ದಾರ್ಶನಿಕರ ತತ್ವಗಳ ಮೂಲಕ ಆಂತರಿಕ ಸೌಂದರ್ಯ ಬೆಳೆಸಿಕೊಳ್ಳಲಿ: ಪಾಟೀಲ್

ಕೊಪ್ಪಳ 04: ಸವಿತಾ ಮಹರ್ಷಿಗಳು ತಮ್ಮ ತತ್ವಗಳ ಮೂಲಕ ಆಂತರಿಕ ಸೌಂದರ್ಯವನ್ನು ಹೆಚ್ಚಿಸಿಕೊಳ್ಳುವ ಮಾರ್ಗವನ್ನು ರೂಪಿಸಿ ಕೊಟ್ಟರು ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮಹಾಂತೇಶ ಎಸ್. ಪಾಟೀಲ್ ಹೇಳಿದರು.

ಜಿಲ್ಲಾಡಳಿತದ ವತಿಯಿಂದ ನಗರದ ಸಾಹಿತ್ಯ ಭವನದಲ್ಲಿ ಇಂದು (ಫೆ. 04)ಆಯೋಜಿಸಲಾಗಿದ್ದ ಸವಿತಾ ಮಹಷರ್ಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಒಬ್ಬ ವ್ಯಕ್ತಿಗೆ ಬಾಹ್ಯವಾಗಿ ಸುಂದರ ರೂಪ ಹಾಗೂ ಶಿಸ್ತನ್ನು ಕೊಡುವವನೇ ಕ್ಷೌರಿಕ. ಅದರಂತೆ ಆಂತರಿಕ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ದಾರ್ಶನಿಕರ ತತ್ವಗಳನ್ನು ಅಳವಡಿಸಿಕೊಂಡು ನಮ್ಮ ಜೀವನವನ್ನು ಸುಂದರವಾಗಿಸಿಕೊಳ್ಳಬೇಕು. ಸವಿತಾ  ಸಮಾಜವು ಸಕರ್ಾರದ ಸೌಲಭ್ಯಗಳನ್ನು ಬಳಸಿಕೊಂಡು ಆಥರ್ಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ  ಬೆಳೆಯಬೇಕು ಎಂದು ಕರೆ ನೀಡಿದರು.

ಉಪನ್ಯಾಸಕರಾಗಿ ಆಗಮಿಸಿದ್ದ ದೆಹಲಿಯ ಸವಿತಾ ಸಮಾಜದ ಅಖಿಲ ಭಾರತ ಸೇನ್ನ ರಾಷ್ಟ್ರೀಯ ಉಪಾಧ್ಯಕ್ಷರಾದ ಶ್ರೀನಿವಾಸ ನಾಗಲದಿನ್ನಿ ಮಾತನಾಡಿ, ಸ್ವಾತಂತ್ರ್ಯ ಪೂರ್ವದಿಂದಲೇ ಸವಿತಾ ಸಮಾಜ ಅಸ್ತಿತ್ವದಲ್ಲಿತ್ತು. ಸವಿತಾ ಮಹಷರ್ಿಯ ಕಾರ್ಯವೈಖರಿ ಕುರಿತು ಈಗಾಗಲೇ ಇತಿಹಾಸ ಮೆಲಕು ಹಾಕಿದೆ. ಆದಿ ಮಾನವನನ್ನು ಮಾನವನನ್ನಾಗಿ ಮಾಡಿದ ಕೀತರ್ಿ ಸವಿತಾ ಮಹಷರ್ಿಗೆ ಸಲ್ಲುತ್ತದೆ. ಜಾತಿ, ಮತ, ಧರ್ಮ ಎಂಬ ಬೇಧ-ಭಾವವಿಲ್ಲದೆ ಕತ್ತಿ, ಬಾಚಣಿಕೆ, ಕನ್ನಡಿ ಈ ಮೂರು ಅಸ್ತ್ರಗಳಿಂದಲೇ ತಮ್ಮ ಕುಲಕಸುಬನ್ನು ನಿಷ್ಠೆಯಿಂದ ಮಾಡುತ್ತಿದ್ದಾರೆ ಎಂದರು. 

