ಲೋಕದರ್ಶನ ವರದಿ
ಕೊಪ್ಪಳ 25: ಬಸವರಾಜ ಮರದೂರ ಸಂಪಾದಕತ್ವದಲ್ಲಿ ಪ್ರಕಟವಾಗುತ್ತಿರುವ ಕೊಪ್ಪಳ ಕನಸು ಪತ್ರಿಕೆ ಚಿರಕಾಲ ಜನ ಮಾನಸದಲ್ಲುಳಿಯುವಂತಾಗಲಿ, ಪತ್ರಿಕೆಗಳ ಕಾರ್ಯ ಸಮಾಜಮುಖಿಯಾಗಿರಲಿ ಎಂದು ಖ್ಯಾತ ಪತ್ರಕರ್ತ ರವಿ ಬೆಳಗೆರೆ ಅವರ ಪುತ್ರಿ ಓ ಮನಸೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ಭಾವನಾ ಬೆಳಗೆರೆ ನುಡಿದರು.
ಕೊಪ್ಪಳದಲ್ಲಿ ದಿ. 23ರ ಸಂಜೆ 6 ಗಂಟೆಗೆ ಬಿ ಎಸ್ ಪವಾರ್ ಹೋಟೆಲ್ ನಲ್ಲಿ ಆಯೋಜಿಸಿದ್ದ ಕೊಪ್ಪಳ ಕನಸು ಪತ್ರಿಕೆಯ ವಾಷರ್ಿಕೋತ್ಸವ ಹಾಗೂ ಪ್ರತಿಷ್ಠಿತ ಕನಸು ಮಾಧ್ಯಮ ಪ್ರಶಸ್ತಿ, ಹಾಗೂ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಬಸವರಾಜ ಮರದೂರ ಬರೀ ಕನಸು ಕಾಣುವವರಲ್ಲ ಬದಲಾಗಿ ಕಂಡ ಸಮಾಜ ಮುಖಿ ಕನಸನ್ನು ನನಸಾಗಿಸುವ ಛಲ ಅವರದ್ದಾಗಿದೆ ಎಂದರು.
ನಾಡಿನ ಹೆಮ್ಮೆಯ ಪ್ರತೀಕವಾಗಿ ಕೊಪ್ಪಳ ಕನಸು ಪತ್ರಿಕೆ ಹೊರಹೊಮ್ಮಲಿ ಎಂದು ಆಶಿಸಿದ ಅವರು ಬಸವರಾಜ ಮರದೂರ ಅವರೆ ನಿಮ್ಮ ಸಿನಿಮಾದಲ್ಲಿ ನಂಗೂ ಒಂದು ಛಾನ್ಸ ಕೊಡ್ರೆಲಾ ಎಂದು ಮುಗ್ಧ ನಗೆಯಿಂದ ಸಭಿಕರನ್ನು ನಗೆಗಡಲಲ್ಲಿ ತೇಲಿಸಿದರು.
ಹಿರಿಯ ಸಾಹಿತಿ ಡಾ ಮಹಾಂತೇಶ ಮಲ್ಲನಗೌಡರ ಮಾತನಾಡಿ ಬಸವರಾಜ ಮರದೂರ ಜನಪರ ಕನಸು ಕಟ್ಟಿಕೊಂಡು ತನ್ಮೂಲಕ ಸದಾ ಕನಸಿನ ನನಸಿಗಾಗಿ ಹಾತೊರೆಯುವ ಕೌತುಕದ ಮನಸ್ಸು ಡಾ ಆಮ್ಟೆ, ಮದರ್ ಥೇರೆಸಾರಂತೆ ನೊಂದವರ, ಶೋಷಿತರ ಪರ ಸದಾ ನಿಲ್ಲುವ ಇವರ ವ್ಯಕ್ತಿತ್ವ ಶ್ಲಾಘನೀಯವಾದುದು.
