ವಿದ್ಯಾಥರ್ಿಗಳು ವಚನ ಸಾಹಿತ್ಯದತ್ತ ಒಲವು ತೋರಲಿ: ಶಿರಾಳಶೆಟಿ
ಧಾರವಾಡ: ಇಂದಿನ ವಿದ್ಯಾಥರ್ಿಗಳು ವಚನ ಸಾಹಿತ್ಯ ಮತ್ತು ಸಂಗೀತದತ್ತ ಒಲವು ತೋರಿಸುರಿಸಬೇಕು ಮತ್ತು ವಚನ ಸಾಹಿತ್ಯವನ್ನು ಅಧ್ಯಯನ ಮಾಡುವುದರಿಂದ ಜೀವನ ನಡೆಸುವ ಕ್ರಮವನ್ನು ತಿಳಿಸುತ್ತದೆ ಎಂದು ಕನರ್ಾಟಕ ವಿಶ್ವವಿದ್ಯಾಲಯದ ಪ್ರಭಾರ ಕುಲಪತಿಗಳಾದ ಪ್ರೊ. ಎ.ಎಸ್ ಶಿರಾಳಶೆಟ್ಟಿ ಹೇಳಿದರು. ಅವರು ಕನರ್ಾಟಕ ವಿಶ್ವವಿದ್ಯಾಲಯದ ಬಸವೇಶ್ವರ ಅಧ್ಯಯನ ಪೀಠವು ಅಲ್ಲಮ ಪ್ರಭುಸಭಾಭವನದಲ್ಲಿ ಆಯೋಜಿಸಿದ ವಿದುಷಿ ಡಾ. ನಂದಾ ಪಾಟೀಲ ವಚನ ಸಂಗೀತ ಕಛೇರಿಯ ದತ್ತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಬಸವ ವಚನ ಸಾಹಿತ್ಯದಲ್ಲಿ ತತ್ವ ಆದರ್ಶಗಳನ್ನು ಪ್ರಸ್ತುತ ಯುವಜನರಿಗೆ ಅಗತ್ಯವಾಗಿದ್ದು, ವಚನ ಸಾಹಿತ್ಯ ಅಧ್ಯಯನ ಮಾಡವುದರಿಂದ ಜೀವನದಲ್ಲಿ ಪ್ರಬುದ್ಧತೆಯನ್ನು ಸಾಧಿಸಲು ಸಾಧ್ಯವಾಗುತ್ತದೆ ಎಂದರು. ವಚನ ಸಾಹಿತ್ಯವನ್ನು ಸಂಗೀತದ ಮೂಲಕ ಜನರಿಗೆ ತಿಳಿಸುವುದರಿಂದ ವಚನ ಸಾಹಿತ್ಯವನ್ನು ಸಲುಭವಾಗಿ ಅಥರ್ೈಸಿಕೊಳ್ಳಲು ಸಾಧ್ಯ ಎಂದರು. ಇಂದಿನ ವಿದ್ಯಾಥರ್ಿಗಳು ಆಧುನಿಕ ತಂತ್ರಜ್ಞಾನದ ಮಾಧ್ಯಮಗಳಾದ ಮೊಬೈಲ್ ಟಿವಿ ಮತ್ತು ಸಮೂಹ ಮಾಧ್ಯಮಗಳತ್ತ ಒಲವು ತೋರಿಸುತ್ತಿರುವದು ವಿಪಯರ್ಾಸ ಎಂದರು.
