ನಕ್ಷತ್ರ ಗುಂಪು ಮಿನುಗುವ ತಾರೆಯಾಗಲಿ: ಭಾಗ್ಯನಗರ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಬಾಬು

ಲೋಕದರ್ಶನ ವರದಿ

ಕೊಪ್ಪಳ 15: ಮನುಷ್ಯ ಸಂಘಜೀವಿ ಹೀಗಾಗಿ ಸಾಮಾಜಿಕವಾಗಿ ಉಪಯುಕ್ತ ಕಾರ್ಯಗಳನ್ನು ಕೈಗೊಂಡು ಸಮಾಜ ಸೇವೆ ಕೈಗೊಳ್ಳಬೇಕು ನೀವು ಬಯಲು ಮುಕ್ತ ಶೌಚಾಲಯದ ಜಾಗೃತಿ ಮೂಡಿಸಿ ರಾಜ್ಯ ಮಟ್ಟದಲ್ಲಿ ಗಮನ ಸೆಳೆದಿದ್ದು ಇಂತಹ ಅನೇಕ ಕಾರ್ಯಕ್ರಮಗಳು ಆಗಲಿ ನಕ್ಷತ್ರ ಗುಂಪು ಮಿನುಗುವ ತಾರೆಯಾಗಲಿ ಎಂದು ಭಾಗ್ಯನಗರ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಬಿ.ಬಾಬು ಹೇಳಿದರು.

ಭಾಗ್ಯನಗರದ 17ನೇ ವಾಡರ್್ನ ಧನ್ವಂತರಿ ಕಾಲೋನಿಯಲ್ಲಿ ನಕ್ಷತ್ರ ಸ್ವಸಹಾಯ ಸಂಘದ ಎರಡನೇ ವರ್ಷದ ವಾಷರ್ಿಕೋತ್ಸವವನ್ನು ಉದ್ಘಾಟಿಸಿ ಮಾತನಾಡಿ ಸರಕಾರದ ಯೋಜನೆಗಳ ಬಗ್ಗೆ ಜನರಿಗೆ ತಿಳಿಸಿ ನಕ್ಷತ್ರ ಸ್ವಸಹಾಯ ಸಂಘಕ್ಕೆ ಪಟ್ಟಣ ಪಂಚಾಯತ್ಯಿಂದ ಸಹಕಾರ ನೀಡುವುದಾಗಿ ತಿಳಿಸಿದರು.

ಭಾಗ್ಯನಗರ ಪಟ್ಟಣ ಪಂಚಾಯತ್ ಸಿಎಓ ಮಂಗಳಾ ಕುಲಕಣರ್ಿ ಮಾತನಾಡಿ ಸರಕಾರದ ಯೋಜನೆಗಳನ್ನು ಹೆಣ್ಣುಮಕ್ಕಳು ಪ್ರೋತ್ಸಾಹಿಸಬೇಕು, ಸರಕಾರದ ಆರೋಗ್ಯದ ಆಯುಷ್ಯಮನ್ ಭಾರತ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಿ, ನೀರನ್ನು ಪ್ರತಿಯೊಬ್ಬರು ಮಿತವಾಗಿ ಬಳಸಿ ಆದಷ್ಠು ನೀರನ್ನು ಉಳಿತಾಯ ಮಾಡುವಂತೆ ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲಲಿತಾ ಪಿ.ಅಳವಂಡಿ ವಹಿಸಿ ನಕ್ಷತ್ರ ಸ್ವಸಹಾಯ ಸಂಘದಿಂದ ಇನ್ನು ಅನೇಕ ಕಾರ್ಯಕ್ರಮಗಳನ್ನು ಮಾಡುವುದಾಗಿ ಹೇಳಿದರು. ನಕ್ಷತ್ರ ಸ್ವಸಹಾಯ ಸಂಘದ ಪದಾಧಿಕಾರಿಗಳಾದ ರಾಖಿ ಎಸ್. ಜಾಣ, ಸುಜಾತ ಜೆ. ಪ್ರಜ್ವಲ್, ಶೋಭಾ ಜ್ಯೋತಿ, ವೀಣಾ ಆರ್. ನಾಯಕ್, ಶಂಕ್ರಮ್ಮ ಸಿಂಗಾಡಿ, ಪದ್ಮಾವತಿ ನುಗಡೋಣಿ, ಸಿಂಧೂ ಉಜ್ವಲ್ ಜ್ಯೋತಿ, ಮಂಜುಳಾ ಆರ್.ಅಳವಂಡಿ, ಸೌಮ್ಯ ಪಿ, ನಿರ್ಮಲಾ ಕೊಟ್ಟೂರುಮಠ, ರೇಖಾ ಮಡಿವಾಳರು, ಕು.ಅನಿತಾ ಶ್ಯಾವಿ ಸೇರಿದಂತೆ ಅನೇಕ ಮಹಿಳೆಯರು ಪಾಲ್ಗೊಂಡಿದ್ದರು.