ತುತ್ತು ಅನ್ನಕ್ಕಾಗಿ ಹಸಿದು ಹಪಹಪಿಸುವ ಭಿಕ್ಷುಕರು, ಅನಾಥರಿಗೆ, ಬುದ್ಧಿ ಮಾಂದ್ಯರಿಗೆ ಕೈಯಾರೆ ಉಣಬಡಿಸಿ ಮನುಷ್ಯ ತತ್ವವನ್ನು ಮೆರೆದಿದ್ದಾರೆ ಎಂದ ಅವರು ಸಾಮಾನ್ಯವಾಗಿ ನಾವೆಲ್ಲ ನಮ್ಮ ಹುಟ್ಟಿದ ಹಬ್ಬ ಆಚರಣೆ ಮಾಡಬೇಕೆಂದರೆ ತುಂಬ ವಿಜೃಂಭಣೆಯಿಂದ ಮನೆ ಮಂದೆ, ಬಂಧು ಬಳಗ ಸ್ನೇಹಿತರನ್ನು ಕರೆದುಕೊಂಡು ಆಚರಿಸಿ ಅಲ್ಪ ತೃಪ್ತಿ ಕಾಣುತ್ತೇವೆ ಆದರೆ ಬಸವರಾಜ ಮರದೂರ ಅವರು ಇರಕಲ್ಲಗಡದ ವೃದ್ಧಾಶ್ರಮಕ್ಕೆ ತೆರಳಿ ಅನಾಥ ವೃದ್ಧರಿಗೆ ಊಟ ಮಾಡಿಸಿ ಮನೆಯ ಮಗನಂತೆ ಅವರ ಆಶೀವರ್ಾದ ಪಡೆದು ಕೊಳ್ಳುತ್ತಾರೆ ಇಂಥದ್ದೊಂದು ಪರಂಪರೆ ಅಪರೂಪವಾಗಿದ್ದು ಇಂದಿನ ಯುವಕರಿಗೆ ಮಾದರಿಯಾಗಿದ್ದಾರೆ ಎಂದರು.
ಹಸಿರು ಕ್ರಾಂತಿಯ ಹರಿಕಾರ ರಮೇಶ ಬಳೂಟಗಿ ಮಾತನಾಡಿ ಬಸವರಾಜ ಮರದೂರ ಲವಲವಿಕೆಯ ಉತ್ಸಾಹಿ ಯುವಕ ಅವರು ಸುತ್ತಲಿನ ಪರಿಸರವನ್ನು ಅದಮ್ಯವಾಗಿ ಪ್ರೀತಿಸುವ ಮೂಲಕ ಇತರರಿಗೂ ಪರಿಸರ ಮೂಡಿಸಿದ್ದಾರೆ ಎಂದರು ನಾವು ನಮ್ಮ ಪರಿಸರ ಹಾಗೂ ಔದ್ಯೋಗಿಕವಾಗಿ ಮುಂದುವರೆದರೆ ಹೋದರೆ, ಕಾಲಕಕ್ಕನುಗುಣವಾಗಿ ನಮ್ಮ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಿಕೊಳ್ಳದೆ ಹೋದರೆ ನಮ್ಮ ಮನೆಗೆ ಮೈಸೂರು, ಕೊಡಗು ದಕ್ಷಿಣ ಕನ್ನಡ ಭಾಗದವರು ಕನ್ಯ ಕೊಡಲೂ ಹಿಂದೇಟು ಹಾಕುತ್ತಾರೆ ಎಂದು ಮಾಮರ್ಿಕವಾಗಿ ನುಡಿದರು.
