ಲೋಕದರ್ಶನ ವರದಿ
ಹಾವೇರಿ 02: ರೈತರು ದೇಶದ ಬೆನ್ನೆಲುಬಾಗಿದ್ದು, ದೇಶದ ಜನರಿಗೆ ಅನ್ನ ನೀಡುವ ಕಾಯಕಯೋಗಿಯಾಗಿ ಹಾಗೂ ಸಾಮಾಜಿಕ ಕಳಕಳಿಯ ಕೆಲಸ ಮಾಡುವವರಾಗಿದ್ದಾರೆ. ಅನ್ನದಾತರ ಕಷ್ಟಗಳ ಪರಿಹರಿಸಲು ಸರ್ಕಾರಗಳು ಮುಂದೆ ಬರಲಿ ಎಂದು ಹೊಸಮಠದ ಶ್ರೀ ಬಸವಶಾಂತಲಿಂಗ ಸ್ವಾಮಿಜಿ ಎಂದು ಹೇಳಿದರು.
ನಗರದ ಕಾಗಿನೆಲೆ ರಸ್ತೆಯ ಶ್ರೀ ಮುರುಘರಾಜೇಂದ್ರ ಮಠದಲ್ಲಿ ಆಯೋಜಿಸಿದ ಉತ್ತರ ಕನರ್ಾಟಕ ರೈತ ಸಂಘದ ಸದಸ್ಯತ್ವ ಅಭಿಯಾನ, ಗುರುತಿನ ಚೀಟಿ ವಿತರಣೆ ಹಾಗೂ ಹಾವೇರಿ ತಾಲೂಕಾ ರೈತ ಸಮಾವೇಶದ ದಿವ್ಯ ಸಾನಿಧ್ಯವಹಿಸಿ ಅವರು ಮಾತನಾಡಿದರು.
ಆಧುನಿಕತೆ ಎಷ್ಟೆ ಬೆಳೆದರೂ ಏನೇ ಸಂಶೋಧನೆ ಬಂದರೂ ಅನ್ನದಾತ ರೈತರನ್ನು ಮೀರಿ ಯಾರು ಏನೇ ಮಾಡಲು ಮುಂದಾದರೂ ರೈತರ ಪಾತ್ರ ನಿರ್ವಹಿಸಲು ಅಸಾಧ್ಯವಾಗಿದೆ. ರೈತರು ಸಂಘಟನಾತ್ಮಕ, ನ್ಯಾಯಯುತ ಹಾಗೂ ಧರ್ಮದಂತೆ ಕೆಲಸ ಮುಂದುವರಿಸಿದರೆ ಸಮಾಜದಲ್ಲಿ ಅಧರ್ಮ ತೊಲುಗುತ್ತದೆ. ಉತ್ತರ ಕನರ್ಾಟಕ ರೈತ ಸಂಘ ಸಂಘಟನಾತ್ಮಕವಾಗಿ ಬೆಳೆದು ರೈತರಿಗೆ ನ್ಯಾಯ ಒದಗಿಸಲು ಪದಾಧಿಕಾರಿಗಳು ಶ್ರಮವಹಿಸಬೇಕಾಗಿದೆ. ಇಂದಿನ ಎಲ್ಲ ಉನ್ನತ ಅಧಿಕಾರಿಗಳು ರೈತರ ಮಕ್ಕಳೆ ಹೆಚ್ಚಾಗಿದ್ದಾರೆ. ನಿಮ್ಮ ಮಕ್ಕಳು ಉತ್ತಮ ಶಿಕ್ಷಣ ಪಡೆಯಲಿ. ಉತ್ತಮ ಸಮಾಜ ನಿಮರ್ಾಣ ನಿಮ್ಮಂದ ಆಗಲಿ ಎಂದು ಶ್ರೀ ಬಸವಶಾಂತಲಿಂಗ ಸ್ವಾಮಿಜಿ ಸಾನಿಧ್ಯವಹಿಸಿ ಆಶರ್ಿವಚನ ನೀಡಿದರು.
ಉತ್ತರ ಕನರ್ಾಟಕ ರೈತ ಸಂಘದ ರಾಜ್ಯಾಧ್ಯಕ್ಷ ಬಸವರಾಜ ಕರಿಗಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ರೈತರು ನೀಡುವ ಕಾಯಕಧರ್ಮದವರಾಗಿದ್ದಯ, ಬೇಡುವ ಧರ್ಮದವರಲ್ಲ. ದೇಶದಲ್ಲಿ ಎಲ್ಲರಿಗೂ ಸಮಯಕ್ಕೆ ಸರಿಯಾಗಿ ವೇತನ ಭತ್ತೆಗಳು ದೊರೆಯುತ್ತೇವೆ. ಆದರೆ ರೈತರಿಗೆ ಯಾವುದು ಸರಿಯಾಗಿ ಇಲ್ಲದಿದ್ದರೂ ತಮ್ಮ ಕಾಯಕ ಮಾಡುತ್ತಾ ಎಲ್ಲರ ಆಹಾರ ದಾಹ ನಿಗಿಸುವ ಕೆಲಸ ಮಾಡುತ್ತಾರೆ. ಸಕರ್ಾರಗಳು ರೈತರ ಪರಸ್ಥಿತಿಯನ್ನು ಅರ್ಥ ಮಾಡಿಕೊಂಡು ಸಮಸ್ಯೆಗಳ ಪರಿಹಾರಕ್ಕೆ ಮುಂದಾಗಬೇಕು. ರೈತರು ಯಾವುದಕ್ಕೂ ಹೇದರುವ ಅಗತ್ಯವಿಲ್ಲ. ಆತ್ಮಹತ್ಯ ಮಾಡಿಕೊಳ್ಳಬೇಡಿ ಧೈರ್ಯದಿಂದ ಹೋರಾಟ ಮಾಡಿ ರೈತ ಸಂಘ ನಿಮ್ಮ ಸಮಸ್ಯೆಗಳ ನಿವಾರಣೆಗೆ ನಿಮ್ಮೊಂದಿಗೆ ಇದೆ ಎಂದು ರೈತರಿಗೆ ವಿಶ್ವಾಸ ತುಂಬಿದರು.
