ಅಧ್ಯಯನಶೀಲ ಪ್ರವೃತ್ತಿಯನ್ನು ಸಾಹಿತಿಗಳು ಬೆಳೆಸಿಕೊಳ್ಳಲಿ: ಹಿರಿಯ ಸಾಹಿತಿ ಅಲ್ಲಮಪ್ರಭು

ಲೋಕದರ್ಶನ ವರದಿ

ಕೊಪ್ಪಳ 02: ಸಾಹಿತ್ಯ ಕ್ಷೇತ್ರದಲ್ಲಿ ಇರುವಂತಹ ಅನೇಕ ಸಾಹಿತಿಗಳು ಬೇರೆ ವಿವಿಧದ ಪುಸ್ತಕಗಳನ್ನು ಅಧ್ಯಯನ ಮಾಡುವಂತ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು ಎಂದು ಹಿರಿಯ ಸಾಹಿತಿ ಅಲ್ಲಮಪ್ರಭು ಬೆಟದೂರ ಹೇಳಿದರು.

ಅವರು ನಗರದ ಸರಕಾರಿ ನೌಕರರ ಭವನದಲ್ಲಿ ಅಮರ್ಾನ ಪ್ರಕಾಶನ ಅಳವಂಡಿ, ತಿರುಳ್ಗನ್ನಡ ಸಾಹಿತಿಗಳ ಸಹಕಾರ ಸಂಘ, ತಳಮಳ ಪ್ರಕಾಶ ಕೊಪ್ಪಳ ಇವರ ಸಂಯುಕ್ತಾಶ್ರಯದಲ್ಲಿ  ಚಿಲವಾಡಗಿ ಶಾಲೆಯಲ್ಲಿ ಸಹ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಮಹೆಬೂಬ ಮಠದ ಅವರ ಮೊದಲ ಕವನ ಸಂಕಲನ ಬಿಸಿಲು ಕಾಡುವ ಪರಿ ಬಿಡುಗಡೆ ಮಾಡಿ ಮಾತನಾಡುತ್ತಾ, ಸಾಹಿತ್ಯ ಕ್ಷೇತ್ರದತ್ತ ವಾಲುವ ಯುವ ಸಾಹಿತಿಗಳು ಕೇವಲ ತಮ್ಮ ವಿಚಾರಗಳಿಗೆ ಮಾತ್ರ ಮಹತ್ವನ್ನು ನೀಡಿದರೆ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಾಧ್ಯವಾಗುದಿಲ್ಲ.ಸಾಹಿತ್ಯ ಕ್ಷೇತ್ರ ಬಹಳ ದೊಡ್ಡದಾದ ಕ್ಷೇತ್ರವಾಗಿದೆ.ಯುವ ಸಾಹಿತಿಗಳು ತಮ್ಮ ಚಿಂತನೆಗಳ ಜೊತೆಯಲ್ಲಿ ವಿವಿಧ ಲೇಖಕರ ಪುಸ್ತಕಗಳನ್ನು ಅಧ್ಯಯನ ಮಾಡುವಂತ್ತಾ ಪ್ರವೃತ್ತಿಯನ್ನು ಬೆಳೆಸಿಕೊಳ್ಳುವುದರಿಂದ ವಾಸ್ತವದ ಸ್ಥಿತಿಯು ಅರಿವಾಗುವುದರ ಜೊತೆ ಜೊತೆಗೆ ಹೊಸ ಹೊಸ ವಿಚಾರಗಳನ್ನು ತಿಳಿದುಕೊಳ್ಳಲು ಸಾದ್ಯವಾಗುತ್ತದೆ. ಸಾಹಿತಿಗಳು ಹೆಚ್ಚು ಹೆಚ್ಚು ಆತ್ಮ ವಿರ್ಮಶ ಮಾಡಿಕೊಳ್ಳಬೇಕು.ಅಂದಾಗ ಮಾತ್ರ ತಮ್ಮ ತಪ್ಪುಗಳನ್ನು ತಿದ್ದಿಕೊಳ್ಳಲು ಸಹಾಕಾರಿಯಾಗುತ್ತದೆ. ಪ್ರಸ್ತುತ ದಿನಮಾನಗಳಲ್ಲಿ ದೇಶಪ್ರಮ ಎನ್ನುವುದು ಮಾರಾಟದ ಸರಕಾಗಿರುವುದು ವಿಷಾದನೀಯ ಸಂಗತಿಯಾಗಿದೆ. ಕವಿಗಳು ಯಾವಗಲೂ ವಾಸ್ತವ ಸ್ಥಿತಿಯನ್ನು ತಿಳಿಸುವ ಕಾರ್ಯ ಮಾಡುತ್ತಾರೆ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವಿಮರ್ಶಕರಾದ ಪ್ರಮೋದ ತುವರ್ಿಹಾಳ ಮಾತನಾಡಿ, ಮೆಹಬೂಬ ಮಠದ ಬಡತನದಲ್ಲೆ ಬೆಳೆದ ಯುವ ಪ್ರತಿಭೆಯಾಗಿದೆ. ಅಲ್ಲದೇ ಕಾಮರ್ಿಕನ ಮಗನಾಗಿ ಬೆಲೆದು ಬಂದ ಪರಿಯು ಬಹಳ ಸೊಜಿಗವಾಗಿದೆ.