ಚಿತ್ರದುರ್ಗದ ಡಿ ಆರ್ ಪೋಲಿಸ್ ಇನ್ಸ್ಪೆಕ್ಟರ್ ಎಸ್, ಎಸ್ ಗಣೇಶ ಮಾತನಾಡಿ ಕೊಪ್ಪಳದಲ್ಲಿ ನಾನು ಸೇವೆ ಸಲ್ಲಿಸುತ್ತಿರುವಾಗ ನನ್ನ ಹಾಗೂ ಬಸವರಾಜ ಮರದೂರ ಅವರ ಸ್ನೇಹವಾಯಿತು ಅವರು ಮತ್ತು ಬಿ, ಎನ್ ಹೊರಪೇಟೆ ಅವರು ನನ್ನಲ್ಲಿಗೆ ಬಂದು ಡಿ ಆರ್ ಕಛೇರಿ ಸುತ್ತಲೂ ಸಸಿ ನೆಡುವ ಇಂಗಿತವನ್ನು ವ್ಯಕ್ತಪಡಿಸಿ ಕಾಯರ್ೊನ್ಮುಖರಾದರು ನಾನೂ ಸಾಥ್ ನೀಡಿದ್ದೆ ಆ ಸಸಿಗಳು ಮರಗಳಾಗಿ ಇಂದು ನೆರಳು ನೀಡುತ್ತಿವೆ ಎಂದ ಅವರು ಮೂಕ ಪಕ್ಷಿಗಳು ಆಹಾರ ಅರಸಿ ಬರುವುದನ್ನು ಗಮನಿಸಿದ ಮರದೂರ ಅದಕ್ಕಾಗಿ ಕಾಳು ಕಡಿಯ ಆಹಾರದ ನೀರಿನ ವ್ಯವಸ್ಥೆಯನ್ನೂ ಮಾಡಿದ್ದಾರೆ ಅಲ್ಲೊಂದು ಪರಿಸರ ವಾತಾವರಣ ಆಹ್ಲಾದಕರವಾಗಿ ಮೂಡಿದೆ ಅದಕ್ಕಾಗಿ ಬಸವರಾಜ ಮರದೂರ ಅವರಿಗೆ ವೈಯಕ್ತಿಕವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಬದಲಾವಣೆ ಪತ್ರಿಕೆಯ ಸಂಪಾದಕ ಮಂಜುನಾಥ್ ಗೊಂಡಬಾಳ ಮಾತನಾಡಿ ಕೊಪ್ಪಳ ಜಿಲ್ಲೆಯು ಎಲ್ಲ ರಂಗದಲ್ಲಿಯೂ ಮುಂದುವರೆಯಬೇಕಾದರೆ ಸಾರ್ವಜನಿಕರ ಸಹಾಯ ಸಹಕಾರ ಹಾಗೂ ಪ್ರೋತ್ಸಾಹದ ಅಗತ್ಯವಿದೆ ಎಂದರು. ಪತ್ರಿಕೆಗೆ ಚಂದಾದಾರರಾಗಿ ಎಂದು ಓದುಗರಲ್ಲಿ ಮನವಿ ಮಾಡಿದರು.
ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ಹುಬ್ಬಳ್ಳಿ ಆವೃತ್ತಿಯ ಉಪ ಸಂಪಾದಕಿ ಶಾಹೀನ ಮೊಕಾಶಿ ಮಾತನಾಡಿ ಬಸವರಾಜ ಮರದೂರ ಅವರಲ್ಲಿ ಮಾತೃ ಹೃದಯ ಕಂಡಿದ್ದೇನೆ, ಸಾಹಿತಿ ಬಿ ಎನ್ ಹೊರಪೇಟೆ ಅವರ ಮೂಲಕ ಪರಿಚಯಗೊಂಡ ಮರದೂರ ಜೀವನದಲ್ಲಿ ಯಶಸ್ಸು ಕಾಣುವಂತಾಗಲಿ ಎಂದರು. ವ್ಯಾಟ್ಸಸ್, ಫೇಸ್ ಬುಕ್ ಮೂಲಕ ಸಾರ್ವಜನಿಕರಿಗೆ ಸಮಾಜಮುಖಿ ಸಂದೇಶ ರವಾನಿಸುತ್ತ ಅನುಕರಣೀಯವಾಗಿದ್ದಾರೆ ಎಂದರು ನಾವೊಬ್ಬರೆ ಉತ್ತಮವಾಗಿ ಜೀವಿಸಿದರೆ ಸಾಕು ಎನ್ನುವದಲ್ಲ ಬದುಕು ನಮ್ಮ ಜೊತೆಗೆ ಇತರರನ್ನೂ ಕರೆದುಕೊಂಡು ಉತ್ತಮ ಜೀವನ ನಡೆಸಲು ಪ್ರೆರೇಪಿಸಬೇಕು ಅದು ನಿಜವಾದ ಬದುಕು ಎಂದರು.
