ಬೆಂಗಳೂರು, ಫೆ 05, ಕನ್ನಡ ಚಿತ್ರರಂಗ ರಾಷ್ಟ್ರಮಟ್ಟದಲ್ಲಿ ಪ್ರಖ್ಯಾತ ವಾಗುತ್ತಿದೆ ಅನ್ನೋದು ಸಂತೋಷ ವಾದರೂ, ಕಳೆದ ವರ್ಷ ಬಿಡುಗಡೆಯಾದ ಚಿತ್ರಗಳನ್ನು ನೋಡಿದಾಗ ಗುಣಮಟ್ಟದ ಚಿತ್ರಗಳು ಕಡಿಮೆಯಾಗಿವೆ ಎಂದು ತುಪ್ಪದ ಬೆಡಗಿ, ನಟಿ ರಾಗಿಣಿ ಅಭಿಪ್ರಾಯಪಟ್ಟಿದ್ದಾರೆ. ಇದೇ 14ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿರುವ ‘ಸಾಗುತ ದೂರ ದೂರ’ ಚಿತ್ರದ ಟ್ರೇಲರ್ ಮತ್ತು ಧ್ವನಿಸುರುಳಿ ಬಿಡುಗಡೆಗೊಳಿಸಿ ಮಾತನಾಡಿದ ರಾಗಿಣಿ, ಎಲ್ಲರಿಗೂ ತಿಳಿದಿರುವ ಹಾಗೆ ಕಳೆದ ವರ್ಷ 220 ಚಿತ್ರಗಳು ತೆರೆಕಂಡಿವೆ ಸಂಖ್ಯೆಯಲ್ಲಿ ಹೆಚ್ಚಳವಾಗಿದೆಯಾದರೂ, ಗುಣಮಟ್ಟದ ಚಿತ್ರಗಳು ಬೆರಳೆಣಿಕೆಯಷ್ಟಿವೆ ಎಂದರು ಇದೇ ವೇಳೆ ಸದ್ಯದಲ್ಲೇ ಸಿಹಿ ಸುದ್ದಿ ನೀಡ್ತೀನಿ ಎಂದು ಹೇಳುವ ಮೂಲಕ, ಹೊಸ ಚಿತ್ರದ ಬಗ್ಗೆಯೋ ಅಥವಾ ಮದುವೆಯೇನಾದರೂ . . . ಎಂಬ ಕುತೂಹಲ ಹುಟ್ಟು ಹಾಕಿದ್ದಾರೆ.