ರಾಮತೀರ್ಥ ನಗರದಲ್ಲಿರುವ ಶಿವಾಲಯ ಸಭಾಭವನ ಉದ್ಘಾಟಿಸಿದ ಸಚಿವ ಸತೀಶ್ ಜಾರಕಿಹೊಳಿ
ಬೆಳಗಾವಿ 05: ಶಿವಾಲಯದ ಸಭಾಭವನ ಸಾಮಾಜಿಕ ಕಾರ್ಯಗಳಿಗೆ , ಶಾಲಾ ಮಕ್ಕಳಿಗಾಗಿ ಹಾಗೂ ಶೈಕ್ಷಣಿಕ ಕಾರ್ಯಗಳಿಗೆ ಸದ್ಬಳಕೆಯಾಗಲಿ, ನಾವು ಕೂಡ ಸಮುದಾಯದ ಭವನಕ್ಕೆ ಧನ ಸಹಾಯ ನೀಡುತ್ತೇವೆ ಎಂದು ಸಚಿವ ಸತೀಶ್ ಜಾರಕಿಹೊಳಿ ಅವರು ಭರವಸೆ ನೀಡಿದರು.
ಇಲ್ಲಿನ ರಾಮತೀರ್ಥ ನಗರದ ಹಮ್ಮಿಕೊಂಡಿದ್ದ ಶಿವಾಲಯದ 19ನೇ ಜಾತ್ರಾ ಮಹೋತ್ಸವ ಹಾಗೂ ಶಿವಾಲಯದ ನೂತನ ಸಭಾಭವನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ಭಾಗದ ನಿವಾಸಿಗಳ ಬಹುವರ್ಷಗಳ ಕನಸು ನನಸಾಗಿದೆ. ಗಣ್ಯರು, ಈ ಭಾಗದ ಶಾಸಕರು ಸಹಾಯ-ಸಹಕಾರಿಂದ ಉತ್ತಮ ಸಭಾಭವನ ಉದ್ಘಾಟನೆಗೊಂಡಿದೆ. ಹೀಗಾಗಿ ಮದುವೆ ಸಮಾರಂಭ ಸೇರಿದಂತೆ ಸಾಮಾಜಿಕ ಕೆಲಸಗಳಿಗೆ ಈ ಭವನ ಅನುಕೂಲವಾಗಲಿ, ಈ ಭಾಗದ ಮಕ್ಕಳಿಗೆ ಐಎಎಸ್ ಹಾಗೂ ಕೆಎಎಸ್ ಉದ್ಯೋಗ ತರಬೇತಿ ನೀಡುವಂತಹ ಕಾರ್ಯಗಳು ನಡೆಯಬೇಕು. ಶಿಕ್ಷಣಕ್ಕೆ ಮಹತ್ವದ ನೀಡಿದರೆ ಮಾತ್ರ ವಿದ್ಯಾರ್ಥಿಗಳು ಪ್ರಗತಿಯತ್ತ ಸಾಗಲು ಸಾಧ್ಯವಿದೆ ಎಂದರು.ಹುಕ್ಕೇರಿ ಹಿರೇಮಠ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ, ಮಠಗಳು ಪೂಜೆಗಳಿಗೆ ಸಿಮೀತವಾಗದೆ ಶೈಕ್ಷಣಿಕ ಕಾರ್ಯಗಳಿಗೆ ಆದ್ಯತೆ ನೀಡಿದರೆ ಮಕ್ಕಳ ಬೆಳವಣಿಗೆಗೆ ಅನುಕೂಲವಾಗಲಿದೆ. ಉತ್ತರ ಕರ್ನಾಟಕ ಭರವಸೆ ನಾಯಕ, ಶೈಕ್ಷಣಿಕ ಕ್ಷೇತ್ರದಲ್ಲಿ ವಿಶೇಷ ಕಾಳಜಿ ಹೊಂದಿರುವ ಸಚಿವ ಸತೀಶ್ ಜಾರಕಿಹೊಳಿ ಈ ಭಾಗದ ಶಾಲೆಗಳ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತಿದ್ದು, ಅವರ ಮಕ್ಕಳು ಅವರದೇ ದಾರಿಯಲ್ಲಿ ಸಾಗುತ್ತಿದ್ದಾರೆ ಎಂದರು.ಸಂಸದ ಜಗದೀಶ್ ಶೆಟ್ಟರ್ ಮಾತನಾಡಿ, ರಾಮತೀರ್ಥ ನಗರ ನಿವಾಸಿಗಳ ಮೇಲೆ ಶಿವನ ಕೃಪೆ ಇದೆ. ಹೀಗಾಗಿ ಈ ಭಾಗದಲ್ಲಿ ಶಿವಾಲಯ ಮಂದಿರ, ಭವನ ನಿರ್ಮಾಣವಾಗಿದೆ. ಈ ಶಿವಾಲಯ ಸಭಾಭವನ ಸಂಸ್ಕೃತ , ಧಾರ್ಮಿಕ , ಸಭೆ ಸಮಾರಂಭಗಳಲ್ಲಿ ಅನುಕೂಲವಾಗಲಿ.