ಕಾರ್ಯಕ್ರಮದಲ್ಲಿ ಕನಸು ಮಾಧ್ಯಮ ಪ್ರಶಸ್ತಿ ಪುರಸ್ಕೃತರಿಗೆ ಹಾಗೂ ಕನಸು ಅವಾರ್ಡ್ ಪುರಸ್ಕೃತರಿಗೆ ರಮೇಶ್ ಬಳೂಟಗಿ ಅವರು ಸಸಿ ನೀಡಿದ್ದು ಸ್ಮರಣೀಯವಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಹಿರಿಯ ಪತ್ರಕರ್ತ ಸಂತೋಷ ದೇಶಪಾಂಡೆ ಬಸವರಾಜ ಮರದೂರ ಒಬ್ಬ ಹೃದಯವಂತ, ಪತ್ರಕರ್ತನಾಗಿ, ನಟನಾಗಿ, ಸಾಹಿತಿಯಾಗಿ, ಸಮಾಜ ಸೇವಕನಾಗಿ ಗುರುತಿಸಿಕೊಂಡಿರುವ ಇವರಿಗೆ ಶುಭಕೋರುವೆ ಎಂದರು, ವೇದಿಕೆ ಮೇಲೆ ಜಿಲ್ಲಾ ಕಸಾಪ ಅಧ್ಯಕ್ಷ ರಾಜಶೇಖರ ಅಂಗಡಿ, ವರದಿಗಾರ ಶಿವಕುಮಾರ್ ಪತ್ತಾರ, ಸೇರಿದಂತೆ ಅನೇಕ ಗಣ್ಯ ಮಾನ್ಯರು ಉಪಸ್ಥಿತರಿದ್ದರು. ಹಿರಿಯ ಪತ್ರಕರ್ತ ಎಂ ಸಾದಿಕಲಿ, ಅಲ್ಲಾವುದ್ದೀನ ಯಮ್ಮಿ, ಸೇರಿದಂತೆ ಕನಸು ಮಾಧ್ಯಮ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಇದೆ ವೇಳೆ ಕರುನಾಡ ಕೋಗಿಲೆ ಆಡಿಷನ್ ಆಯ್ಕೆಯಾದ ಅನುಶ್ರೀ, ಮಂಜುನಾಥ, ಭವ್ಯ ಅವರನ್ನು ಸನ್ಮಾನಿಸಲಾಯಿತು. ಅನ್ನಪೂರ್ಣ ಮನ್ನಾಪೂರ, ದೇವಿ ಕಾಶಿ, ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.
ಕಿಶೂರಿ ಬೂದನೂರ ಮತ್ತವರ ತಂಡ ಭಾವನಾ ಬೆಳಗೆರೆ ಅವರಿಗೆ ಸಂಪ್ರದಾಯದಂತೆ ಉಡಿ ತುಂಬುವ ಮೂಲಕ ಶುಭ ಹಾರೈಸಿದರು, ಕಾರ್ಯಕ್ರಮವನ್ನು ಸಾಹಿತಿ ಸಂಘಟಕ ಬಿ.ಎನ್.ಹೊರಪೇಟಿ ಅಚ್ಚುಕಟ್ಟಾಗಿ ನಿರೂಪಿಸಿ ವಂದಿಸಿದರು.