ಬಾಗಲಕೋಟೆ08: ಮಹಿಳೆಯರು ದುರ್ಬಲರು, ಅಬಲೆಯರು ಎಂಬ ಕಾಲ ಇದಲ್ಲ ಪ್ರಸ್ತುತವಾಗಿ ಪುರುಷರಿಗೆ ಸಮನಾಗಿ ಬೆಳೆಯುತ್ತಿದ್ದಾರೆಂದು ಜಿಲ್ಲಾ ಪಂಚಾಯತ ಅಧ್ಯಕ್ಷೆ ಬಾಯಕ್ಕ ಮೇಟಿ ಹೇಳಿದರು.
ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್ನಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಯೋಗದಲ್ಲಿ ಹಮ್ಮಿಕೊಂಡ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ, ಸ್ತ್ರೀಶಕ್ತಿ ಸಮಾವೇಶ ಹಾಗೂ ಪೋಷಣ್ ಪಕ್ವಾಡ್ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಯಾವ ಸಮಾಜ ಹಾಗೂ ಕುಟುಂಬಗಳಲ್ಲಿ ಗೌರವ ಸಿಗುತ್ತದೆಯೋ ಅಲ್ಲಿ ನೆಮ್ಮದಿ, ಅಭಿವೃದ್ದಿ ಸಾಧ್ಯವಾಗುತ್ತದೆ ಎಂದರು.
ಎಷ್ಟೇ ಕಷ್ಟ ಬಂದರೂ ಎದುರಿಸುವ ಶಕ್ತಿ ಮಹಿಳೆಯರಲ್ಲಿದ್ದು, ಇಂದು ಮಹಿಳೆ ಕೇವಲ ಅಡಿಗೆ ಮನೆಗೆ ಸೀಮಿತವಾಗಿರದೇ ವಿವಿಧ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸುತ್ತಿದ್ದಾರೆ. ಮಹಿಳೆಯರು ತಾವು ಬೆಳೆಯುವ ಮೂಲಕ ಇತರರಿಗೆ ಸ್ಫೂರ್ತಿಯಾಗುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಸರಕಾರ ಮಹಿಳೆ ಪುರಷರೆನ್ನದೇ ಸಮಾನ ಅವಕಾಶ ಕಲ್ಪಿಸಿದ್ದು, ಮಹಿಳಾ ಸಬಲೀಕರಣಕ್ಕೆ ಸಾಕಷ್ಟು ಯೋಜನೆಗಳನ್ನು ರೂಪಿಸಿದೆ ಅವುಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ತಾ.ಪಂ ಅಧ್ಯಕ್ಷ ಚನ್ನನಗೌಡ ಪರನಗೌಡರ ಮಾತನಾಡಿ ಮಹಿಳೆ ಅಸಾಯಕಿ ಅಲ್ಲ, ಸಬಲೆಯಾಗಿದ್ದು, ಅವರಿಗೆ ನೀಡಿರುವ ಸಮಾನತೆ, ಸೌಲಭ್ಯಗಳನ್ನು ಪಡೆದುಕೊಂಡು ಸದುಪಯೋಗ ಪಡಿಸಿಕೊಳ್ಳಬೇಕು. ಸರಕಾರ ಮಹಿಳೆಗೆ ಶೇ.50 ರಷ್ಟು ಮೀಸಲಾತಿ ನೀಡಲಾಗಿದೆ. ಮಹಿಳೆಯು ಸಂಕೋಚ ಮನೋಭಾವನೆ ಹೊಂದಿದ್ದು, ಅದರಿಂದ ಹೊರಬರಲು ಗ್ರಾಮ ಮಟ್ಟ, ತಾಲೂಕಾ ಮಟ್ಟ ಹಾಗೂ ಜಿಲ್ಲಾ ಮಟ್ಟದಲ್ಲಿ ಕಾಯರ್ಾಗಾರವನ್ನು ಹಮ್ಮಿಕೊಳ್ಳುವುದು ಅವಶ್ಯವಾಗಿದೆ ಎಂದು ತಿಳಿಸಿದರು.
ಉಪನ್ಯಾಸಕರಾಗಿ ಆಗಮಿಸಿದ್ದ ಇಲಕಲ್ಲಿನ ವಿಜಯ ಮಹಾಂತೇಶ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಸಹ ಪ್ರಾದ್ಯಾಪಕಿ ಸುಮಂಗಲಾ ಮೇಟಿ ಮಾತನಾಡಿ ಪುರುಷರಲ್ಲಿ ಅಂತಕರಣದ ಪ್ರಜ್ಞೆಯ ಮೂಡಿಸುವ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಕಾರ್ಯವಾಗಬೇಕು. ಇಂದಿನ ಮಹಿಳೆಯರು ಶಿಕ್ಷಣವಂತರಾಗುವ ಮೂಲಕ ಉನ್ನತ ಸ್ಥಾನಗಳನ್ನು ಅಲಂಕರಿಸಿದ್ದಾರೆ. ಗ್ರಾಮೀಣ ಮಟ್ಟದಲ್ಲಿ ಮಕ್ಕಳ ಅಭಿವೃದ್ದಿಗೆ ಹಾಗೂ ಪೌಷ್ಠಿಕಾಂಶ ಹೆಚ್ಚಳಕ್ಕೆ ಇಲಾಖೆಯ ಮೂಲಕ ಮಾಡಲಾಗುತ್ತಿದೆ ಎಂದರು.
