ಲೋಕದರ್ಶನವರದಿ
ಗುಳೇದಗುಡ್ಡ: ನೇಕಾರರು ವಂಶಪಾರಂಪರ್ಯವಾಗಿ ನೇಕಾರಿಕೆ ವೃತ್ತಿ ಮಾಡುತ್ತ ಬಂದಿದ್ದಾರೆ. ಅದರ ಜೊತೆಗೆ ಹೊಸ ಕೌಶಲ್ಯತೆ ಬೆಳೆಸಿಕೊಳ್ಳಬೇಕು. ಆಧುನಿಕತೆಗೆ ತಕ್ಕಂತೆ ಬದಲಾಗಬೇಕು ಎಂದು ಮಾಜಿ ಶಾಸಕ ರಾಜಶೇಖರ ಶೀಲವಂತ ಹೇಳಿದರು.
ಪಟ್ಟಣದ ಯುವಶಕ್ತಿ ಗ್ರಾಮೀಣ ಅಭವೃದ್ಧಿ ಸಂಸ್ಥೆಯಲ್ಲಿ ಕೇಂದ್ರ ಸರಕಾರದ ಜವಳಿ ಇಲಾಖೆ, ಕೌಶಲ್ಯ ಭಾರತ ಅಭಿವೃದ್ಧಿ ನಿಗಮ, ಶ್ರೀಜಾ ಶಿಕ್ಷಣ ಮತ್ತು ಸಾಮಾಜಿಕ ಸೊಸೈಟಿ ಸಹಯೋಗದಲ್ಲಿ ಹಮ್ಮಿಕೊಂಡ ನೇಕಾರರಿಗೆ ಮೂರು ದಿನಗಳ ಪವರ್ಲೂಮ್ ತರಬೇತಿ ಕಾರ್ಯಕ್ರಮದಲ್ಲಿ ಮುಖ್ಯಅತಿಥಿಗಳಾಗಿ ಮಾತನಾಡಿ, ನೇಕಾರಿಕೆಗೆ ಸರಕಾರ ಸಾಕಷ್ಟು ಯೋಜನೆ ತರುತ್ತಿದೆ. ರೈತ, ಸೈನಿಕರಂತೆ ನೇಕಾರರು ದೇಶಕ್ಕೆ ಅವಶ್ಯವಿದ್ದು, ನೇಕಾರಿಕೆಯಲ್ಲಿ ಹೊಸ ಹೊಸ ಪದ್ಧತಿ ಅಳವಡಿಸಿಕೊಳ್ಳಬೇಕು. ಕೇವಲ ಪ್ರಮಾಣ ಪತ್ರಕ್ಕಾಗಿ ತರಬೇತಿ ಪಡೆಯದೇ ಇದರಿಂದ ಹೊಸ ಜ್ಞಾನ ಪಡೆದುಕೊಳ್ಳಬೇಕು ಎಂದು ಹೇಳಿದರು.
ಕಾಂಗ್ರೆಸ್ ಮುಖಂಡ ಸಂಜಯ ಬರಗುಂಡಿ ಮಾತನಾಡಿ, ನೇಕಾರಿಕೆ ವೃತ್ತಿಗೆ ಸರಿಯಾದ ಮಾರುಕಟ್ಟೆ ಸಿಗದಿರುವದಕ್ಕೆ ಕುಸಿತ ಕಂಡಿದೆ. ನೇಕಾರರ ಉತ್ತೇಜನಕ್ಕೆ ಸಾಲಮನ್ನಾ ಸೇರಿದಂತೆ ಸರಕಾರ ಸಾಕಷ್ಟು ಯೋಜನೆ ಜಾರಿಗೆ ತಂದಿದೆ. ನೇಕಾರರು ಸರಕಾರದ ಯೋಜನೆಗಳನ್ನು ಸರಿಯಾಗಿ ಬಳಸಿಕೊಂಡು ಅಭಿವೃದ್ಧಿ ಹೊಂದಬೇಕು ಎಂದು ಹೇಳಿದರು.
ನಬಾಡರ್್ನ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕಿ ಯಮುನಾ ಪೈ ಅವರು ಮಾತನಾಡಿ, ಸರಕಾರ ಹೊಸ ಹೊಸ ಕೌಶಲ್ಯತೆ ಕಲಿಸಲು ಕೌಶಲ್ಯ ಭಾರತ ಯೋಜನೆ ಮೂಲಕ ಹಲವು ಜಾರಿಗೆ ತರುತ್ತಿದೆ. ನಾನಾ ರೀತಿಯ ಕೌಶಲ್ಯತೆ ಕಲಿತು ಹೊಸ ಬದುಕು ಕಟ್ಟಿಕೊಳ್ಳಲು ಮುಂದಾಗಬೇಕು ಎಂದು ಹೇಳಿದರು.
ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಐ.ಸಿ.ಯಂಡಿಗೇರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ನೇಕಾರಿಕೆಗೆ ಸರಕಾರ ಉತ್ತೇಜನ ನೀಡುತ್ತಿದೆ. ಅಲ್ಲದೇ ನೇಕಾರರಿಗೆ ಸಹಕಾರಿ ರಂಗದಲ್ಲೂ ಸಾಲ ಸೌಲಭ್ಯ ಸಿಗುತ್ತಿದ್ದು, ಸಾಲ ಪಡೆದು ಅದರಿಂದ ಆಥರ್ಿಕವಾಗಿ ಬೆಳವಣಿಗೆಗೊಳ್ಳಬೇಕು ಎಂದು ಹೇಳಿದರು.
ಜೆಡಿಎಸ್ ನೇಕಾರ ಘಟಕದ ಜಿಲ್ಲಾಧ್ಯಕ್ಷ ಶ್ರೀಕಾಂತ ಹುನಗುಂದ, ಮುಖ್ಯಾಧಿಕಾರಿ ರವೀಂದ್ರ ಅಂಗಡಿ ಮಾತನಾಡಿದರು.
ಸಂಸ್ಥೆಯ ಅಧ್ಯಕ್ಷೆ ದಾಕ್ಷಾಯಣಿ ಬಂಡಿ, ಬಸವರಾಜ ಯಂಡಿಗೇರಿ, ಸಿಇಓ ಸಿದ್ದಪ್ಪ ಮಡಿವಾಳರ, ತರಬೇತುದಾರರಾದ ಆದಪ್ಪ ಮುಳಗುಂದ, ಶ್ರೀಧರ ರಾಜನಾಳ, ರಾಜು ಕಟಗೇರಿ, ಶಿಲ್ಪಾ ಪರಗಿ, ನೀತಾ ಮುಳ್ಳಾನವರ, ಪದ್ಮಾ ಮನಿ, ದಾಕ್ಷಾಯಣಿ ವಾಳದುಂಕಿ, ಮೋಹನ ಕರನಂದಿ, ಬೆನಕಪ್ಪ ಶೇಬಿನಕಟ್ಟಿ ಸೇರಿದಂತೆ ಇತರರು ಇದ್ದರು.