ರೈತ ಸಂಘದ ಸದಸ್ಯರಿಗೆ ಗುರುತಿನ ಚೀಟಿ ವಿತರಣೆ ಮಾಡಿದ ಜಿಲ್ಲಾಧ್ಯಕ್ಷ ಹನಮಂತಪ್ಪ ದಿವಿಗಿಹಳ್ಳಿ ಮಾತನಾಡಿ ಜಿಲ್ಲೆಯಲ್ಲಿ ರೈತರ ಸಮಸ್ಯೆಗಳ ಪರಿಹಾರಕ್ಕೆ ಸದಾ ಹೋರಾಟ ಮಾಡಲು ಸಿದ್ದರಿದ್ದೇವೆ. ನೀವು ಕೈಜೋಡಿಸಿ ನಿಮ್ಮ ಯಾವುದೇ ಕೆಲಸಗಳು ಇದ್ದರೂ ನಿಮಗೆ ಸಹಕರಿಸುತ್ತೇವೆ ಎಂದರು.
ಪ್ರಸ್ತಾವಿಕ ಮಾತನಾಡಿದ ಜಿಲ್ಲಾ ಪ್ರ.ಕಾ ಫಕ್ಕಿರೇಶ ಡಿ ಕಾಳಿ ಮಾತನಾಡಿ ಸಂಘಟನೆಯಿಂದ ಸಮಸ್ಯೆಗಳ ಪರಿಹಾರ ಆಗುತ್ತೇವೆ. ಸರ್ಕಾರಗಳ ಚರ್ಮಗಳು ದಪ್ಪವಾಗಿವೆ. ಇವರು ರೈತರ ಮಕ್ಕಳೇ ಆಗಿದ್ದರೂ ರೈತರ ಸಮಸ್ಯೆಗಳಿಗೆ ಜನಪ್ರತಿನಿಧಿಗಳು ಸ್ಪಂಧಿಸದೇ ಇರುವುದು ದುದೈರ್ವದ ಸಂಗತಿಯಾಗಿದೆ. ಅನ್ನದಾತರು ಯಾವ ಪಕ್ಷದ, ಡೊಣ್ಣೆ ನಾಯಕರ ಸ್ವತ್ತಲ್ಲಾ. ಹೋರಾಟವೇ ನಮ್ಮ ಮೂಲ ಮಂತ್ರವಾಗಿದೆ. ಎಲ್ಲರೂ ಒಗ್ಗಟ್ಟಾಗಿ ನ್ಯಾಯಪೂರ್ವಕ ಹೋರಾಟ ಮಾಡೋಣ ಎಂದು ರೈತರನ್ನು ಹುರುದುಂಬಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಾವೆರಿ ತಾಲೂಕಾಧ್ಯಕ್ಷ ಫಕ್ಕೀರಗೌಡ ಗಾಜೀಗೌಡ್ರ ವಹಿಸಿದ್ದರು.
ಈ ಸಂದರ್ಭದಲ್ಲಿ ರಾಜ್ಯ ಪ್ರ.ಕಾ ಮಳಯಪ್ಪ ದಬಗಲ್.ಜಿಲ್ಲಾ ಗೌರವಧ್ಯಕ್ಷರಾದ ಚಂದ್ರಶೇಖರ ಉಪ್ಪಿನ. ಸಿದ್ದಲಿಂಗಪ್ಪಗೌಡ ಕಬ್ಬಕ್ಕಿ. ಮಲ್ಲೇಶ ಲಮಾಣಿ. ಬಸಣ್ಣ ಮೂಲಿಮನಿ. ಚಂದ್ರಶೇಖರ ಸುಣಗಾರ.ಕಾಳಪ್ಪ ಲಮಾಣಿ. ರಾಮನಗೌಡ ತರ್ಲಗಟ್ಟಿ. ರೇಣುಕಸ್ವಾಮಿ ಹಿರೇಮಠ. ಕೊಟೆಪ್ಪ ಆರೇರ. ಷಣ್ಮುಕಪ್ಪ ಗಿಜರ್ಿ.ನಾಗಪ್ಪ ರಾಮಜ್ಜರ.ನೀಲಪ್ಪ ಬಣಕಾರ. ಜಗದೀಶ ಕುಲಕಣರ್ಿ.ಚಂದ್ರಪ್ಪ ಮಾನೇರ.ಪರಮೇಶಪ್ಪ ಕಟ್ಟೆಕಾರ. ಜಗದೀಶ ಕುಸುಕೂರ. ಮಾಲತೇಶ ಬಡಿಗೇರ. ಚನ್ನವೀರಪ್ಪ ಶಿಗ್ಲಿ.ಮಂಜುನಾಥ ಹಿರೇಮಠ.ಎಸ್.ಪಿ ಪಾಟೀಲ .ಕುಮಾರ ಹರಮಗಟ್ಟಿ. ಈರಪ್ಪ ಮುದಿಯಪ್ಪನವರ.ಶಂಕರರಾವ್ ಕುಲಕಣರ್ಿ.ಮಲ್ಲಪ್ಪ ಬಳ್ಳಾರಿ. ಶಿವನಗೌಡ ಪಾಟೀಲ.ಮಲ್ಲೇಶಪ್ಪ ಲಮಾಣಿ ಸೇರಿದಂತೆ ನೂರಾರು ರೈತರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.