ಲೋಕದರ್ಶನ ವರದಿ
ಮೂಡಲಗಿ 13: 'ತಾಲೂಕಿನ ರೈತ ಬಾಂದವರಿಗೆ ಕೆಲ ದಿನಗಳಿಂದ ಸರಿಯಾದ ಸಮಯಕ್ಕೆ ರಸಗೊಬ್ಬರ ಸಿಗದೇ ರೈತರು ಪರದಾಡುತ್ತಿದ್ದು ಯೋಗ್ಯ ಸಮಯದಲ್ಲಿ ಗೊಬ್ಬರ ಪೂರೈಸಿ ರೈತರ ಹಿತ ಕಾಪಾಡಬೇಕೆಂದು ಜಯ ಕನರ್ಾಟಕ ತಾಲೂಕಾ ಅಧ್ಯಕ್ಷ ಶಿವರಡ್ಡಿ ಹುಚರಡ್ಡಿ ಹೇಳಿದರು.
ಬುಧವಾರದಂದು ತಹಶೀಲ್ದಾರ ಕಾಯರ್ಾಲಯದಲ್ಲಿ ಸಹಾಯಕ ಕೃಷಿ ನಿದರ್ೇಶಕರಿಗೆ ಮನವಿ ಸಲ್ಲಿಸಿ ಮಾತನಾಡಿ, ರೈತರಿಗೆ ಸರಿಯಾದ ಸಮಯಕ್ಕೆ ರಸಗೊಬ್ಬರ ದೊರೆಯದ ಕಾರಣ ಬೆಳೆಗಳು ನಾಶವಾಗಿ ಅಪಾರ ಹಾನಿ ಸಂಭವಿಸುತ್ತಿದೆ.
ಈ ಘಟಣೆಗೆ ಕೃಷಿ ಅಧಿಕಾರಿಗಳು ಮತ್ತು ತಾಲೂಕಾ ಆಡಳಿತ ಹೊನೆಯಾಗಬೇಕಾಗುತ್ತದೆ ಇದನ್ನು ತಪ್ಪಿಸಲು ಅಧಿಕಾರಿಗಳು ಶೀಘ್ರದಲ್ಲಿ ಕ್ರಮ ತಗೆದುಕೊಂಡು ಸಮರ್ಪಕವಾಗಿ ರಸಗೊಬ್ಬರ ಪೋರೈಸಬೇಕು ಈ ಬೇಡಿಕೆ ಶೀಘ್ರ ಈಡೇರದಿದ್ದರೆ ಜಯ ಕನರ್ಾಟಕ ಸಂಘಟಣೆವತಿಯಂದ ರೈತರೊಂದಿಗೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಸಹಾಯಕ ಕೃಷಿ ನಿದರ್ೇಶಕರ ಪರವಾಗಿ ಅರಬಾಂವಿ ಕೃಷಿ ಅಧಿಕಾರಿ ಪಿ.ಎಚ್.ಹುಲಗಬಾಳ ಮನವಿ ಸ್ವೀಕರಿಸಿದರು.
ಈ ಸಮಯದಲ್ಲಿ ತಹಶೀಲ್ದಾರ ಸಿಬ್ಬಂದಿ ಸಿದ್ದು ಬಿಸ್ವಾಗರ, ಜಯ ಕನರ್ಾಟಕ ಸಂಘಟಣೆಯ ತಾಲೂಕಾ ಉಪಾದ್ಯಕ್ಷ ಶಿವನಗೌಡ ಪಾಟೀಲ, ಹುಸೇನಸಾಬ ನದಾಫ, ತಿಮ್ಮಣ್ಣ ಕೋಳಿಗುಡ್ಡ, ದುಂಡಪ್ಪ ಪಾಟೀಲ, ಅಪ್ಪನಗೌಡ ಪಾಟೀಲ, ಮುತ್ತಪ್ಪ ಪಾಟೀಲ, ಮುತ್ತೆಪ್ಪ ಪೂಜೇರಿ, ಬಸನಾಯಕ ಸೂರನಾಯಕ, ಶ್ರೀಕಾಂತ ಕರಿಗಾರ ಇದ್ದರು.