ಕವಿಯಾಗುವರಿಗೆ ಅಂತರಾಳವನ್ನು ತಿಳಿದುಕೊಳ್ಳುವ ಕಲೆ ಇರಬೇಕು ಅಂತ್ತಾ ಕಲೆಯನ್ನು ಮೆಹಬೂಬ ಮಠದ ಅವರು ಹೊಂದಿದ್ದಾರೆ.ಬಿಸಲು ಕಾಡುವ ಪರಿ ಎಂಬ ಕವಲನ ಸಂಕಲನವು ಸಮಾಜದಲ್ಲಿ ಇರುವ ವಾಸ್ತವ ಅಂಶಗಳನ್ನು ಒಳಗೊಂಡ ಕವನ ಸಂಕಲನವಾಗಿದೆ. ಯುವ ಕವಿಯಾಗುವ ಎಲ್ಲಾ ಲಕ್ಷಣಗಳನ್ನು ಮೆಹಬೂಬ ಮಠದ ಹೊಂದಿದ್ದಾರೆ. ಸಮಾಜದಲ್ಲಿ ಆಗುವಂತ್ತಾ ಬದಲಾವಣೆಯ ಬಗ್ಗೆ ಕವಿಗಳು ಹೆಚ್ಚು ಗಮನವನ್ನು ಹರಿಸಬೇಕು. ಕವಿತೆಯ ಬಗ್ಗೆ ವಿಮರ್ಶ ಮಾಡುವಂತ್ತಾ ಕಾರ್ಯ ಬಹಳ ಮಹತ್ವವನ್ನು ಪಡೆದಿದೆ.ವಿಮರ್ಶ ಮಾಡುವಂತ್ತಾ ಕವನ ಸಂಕಲನದ ಸಂಪೂರ್ಣವಾಗಿ ಅಧ್ಯಯನ ಮಾಡಿದಾಗ ಮಾತ್ರ ಅರ್ಥಪೂರ್ಣವಾಗಿ ವಿಮಶರ್ಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ರಾಜೋತ್ಸವ ಪ್ರಶಸ್ತಿಯ ಪುರಸ್ಕೃತರಾದ ಎಚ್.ಎಸ್.ಪಾಟೀಲ ಮಾತನಾಡುತ್ತಾ, ಸಾಹಿತಿ ಕ್ಷೇತ್ರದಲ್ಲಿ ಅನೇಕರು ಬಂದು ಹೋಗುತ್ತಾರೆ, ಆದರೆ ಗಟ್ಟಿಯಾಗಿ ನಿಲ್ಲುವವರ ರೀತಿಯಲ್ಲಿ ಕವಿತೆಯನ್ನು ರಚಿಸಬೇಕು. ವಿಶೇಷವಾಗಿ ಅಳವಂಡಿ ಗ್ರಾಮ ವಿವಿಧ ಕ್ಷೇತ್ರಕ್ಕೆ ತನ್ನದೇಯಾದ ಕೊಡುಗೆಯನ್ನು ನೀಡಿದೆ. ಆದರೆ ಸಾಹಿತ್ಯ ಕ್ಷೇತ್ರದಲ್ಲೂ ಕೂಡಾ ತನ್ನದೇಯಾದ ಕೊಡುಗೆಯನ್ನು ನೀಡುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಸಿಲು ಕಾಡುವ ಪರಿಯ ಲೇಖಕರಾದ ಮಹೆಬೂಬ ಮಠದ ವಹಿಸಿದ್ದರು. ಕಾರ್ಯಕ್ರಮದಲ್ಲಿ ಜಿಲ್ಲಾ ಖಜಾಂನೆಯ ಅಧಿಕಾರಿ ಮೆಹೆಬೂಬಿ, ನಿವೃತ್ತ ವಾರ್ತಾಧಿಕಾರಿ ಬಸವರಾಜ ಆಕಳವಾಡಿ, ಶಿಕ್ಷಕರಾದ ಕಾಂತರಾಜ ಶೆಟ್ಟರ್ ಮುಂತಾದವರು ಹಾಜರಿದ್ದರು. ಕಾರ್ಯಕ್ರಮವನ್ನು ಮಹೆಬೂಬ ಮಂಕದಾರ ನಿರೂಪಿಸಿದರು. ಶಿಕ್ಷಕರಾದ ಕೃಷ್ಣಾ ಸ್ವ್ವಾಗತಿಸಿ, ಬಸವರಾಜ ಸಜ್ಜನ ವಂದಿಸಿದರು.