ಈ ಕಟ್ಟಡ ನಿರ್ಮಾಣಕ್ಕೆ ಮಾಜಿ ಸಂಸದ ಸುರೇಶ ಅಂಗಡಿ , ಮಾಜಿ ಶಾಸಕ ಅನಿಲ ಬೆನಕೆ ಸೇರಿದಂತೆ ಅನೇಕ ಗಣ್ಯರು ಸಹಕಾರ ನೀಡಿದ್ದಾರೆ. ಶಿವಾಲಯದ ಭವನ ಬೆಳೆಯಲು ನಾನು ಕೈಜೋಡಿಸುತ್ತೇನೆಂದು ಭರವಸೆ ನೀಡಿದರು.ಸಮರ್ಥನಂ ಸಂಸ್ಥೆಯ ಅಧ್ಯಕ್ಷರಾದ ಮಹಾಂತೇಶ ಕಿವಡಸಣ್ಣನವರ ಮಾತನಾಡಿ, ಅವಕಾಶ ಸಿಕ್ಕರೆ ಯಾರು ಅಂಗವಿಕರಲ್ಲ.ಅದಕ್ಕೆ, ನಾನೆ ಸಾಕ್ಷಿಯಾಗಿದ್ದೇನೆ. ನಮ್ಮದು ಅವಿಭಕ್ತ ಕುಟುಂಬ , ಸಹೋದರರು ನನಗೆ ನೀಡಿರುವ ಅವಕಾಶ ಸದುಪಯೋಗ ಮಾಡಿಕೊಂಡು ಸಮಾಜಕ್ಕಾಗಿ ಅಳಿಲು ಸೇವೆ ಮಾಡುತ್ತಿದ್ದೇನೆ. ಬೆಳಗಾವಿಯಲ್ಲಿ ಅಂಗವಿಕಲ ಸಮರ್ಥನಂ ಕಟ್ಟಡ ನಿರ್ಮಾಣಕ್ಕೆ ಮಾಡುವ ಕನಸು ಇದೆ. ಹೀಗಾಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಬೆಳಗಾವಿಯಲ್ಲಿ ಸ್ಥಳ ಕಲ್ಪಿಸಿಕೊಡಬೇಕೆಂದು ಕೋರಿದರು. ಸಂಸದ ಜಗದೀಶ್ ಶೆಟ್ಟರ್ ಅವರು ಸಮರ್ಥನಂ ಸಂಸ್ಥೆಗೆ ಸಾಕಷ್ಟು ಸಹಾಯ ನೀಡಿದ್ದಾರೆ. ಧಾರವಾಡದಲ್ಲಿ ಸಮರ್ಥನಂ ಕಟ್ಟಡ ನಿರ್ಮಾಣಕ್ಕೆ ಸ್ಥಳವನ್ನು ನೀಡಿದ್ದಾರೆಂದು ಇದೇ ವೇಳೆ ತಿಳಿಸಿದರು.ಸಚಿವ ಎಚ್ ಕೆ. ಪಾಟೀಲ ಮಾತನಾಡಿ, ಕಿವಡಸಣ್ಣನವರ ಕುಟುಂಬ ಬಹಳಷ್ಟು ಮೃದು ಸ್ವಭಾವದ ಕುಟುಂಬ, ಯಾವುದೇ ಕೆಲಸ ಇದ್ದರೂ ನಮ್ರತೆಯಿಂದ ನಿಷ್ಠಾವಂತವಾಗಿ ನಡೆಸುವುದು ಅವರ ಕಾಯಕವಾಗಿದೆ ಎಂದು ಗುಣಗಾಣ ಮಾಡಿದರು. ಅವರ ಕುಟುಂಬವನ್ನು ಸಮಾಜ ಸೇವೆಗಾಗಿ ಮೀಸಲಿಟ್ಟದ್ದಾರೆ. ಕುಟುಂಬದ ಅವರ ಸಹಾಯ ಸಹಕಾರದಿಂದ ಈ ಭಗದಲ್ಲಿ ಅದ್ಬುತವಾಗಿ ಸಭಾಸಭನ ಉದ್ಘಾಟನೆ ಮಾಡಿರುವ ಸಂಸತ ವಿಷಯ, ಅವರ ಸಮಾಜಿಕ ಕಳಕಳಿ ನಿರಂತರವಾಗಿ ಹೀಗೆ ಸಾಗಲಿ ಎಂದು ಹಾರೈಸಿದರು.ಸಚಿವ ಕೆ.ಎಚ್. ಮುನಿಯಪ್ಪ ಮಾತನಾಡಿ, ಬಸವಾದಿ ಶರಣರು ಸಮಸಮಾಜ ನಿರ್ಮಾಣಕ್ಕೆ ಬಹಳಷ್ಟು ಶ್ರಮಿಸಿದರು. ಬಸವಣ್ಣನವರ 12ನೇ ಶತಮಾನದ ಕಲ್ಯಾಣ ಕ್ರಾಂತಿ, ತ್ಯಾಗ, ಬಲಿದಾನ ಸಾಕಷ್ಟಿದೆ. ಒಂದಾಗಿ ಬಾಳಬೇಕು ಎಂದು ಸಮಾಜಕ್ಕೆ ದೊಡ್ಡ ಸಂದೇಶ ನೀಡಿದವರು ಬಸವಾದಿ ಶರಣರು. ಅವರ ಮಾರ್ಗದಲ್ಲಿ ಸಚಿವ ಸತೀಶ್ ಜಾರಕಿಹೊಳಿ ನಡೆಯುತ್ತಿದ್ದಾರೆ ಎಂದು ಹೇಳಿದರು.
ಕೆಎಲ್ ಇ ಕಾರ್ಯಾಧ್ಯಕ್ಷ ಪ್ರಭಾಕರ್ ಕೋರೆ ಮಾತನಾಡಿ, ಸಮರ್ಥನಂ ಸಂಸ್ಥೆಯ ಅಧ್ಯಕ್ಷ ಮಹಾಂತೇಶ ಕಿವಡಸಣ್ಣನವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಶಂಕರಗೌಡ ಪಾಟೀಲ್, ಸಮರ್ಥನಂ ಸಂಸ್ಥೆಯ ಅಧ್ಯಕ್ಷರಾದ ಮಹಾಂತೇಶ ಕಿವಡಸಣ್ಣನವರ, ಮಾಜಿ ಶಾಸಕ ಅನಿಲ ಬೆನಕೆ, ಹಿರಿಯ ನ್ಯಾಯವಾದಿ , ಶಿವಾಲಯ ಟ್ರಸ್ಟ್ ಕಮೀಟಿ ಅಧ್ಯಕ್ಷರಾದ ಎಸ್ . ಎಸ್ ಕಿವಡಸಣ್ಣನವರ , ರಾಜಶೇಖರ ಕೋಶಾವರ, ಈರಣ್ಣ ಮದವಾಲ, ಎಸ್ ಎನ್. ಪೂಜೇರಿ, ಮಹೇಶ ಮಾವಿನ ಕಟ್ಟಿ, ಎನ್ .ಬಿ. ನಿರವಾಣಿ, ಸುರೇಶ್ ಯಾದವ, ರಾಮ ತೀರ್ಥನಗರ ರಹವಾಸಿಗಳ ಸಂಘ, ಶಿವಾಲಯ ಟ್ರಸ್ಟ್ ಕಮಿಟಿ ಹಾಗೂ ರಾಮ ತೀರ್ಥ ನಗರ ಯುವಕ ಮಂಡಳ ಹಾಗೂ ಇತರರು ಇದ್ದರು.