ಹಿರಿಯ ಸಾಹಿತಿ ಎಚ್.ಎಸ್. ಪಾಟೀಲ್ ಮಾತನಾಡಿ, ಬ್ರಹ್ಮ, ವಿಷ್ಣು ಹಾಗೂ ಮಹೇಶ್ವರರು ಯಜ್ಞ ಮಾಡುವಲ್ಲಿ ನಿರತರಾಗಿದ್ದ ವೇಳೆ ತಮ್ಮ ಸೇವೆಗೆಂದು ಪರಶಿವ ತನ್ನ ಬಲಗಣ್ಣಿನಿಂದ ಸವಿತಾ ಮಹಷರ್ಿಯನ್ನು ಸೃಷ್ಟಿಸುತ್ತಾನೆ. ಬಳಿಕ ತನಗೆ ಸಲ್ಲಿಸಿದ ಸೇವೆಯನ್ನು ಭೂಲೋಕದವರಿಗೂ ಸಲ್ಲಿಸುವಂತೆ ಅಗತ್ಯ ಸಲಕರಣೆ, ಡೋಲು, ನಗಾರಿಯೊಂದಿಗೆ ಸಂಗೀತ ಕಲೆಯನ್ನು ವರವಾಗಿ ನೀಡಿ ಕಳುಹಿಸುತ್ತಾನೆ. ಆ ಸಂತತಿ ಇದೀಗ ಸವಿತಾ ಸಮಾಜವಾಗಿದೆ. ಸವಿತಾ ಮಹಷರ್ಿ ಪುತ್ರಿ ಗಾಯತ್ರಿ ಮಂತ್ರವನ್ನು ರಚಿಸಿದಳು. ಆದ್ದರಿಂದ ಸವಿತಾ ಸಮಾಜದವರನ್ನು ಕೀಳಾಗಿ ಕಾಣುವುದನ್ನು ಬಿಟ್ಟು ಗೌರವದಿಂದ ಕಾಣಬೇಕು. ಶರಣರು ಕಾಯಕಕ್ಕೆ ಮಹತ್ವ ನೀಡಿದ ಹಾಗೆ, ಸವಿತಾ ಸಮಾಜದ ಬಾಂಧವರು ಸಹ ತಮ್ಮ ಕುಲ ವೃತ್ತಿಯನ್ನು ಎಂದಿಗೂ ಬಿಟ್ಟಿರುವುದಿಲ್ಲ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ತಹಶೀಲ್ದಾರ ಜೆ.ಬಿ ಮಜ್ಜಗಿ, ಸವಿತಾ ಸಮಾಜದ ಜಿಲ್ಲಾಧ್ಯಕ್ಷರಾದ ರವಿಕುಮಾರ ಸೂಗೂರು, ಸವಿತಾ ಸಮಾಜದ ಉಪಾಧ್ಯಕ್ಷರಾದ ಕಲ್ಲಪ್ಪ ಹೊನ್ನುಂಚಿ, ಕಾರ್ಯದಶರ್ಿ ಯಲ್ಲಪ್ಪ ಸವಿತಾ, ಸವಿತಾ ಸಮಾಜದ ತಾಲೂಕ ಅಧ್ಯಕ್ಷ ಜಿ.ಚಂದ್ರಶೇಖರ ಹುಲಗಿ, ಸವಿತಾ ಸಮಾಜದ ತಾಲೂಕ ಪ್ರತಿನಿಧಿ ದೇವಪ್ಪ ಕಕರ್ಿಹಳ್ಳಿ, ಸವಿತಾ ಸಮಾಜದ ನಿದರ್ೇಶಕಿ ರಂಗಮ್ಮ ಸವಿತಾ, ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನ ಅಧ್ಯಕ್ಷರಾದ ಜ್ಞಾನೇಶ್ವರಿ ಎನ್.ಎಚ್, ಉಪಾಧ್ಯಕ್ಷರಾದ ದೇವಪ್ಪ ಗೌರಿಅಂಗಳ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಕಲಾವಿದರಾದ ಭಾಷ ಹಾಗೂ ತಂಡದವರು ನಾಡಗೀತೆ ಕಾರ್ಯಕ್ರಮ ನಡೆಸಿಕೊಟ್ಟರು. ಸಿ.ವಿ. ಜಡಿಯವರ ನಿರೂಪಿಸಿ, ವಂದಿಸಿದರು. ಜಯಂತಿ ಅಂಗವಾಗಿ ನಗರದ ಶ್ರೀ ಅಕ್ಕಮಹಾದೇವಿ ದೇವಸ್ಥಾನದಿಂದ (ಮಹೇಶ್ವರ ದೇವಸ್ಥಾನ) ದಿಂದ ಕೋಟೆ ರಸ್ತೆ ಗಡಿಯಾರ ಕಂಬ ಮಾರ್ಗವಾಗಿ ಜವಾಹರ ರಸ್ತೆಯ ಮೂಲಕ ಸಾಹಿತ್ಯ ಭವನದವರೆಗೆ ವಿವಿಧ ಕಲಾತಂಡಗಳೊಂದಿಗೆ ಸವಿತಾ ಮಹರ್ಷಿ ಗಳ ಭಾವಚಿತ್ರದ ಮೆರವಣಿಗೆ ನಡೆಯಿತು.