ಪರೀಕ್ಷಾ ದಿಕ್ಸೂಚಿ ವಿದ್ಯಾರ್ಥಿಗಳ ಸಾಧನೆಗೆ ದಿಕ್ಸೂಚಿಯಾಗಲಿ-ಡಾ. ಅಜಿತ ಪ್ರಸಾದ

ಪರೀಕ್ಷಾ ದಿಕ್ಸೂಚಿ ವಿದ್ಯಾರ್ಥಿಗಳ ಸಾಧನೆಗೆ ದಿಕ್ಸೂಚಿಯಾಗಲಿ-ಡಾ. ಅಜಿತ ಪ್ರಸಾದ Let the examination compass be a compass for students' achievement-Dr. Ajit Prasad

ಧಾರವಾಡ 25 : ಹೆಚ್ಚಿನ ಅಂಕಗಳಿಕೆಯ ಧಾವಂತಕ್ಕೆ ನಮ್ಮ ಜಿಲ್ಲೆಯ ವಿದ್ಯಾರ್ಥಿಗಳು ಬೇರೆ ಬೇರೆ ಜಿಲ್ಲೆಗಳಿಗೆ ವಿದ್ಯಾಭ್ಯಾಸಕ್ಕೆ ಮೊರೆ ಹೋಗುತ್ತಿರುವುದು ವಿಷಾದದ ಸಂಗತಿ. ವಿದ್ಯಾರ್ಜನೆಗೆ ಹೆಸರುವಾಸಿಯಾಗಿರುವ ಧಾರವಾಡ ಎಸ್‌.ಎಸ್‌.ಎಲ್‌.ಸಿ ರಾ​‍್ಯಂಕಿಂಗ್‌ನಲ್ಲಿ ಕುಸಿಯುತ್ತಿರುವುದು ಒಳ್ಳೆಯ ಸೂಚನೆ ಅಲ್ಲ. ಮಕ್ಕಳಿಗೆ ಶಾಲೆಯಲ್ಲಿ ಶಿಕ್ಷಕರು ಸರಿಯಾಗಿಯೇ ಪಾಠ ಮಾಡಿದರು ಕೂಡಾ ಅವರ ವಿದ್ಯಾಭ್ಯಾಕ್ಕೆ ಪುರಕವಾದ ವಾತಾವರಣ ನಿರ್ಮಾಣ ಮಾಡುವುದು ಪಾಲಕರ, ಶಿಕ್ಷಕರ ಮತ್ತು ಶಿಕ್ಷಣ ಸಂಸ್ಥೆಗಳ ಆದ್ಯ ಕರ್ತವ್ಯವಾಗಿರುತ್ತದೆ ಎಂದು ಜನತಾ ಶಿಕ್ಷಣ ಸಮಿತಿಯಲ್ಲಿ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಎಸ್‌.ಎಸ್‌.ಎಲ್‌.ಸಿ ವಿದ್ಯಾರ್ಥಿಗಳಿಗಾಗಿ ಬಿಡುಗಡೆ ಮಾಡಿದ್ದ ಪರೀಕ್ಷಾ ದಿಕ್ಸೂಚಿ ಪುಸ್ತಕದ ವಿತರಣಾ ಕಾರ್ಯಕ್ರಮದಲ್ಲಿ ಜೆ.ಎಸ್‌.ಎಸ್ ನ ಕಾರ್ಯದರ್ಶಿಗಳಾದ ಡಾ. ಅಜಿತ ಪ್ರಸಾದರವರು ಮಾತನಾಡುತ್ತಿದ್ದರು.

ಕೇವಲ ಹಣ ಪಾವತಿಸುವ ಮೂಲಕ ಟ್ಯೂಶನ್ ತರಬೇತಿ ಪಡೆದು ಮಕ್ಕಳು ಹೆಚ್ಚಿನ ಅಂಕ ಗಳಿಸಲು ಸಾಧ್ಯವಿಲ್ಲ. ಮನೆಯಲ್ಲಿ ತಂದೆ-ತಾಯಿಗಳು ಮಕ್ಕಳ ಮೊಬೈಲ್ ಸಂಪರ್ಕದಿಂದ ದೂರವಿರಿಸಿ, ಪುಸ್ತಕದ ಜ್ಞಾನವನ್ನು ಬೆಳೆಸಲು ಪ್ರಯತ್ನ ಪಡಬೇಕು. ಸರಿಯಾದ ಪಠ್ಯಕ್ರಮ, ಶಿಸ್ತು, ಸಂಯಮವನ್ನು ಗುರುಗಳು ಶಾಲೆಯಲ್ಲಿ ಕಲಿಸಬೇಕಾಗುತ್ತದೆ. ಕೇವಲ ಬಾಯಿಪಾಠದಿಂದ ಮಾತ್ತ ಅಂಕಗಳಿಕೆ ಸಾಧ್ಯವಿಲ್ಲ ಓದಿದ ವಿಷಯವನ್ನು ಸರಿಯಾಗಿ ಅರ್ಥೈಸಿಕೊಳ್ಳಬೇಕು. ಇಂತಹ ಎಲ್ಲ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಪೂಜ್ಯ ಖಾವಂದರರು ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಅನುಕೂಲವಾಗಲೆಂದು ಈ ಮಾದರಿ ಪುಸ್ತಕವನ್ನು ಪ್ರಕಟಿಸಿದ್ದು. ಕನ್ನಡ, ಹಿಂದಿ, ವಿಜ್ಞಾನ, ಇಂಗ್ಲೀಷ, ಸಮಾಜ ವಿಜ್ಞಾನ, ಗಣಿತಕ್ಕೆ ಸಂಬಂಧಿಸಿದ ಅತಿ ಮುಖ್ಯವಾದ ಮಾಹಿತಿಯನ್ನು ಈ ಪುಸ್ತಕ ಒಳಗೊಂಡಿದೆ. ಶಾಲಾ ಮುಖ್ಯಸ್ಥರು ತಪ್ಪದೇ ತಮ್ಮ ವಿದ್ಯಾರ್ಥಿಗಳಿಗೆ ಇದನ್ನು ತಲುಪಿಸುವ ವ್ಯವಸ್ಥೆ ಮಾಡಿ. ಈ ಪರೀಕ್ಷಾ ದಿಕ್ಸೂಚಿ ವಿದ್ಯಾರ್ಥಿಗಳ ಜೀವನದ ದಿಕ್ಕನ್ನು ಬದಲಿಸುವ ದಿಕ್ಸೂಚಿಯಾಗಲಿ ಎಂದು ಹಾರೈಸಿದರು. 