ವಕೀಲರಾದ ಮಳಿಯಮ್ಮ ಕೆಂಚನ್ನವರ ಮಹಿಳೆ ಮತ್ತು ಕಾನೂನು ಹಾಗೂ ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ಜಯಶ್ರೀ ಎಮ್ಮಿ ಭ್ರೂಣ ಹತ್ಯೆ ನಿಷೇಧ ಕಾಯ್ದೆ ಹಾಗೂ ಮಹಿಳೆ ಕುರಿತು ಉಪನ್ಯಾಸ ನೀಡಿದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಮಹಿಳೆಯರನ್ನು ಹಾಗೂ ಪ್ರಸಕ್ತ ಸಾಲಿನ ವಿವಿಧ ಕ್ಷೇತ್ರಗಳಲ್ಲಿ ಅಸಾಧಾರಣ ಪ್ರತಿಭೆ ತೋರಿದ ಮಕ್ಕಳಿಗೆ ಪ್ರಶಸ್ತಿ ಪುರಸ್ಕಾರ ಮತ್ತು ವಿವಿಧ ಸ್ಪರ್ಧೆ ಗಳಲ್ಲಿ ವಿಜೇತರಾದವರಿಗೆ ಪ್ರಶಸ್ತಿ ನೀಡಲಾಯಿತು. ಕಾರ್ಯಕ್ರಮದಲ್ಲಿ ಜಿ.ಪಂ ಸಿಇಓ ಗಂಗೂಬಾಯಿ ಮಾನಕರ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಜಿ.ಪಂ ಉಪಕಾರ್ಯದಶರ್ಿ ಎ.ಜಿ.ತೋಟದ, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎ.ಎನ್.ದೇಸಾಯಿ, ಜಂಟಿ ಕೃಷಿ ನಿರ್ದೇಶಕಿ ಚೇತನಾ ಪಾಟೀಲ, ಜಾನಪದ ಕಲಾವಿದೆ ಗೌರಮ್ಮ ಸಂಕಿನ ಸೇರಿದಂತೆ ಇತರರು ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕ ಮಲ್ಲಿಕಾರ್ಜುನ ನ ರೆಡ್ಡಿ ಸ್ವಾಗತಿಸಿದರು.
ಸಾಧನೆಗೈದ ಮಹಿಳೆಯರಿಗೆ ಪುರಸ್ಕಾರ
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಒಟ್ಟು 20 ಜನ ಮಹಿಳೆಯರನ್ನು ಸನ್ಮಾನಿಸಲಾಯಿತು. ಕಾಸಿಬಾಯಿ ಭೂತಪ್ಪಗೋಳ (ಜಾನಪದ), ಅನುಸೂಯಾ ಕಾಖಂಡಕಿ (ಕೃಷಿ), ಸರೋಜಾ ಹಾದಿಮನಿ (ಸಾಮಾಜಿಕ), ಯಲ್ಲವ್ವ ರೊಡ್ಡೆಪ್ಪನ್ನವರ (ಜಾನಪದ), ಪ್ರಾಚಿ ಜಿಂಗಾಡಿ (ಸ್ವಯಂ ಉದ್ಯೋಗ), ಪೂಜಾ ಜಿಂಗಾಡಿ (ಸ್ವಯಂ ಉದ್ಯೋಗ), ಪರಿಮಳಾ ಮನಗೂಳಿ (ಪತ್ರಿಕೋದ್ಯಮ), ಅನಿತಾ ಪಾಟೀಲ, (ಕೃಷಿ) ಸುನೀತಾ ಮೇಟಿ (ಜಾನಪದ ಸಾಹಿತ್ಯ), ಸಿಸ್ಟರ್ ಸಿಂತಿಯಾ ಸಿಕ್ವೇರಾ (ಸಾಮಾಜಿಕ ಸೇವೆ), ಅರ್ಚನಾ ದಡ್ಡೇನ್ನವರ (ವೈದ್ಯಕೀಯ), ರೀಯಾನಾ ಮಕಾಂದರ, ವೀಣಾ (ಸ್ವಯಂ ಉದ್ಯೋಗ), ದಾನಮ್ಮಾ ಚಿಚಕಂಡಿ (ಸೈಕ್ಲಿಂಗ್), ಕವಿತಾ ಲಮಾಣಿ, ಹಾಸಿಂಬಿ ಫಕಾಲಿ (ಕ್ರೀಡೆ), ತಾಯಕ್ಕ ಮಾದರ (ಕನ್ನಡ ವ್ಯಾಸಂಗ), ಸವಿತಾ ನಲವಡೆ (ಸೇವೆ), ಹೊನ್ನಕಟ್ಟಿ, ಲಕ್ಷ್ಮೀ ಗೌಡರ (ಸೇವೆ), ರೂಪಶ್ರೀ ಹಂಜನ್ (ಯೋಗ).
ಅಸಾಧಾರಣ ಪ್ರತಿಭೆ ತೋರಿದ ಮಕ್ಕಳಿಗೆ ಸನ್ಮಾನ :
ಆನಂದ ಜಗದಾಳ, ಪ್ರಗತಿ ಜರಾಳಿ, ವಾಝೀದ್ ಸುತ್ತಾರ (ಕ್ರೀಡೆ), ನಿತ್ಯಾ ಕುಲಕರ್ಣಿ, ಶ್ರೇಯಾ ಶಿರೂರ, ಶಾಲಿನಿ ಪವಾರ (ಶೈಕ್ಷಣಿಕ), ಅಭಿನವ ಕರಡಿ (ಸಾಂಸ್ಕೃತಿಕ,ಜಾನಪದ), ಶ್ರೇಯಾ ಕುಲಕರ್ಣಿ (ನೃತ್ಯ) ಶ್ವೇತಾ ದಾಸರ.