ಕಾರ್ಯಕ್ರಮದ ದತ್ತಿ ದಾನಿಗಳಾದ ಕವಿವಿ ಹಿಂದಿನ ಕುಲಸಚಿವರಾದ ಪ್ರೊ. ಮಲ್ಲಿಕಾಜರ್ುನ ಪಾಟೀಲ ಮಾತನಾಡಿ ವೈದಿಕ ಧರ್ಮದ ಪಯರ್ಾಯವಾಗಿ ಬಸವೇಶ್ವರರು ಸಮಾನತೆ ಸಾರುವ ಬಸವ ಧರ್ಮವನ್ನು ಕಟ್ಟಿಕೊಟ್ಟಿದ್ದು, ಬಸವ ಧರ್ಮದಲ್ಲಿ ವಿಜ್ಞಾನ ತಂತ್ರಜ್ಞಾನ ಸತ್ಯ ಧರ್ಮದ ನಿಜವಾದ ಕಾಯಕವೇನು ಎಂಬುವದನ್ನು ತಿಳಿಸುತ್ತದೆ ಎಂದರು. ಶರಣ ಸಾಹಿತ್ಯದಲ್ಲಿ ಇಸ್ಲಾಂ, ಕ್ರಿಶ್ಚಿಯನ್, ಜೈನ್, ಬೌದ್ಧ ಧರ್ಮ ಸೇರಿದಂತೆ ಹಲವಾರು ಧರ್ಮಗಳ ತತ್ವಗಳು ಬಸವ ಧರ್ಮದಲ್ಲಿ ಒಳಗೊಂಡಿದ್ದು, ಇಂಗ್ಲೇಂಡ್ ದೇಶದ ಜನರು ಬಸವ ಧರ್ಮದ ತತ್ವಗಳನ್ನು ಅಚ್ಚುಕಟ್ಟಾಗಿ ಪಾಲಿಸುತ್ತಿರುವದು ಬಸವ ಧರ್ಮದ ಪ್ರಾಮುಖ್ಯತೆಯನ್ನು ತಿಳಿಸಿ ಕೊಡುತ್ತದೆ ಎಂದ ಅವರು ಇಂದಿನ ವಿದ್ಯಾಥರ್ಿಗಳು ಹಲವಾರು ಸಂತ ದಾರ್ಶನಿಕರ ವಚನ ಸಾಹಿತ್ಯವನ್ನು ಅಧ್ಯಯನ ಮಾಡಬೇಕು ಎಂದು ಸಲಹೆ ನೀಡಿದರು.
ಕವಿವಿ ಬಸವೇಶ್ವರ ಅಧ್ಯಯನ ಪೀಠದ ಸಂಯೋಜಕರಾದ ಡಾ. ಸಿ.ಎಂ.ಕುಂದಗೊಳ ಪ್ರಾಸ್ತಾವಿಕವಾಗಿ ಮಾತನಾಡಿ ಸಂಗೀತದ ಮೂಲಕ ವಚನ ಸಾಹಿತ್ಯವನ್ನು ವಿದ್ಯಾಥರ್ಿಗಳಿಗೆ ತಿಳಿಸುವ ಉದ್ದೇಶದಿಂದ ಕವಿವಿಯ ಹಿಂದಿನ ಕುಲಸಚಿವರಾದ ಡಾ. ಮಲ್ಲಿಕಾಜರ್ುನ ಪಾಟೀಲ ಅವರು ನೀಡಿದ 1 ಲಕ್ಷ ರೂಪಾಯಿ ದತ್ತಿ ಹಣದಿಂದ ಇಂದು ಪ್ರಥಮ ಸಂಗೀತ ಕಛೇರಿಯನ್ನು ಆಯೋಜಿಸಲಾಗಿದೆ ಎಂದರು. ವಚನ ಸಾಹಿತ್ಯವನ್ನು ಸಂಗೀತದ ಮೂಲಕ ತನ್ನ ಪರಂಪರೆಯನ್ನು ಮುಂದು ವರೆಸಿಕೊಂಡು ಹೋಗಲು ಇಂತಹ ದತ್ತಿ ಕಾರ್ಯಕ್ರಮಗಳಿಂದ ಅನುಕೂಲವಾಗುತ್ತದೆ ಎಂದರು.
ವಚನ ಸಂಗೀತ ಕಛೇರಿಯ ಕಾರ್ಯಕ್ರಮವನ್ನು ಕೆಸಿಡಿ ಸಂಗೀತ ಮಹಾವಿದ್ಯಾಲಯದ ವೀಣಾ ಬಡಿಗೇರ ಅವರ ತಂಡ ಅನೇಕ ವಚನಗಳನ್ನು ತಮ್ಮ ಗಾಯನದ ಮೂಲಕ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಈ ಕಾರ್ಯಕ್ರಮದ ನೇರ ಪ್ರಸಾರವನ್ನು ಬಸವ ಟಿವಿ ಪ್ರಸಾರ ಮಾಡಿತು. ಕಾರ್ಯಕ್ರಮದಲ್ಲಿ ಡಾ. ಸಿ.ಎಂ.ಕುಂದಗೊಳ, ಡಾ. ನಂದಾ ಪಾಟೀಲ, ಡಾ.ಯರವಿನತೆಲಿಮಠ, ಡಾ.ವಿರಣ್ಣ ರಾಜೂರ, ಡಾ.ಬಿ.ವಿ ಯಕ್ಕುಂಡಿಮಠ, ಡಾ. ಶ್ಯಾಮಲಾ ರತ್ನಾಕರ, ಡಾ. ಎಸ್.ವಿ.ಅಯ್ಯನಗೌಡರ, ಡಾ. ಸೂಪ್ಪಿಮಠ ಸೇರಿದಂತೆ ಪ್ರಾಧ್ಯಾಪಕರು ವಿದ್ಯಾಥರ್ಿಗಳು ಇದ್ದರು.