ಹುಬ್ಬಳ್ಳಿ ಗ್ರಾಮೀಣ ವಿಭಾಗದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಉಮೇಶ ಬೊಮ್ಮಕ್ಕನವರ ಮಾತನಾಡಿ ಎಸ್‌.ಎಸ್‌.ಎಲ್‌.ಸಿ ವಿದ್ಯಾರ್ಥಿಗಳ ಫಲಿತಾಂಶ ಸುಧಾರಣೆಗಾಗಿ ಪ್ರಶ್ನೆ ಪತ್ರಿಕೆ ಬಿಡಿಸುವ ಕಾರ್ಯಾಗಾರ, ಅತಿಥಿ ಉಪನ್ಯಾಸಗಳಂತಹ ಹಲವಾರು ಕಾರ್ಯಕ್ರಮಗಳನ್ನು ಜೆ.ಎಸ್‌.ಎಸ್ ಸದಾಕಾಲ ಆಯೋಜಿಸುತ್ತಾ ಬಂದಿದೆ. ಈ ಪರೀಕ್ಷಾ ದಿಕ್ಸೂಚಿ ಪ್ರಕಟಿಸುವ ಮೂಲಕ ಜೆ.ಎಸ್‌.ಎಸ್ ಸಮಾಜದ ಒಳಿತಾಗಿ ಸದಾ ಮುಂದೆ ಇರುತ್ತದೆ ಎನ್ನುವುದಕ್ಕೆ ಈ ಕಾರ್ಯಕ್ರಮವೇ ಸಾಕ್ಷಿ ಎಂದು ಹೇಳಿದರು. ಇದರಿಂದ ಮಕ್ಕಳು 100ಕ್ಕೆ ನೂರು ಅಂಕ ತೆಗೆದಿಲ್ಲವಾದರೂ ಕನಿಷ್ಠ ಅಂಕಗಳನ್ನಾದರೂ ತೆಗೆದುಕೊಂಡು ಪಾಸಾಗಲಿಗೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. 

ಧಾರವಾಡದ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಗೀರೀಶ ಪದಕಿಯವರು ಮಾತನಾಡಿ ಜೆ.ಎಸ್‌.ಎಸ್ ನ ಕಾರ್ಯದರ್ಶಿಗಳಾದ ಡಾ. ಅಜಿತ ಪ್ರಸಾದರವರು ಹುಬ್ಬಳ್ಳಿ-ಧಾರವಾಡದ ಎಲ್ಲ ಮಕ್ಕಳೂ ಪರಿಕ್ಷೆಯಲ್ಲಿ ತೇರ್ಗಡೆ ಹೊಂದಬೇಕು. ಅವರ ಉನ್ನತ ಶಿಕ್ಷಣದ ಕನಸು ಮೊಟಕಾಗದಿರಲಿ ಮಹದಾಸೆಯಿಂದ ಒಟ್ಟು 30 ಶಾಲೆಗಳು ಸೇರಿದಂತೆ 1250 ವಿದ್ಯಾರ್ಥಿಗಳಿಗೆ ಈ ಪುಸ್ತಕವನ್ನು ನೀಡಿದ್ದಾರೆ. ಮಕ್ಕಳ ಫಲಿತಾಂಶ ಉತ್ತಮವಾಗಿ ಬರಲೆಂದು ಮಾಡಿರುವ ಸಹಾಯಕ್ಕೆ ವಿದ್ಯಾರ್ಥಿಗಳು ಹಾಗೂ ಪಾಲಕರ ವತಿಯಿಂದ ಧನ್ಯವಾದ ತಿಳಿಸಿದರು. ಜೆ.ಎಸ್‌.ಎಸ್ ಐ.ಟಿ.ಐ ಕಾಲೇಜಿನ ಪ್ರಾಚಾರ್ಯರಾದ ಮಹಾವೀರ ಉಪಾದ್ಯೆ ನಿರೂಪಿಸಿ, ವಂದಿಸಿದರು. ಜೆ.ಎಸ್‌.ಎಸ್ ಆಡಳಿತಾಧಿಕಾರಿ ಅರಿಹಂತ ಪ್ರಸಾದ ವೇದಿಕೆಯ ಮೇಲೆ ಉಪಸ್ಥಿತರಿದ್ದರು.