದೇಶ ಸೇವೆಗಾಗಿ ಕಳುಹಿಸುವ ಮಹಾದಾಸೆ ನಮ್ಮದಾಗಲಿ: ಡಾ. ಗುರುಲಿಂಗ ಮಹಾಸ್ವಾಮಿಗಳು

ಲೋಕದರ್ಶನ ವರದಿ

ಶಿರಹಟ್ಟಿ 26: ಕತ್ತಲು ಕಳೆಯಲು ಜ್ಯೋತಿ ಬೇಕು ಅದರಂತೆ ಮನುಷ್ಯನ ಅಂಧಕಾರವನ್ನು ಹೋಗಲಾಡಿಸಲು ಶರಣರ ಸಂತರ ಉಪದೇಶಗಳು ಬೇಕು ಎಂದು ಹಾವೇರಿ ಜಿಲ್ಲೆಯ ಅಗಡಿ ಗ್ರಾಮದ ಅಕ್ಕಿ ಮಠದ ಮು.ನಿ.ಪ್ರ ಡಾ. ಗುರುಲಿಂಗ ಮಹಾಸ್ವಾಮಿಗಳು ಹೇಳಿದರು.

ಪಟ್ಟಣದ ಮ್ಯಾಗೇರಿ ಓಣಿಯಲ್ಲಿ ಕರಿಶಿದ್ದೇಶ್ವರ ಸೇವಾ ಸಮಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಗದಗ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ 13ನೇ ವರ್ಷದ  ಶ್ರೀ ಕರಿಸಿದ್ದೇಶ್ವರ ಕಾರ್ತೆಕೋತ್ಸದಲ್ಲಿ ಅವರು ಮಾತನಾಡಿದರು. ಮೊಬೈಲ್ ಹಾಗೂ ದುರದರ್ಶನಗಳ ಕಾರಣ ಜನರಿಂದ ಧರ್ಮ ದರ್ಶನ ದುರವಾಗುತ್ತಿದೆ. ಮಾನವಿಯ ಮೌಲ್ಯಗಳಿಂದ ಮನುಷ್ಯ ದುರವಾಗುತ್ತಿರುವದು ವಿಶಾದಕರ. ಮಕ್ಕಳು ಇಂಜನೀಯರ್ ಅಥವಾ ಡಾಕ್ಟರ್ ಆಗಲಿ ಎಂದು ಆಸೆಪಡುವ ಪಾಲಕರು ನನ್ನ ಮಗುವನ್ನು ಒಳ್ಳೆಯ ರೈತ ಅಥವಾ ದೇಶ ಕಾಯುವ ಸೈನೀಕನನ್ನಾಗಿಸುವೆ ಎಂದು ಬಯಸುವದರಲ್ಲಿ ನಿಜವಾಗಿಯು ದೇಶದ ಹಿತ ಅಡಗಿದೆ.  ಮಕ್ಕಳಿಗೆ ವಿದ್ಯೆಯೊಂದಿಗೆ ಒಳ್ಳೆಯ ಸಂಸ್ಕಾರ ಕೊಡುವದು ಇಂದಿನ ಪಾಲಕರ ಕರ್ತವ್ಯವಾಗಿದೆ ಎಂದು ಹೇಳಿದರು.

ನಂತರ ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಮಾತನಾಡಿ ಕಾತರ್ಿಕ ಜ್ಯೊತಿಯಂತೆ ನಮ್ಮೇಲ್ಲರ ಮನದ ಜ್ಯೊತಿ ಬೆಳಗಬೇಕಾದರೆ ನಾನು ನನ್ನದು ಎನ್ನುವದಕ್ಕಿಂತ ನಾವು ನಮ್ಮದು ಎಂದು ಅರಿತು ಬಾಳಿದರೆ ಸಾಧ್ಯ ಎಂದು ಹೇಳಿದರು.

ಕರಿಸಿದ್ದೇಶ್ವರ ಕಾರ್ತೆಕೋತ್ಸದ ನಿಮಿತ್ಯ ಡೊಳ್ಳಿನ ಪದಗಳ ಸ್ಪದರ್ೆಯನ್ನು ಆಯೋಜಿಸಲಾಗಿತ್ತು. ಸ್ಪಧರ್ೆಯಲ್ಲಿ ವಿಜೇತರಾದ ತಂಡದವರಿಗೆ ಬಹುಮಾನ ನೀಡಿ ಸತ್ಕರಿಸಲಾಯಿತು.

ಮಾಜಿ ಶಾಸಕ ಶಂಕರಗೌಡ ಪಾಟೀಲ, ಕರಿಶಿದ್ದೇಶ್ವರ ಸೇವಾ ಸಮಿತಿ ಅಧ್ಯಕ್ಷ ಸಂತೋಷ ಕುರಿ, ಮಂಜುನಾಥ ಘಂಟಿ, ಕೆ.ಎ.ಬಳಿಗಾರ, ನಾಗರಾಜ ಲಕ್ಕುಂಡಿ, ಸೋಮನಗೌಡ ಮರಿಗೌಡ್ರ, ಮಾಹಾಂತೇಶ ದಶಮನಿ, ನಿಂಗಪ್ಪ ಹಮ್ಮಗಿ, ಬಸವಣ್ಣಪ್ಪ ತುಳಿ, ಕಲ್ಲಪ್ಪ ಹಡಪದ, ಜಗದೀಶ ಇಟ್ಟೆಕಾರ, ರಾಜು ಮಡಿವಾಳರ, ದೇವಪ್ಪ ವರವಿ, ಚಂದ್ರಶೇಕರ ಜೋಗೇರ, ಮಲ್ಲಪ್ಪ ಗೊರವರ ಮುಂತಾದವರು ಇದ್ದರು.