ಬಾಗಲಕೋಟೆ: ಬಯಲು ಮಲ ವಿರ್ಸಜನೆ ಮುಕ್ತ ಮತ್ತು ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕುವ ಮೂಲಕ ಬೀಳಗಿ ಗ್ರಾಮವನ್ನು ಸ್ವಚ್ಛ ನಗರವನ್ನಾಗಿಸಲು ಪಟ್ಟಣ ಪಂಚಾಯತಿಯೊಂದಿಗೆ ಸಾರ್ವಜನಿಕರು ಸಹಕರಿಸಬೇಕೆಂದು ತಾಲೂಕ ಪಂಚಾಯತ ಕಾರ್ಯನಿವರ್ಾಹಕ ಅಧಿಕಾರಿ ಎಮ್.ಕೆ.ತೊದಲಬಾಗಿ ಹೇಳಿದರು.
ಕೇಂದ್ರ ಸರಕಾರದ ಕ್ಷೇತ್ರ ಜನಸಂಪರ್ಕ ಕಾಯರ್ಾಲಯ, ವಿಜಯಪುರ ಮತ್ತು ತಾಲೂಕ ಪಂಚಾಯತ, ಪಟ್ಟಣ ಪಂಚಾಯತ, ಶಿಶು ಅಭಿವೃದ್ಧಿ ಯೋಜನೆ, ಬೀಳಗಿ ಹಾಗೂ ನೆಹರು ಯುವ ಕೇಂದ್ರ, ಭಾರತ ಸೆವಾ ದಳ, ಹಾಗೂ ಮಾತೃ ಶಕ್ತಿ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ನಗರದ ಸಿದ್ದೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡ ಸ್ವಚ್ಛತಾ ಅಭಿಯಾನ ಪ್ಲಾಸ್ಟಿಕ್ ಮುಕ್ತ ಭಾರತ ಕುರಿತ ವಿಶೇಷ ಜಾಗೃತಿ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.
ದೈನಂದಿನ ಜೀವನದಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಹೆಚ್ಚಿಸಿದಂತೆಲ್ಲ ಪರಿಸರ ಮಾಲಿನ್ಯ ಉಂಟಾಗಿ ಆರೋಗ್ಯದ ಮೇಲೂ ದುಷ್ಪರಿಣಾಮ ಉಂಟಾಗುತ್ತ್ತಿದೆ. ರಸ್ತೆಯಲ್ಲಿ ಚೆಲ್ಲುವ ಪ್ಲಾಸ್ಟಿಕ್ ಚೀಲವನ್ನು ದನಗಳು ತಿಂದು, ಅವುಗಳ ಹಾಲು ಮತ್ತು ಮಾಂಸದ ಮೂಲಕ ಮನುಷ್ಯ ದೇಹವನ್ನು ಪ್ಲಾಸ್ಟಿಕ್ ಪ್ರವೇಶಿಸಿ ನಾನಾ ರೋಗಗಳಿಗೆ ಮಾನವ ತುತ್ತಾಗುತ್ತಿದ್ದಾನೆ. ವಿಶೇಷವಾಗಿ ಮಕ್ಕಳಿಗೆ ಕರೆದ ಪದಾರ್ಥಗಳನ್ನು ಸೇವಿಸಲು ಬಿಡಬಾರದು ಎಂದರು.
ಪಟ್ಟಣ ಪಂಚಾಯತಿಯ ಮುಖ್ಯಾಧಿಕಾರಿ ದೇವೆಂದ್ರ ಧನಪಾಲ ಮಾತನಾಡಿ, ಮನೆಯಲ್ಲಿ ಉತ್ಪತ್ತಿಯಾಗುವ ಕಸವನ್ನು ವಿಂಗಡಿಸಿ ಸಾರ್ವಜನಿಕರು ತಪ್ಪದೆ ಕಸಸ ಡಬ್ಬಿಯಲ್ಲಿ ಹಾಕಿ ಅದನ್ನು ಕಸ ತುಂಬುವ ವಾಹನ ಬಂದಾಗ ಅವರಿಗೆ ನೀಡಬೇಕು.
ಇದರಿಂದ ಕಸವನ್ನು ಸಂಸ್ಕರಿಸಲು ಸಹಕಾರಿಯಾಗುತ್ತದೆ. ಈಗಾಗಲೇ ಬೀಳಗಿ ನಗರವನ್ನು ಬಯಲು ಮಲ ವಿರ್ಸಜನೆ ಮುಕ್ತ ಮಾಡಲಾಗಿದೆ. ಹಾಗಯೇ ಪ್ಲಾಸ್ಟಿಕ್ ಮುಕ್ತ ಮಾಡಲು ಜನರು ಸಹಕರಿಸಬೇಕು ಎಂದರು.
ಸಿದ್ದೇಶ್ವರ ವಿದ್ಯಾವರ್ದಕ ಸಂಘದ ಕಾರ್ಯದಶರ್ಿ ಎಸ್.ಎಂ.ಕಟಗೇರಿ ಮಾತನಾಡಿ, ಪರಿಸರ ಮಾಲಿನ್ಯದಿಂದ ಕಾಯಿಲೆಗಳು ಹರಡುತ್ತಿದ್ದು, ಇದನ್ನು ನಿಯಂತ್ರಿಸಲು ಸ್ವಚ್ಛತೆಗೆ ಹೆಚ್ಚಿನ ಗಮನ ಹರಿಸಬೇಕು.
ಇದೇ ಸಂದರ್ಭದಲ್ಲಿ ಬಾಗಲಕೊಟೆಯ ನೆಹರು ಯುವ ಕೇಂದ್ರದ ರಾಮರಾವ ಬಿರಾದಾರ ಮತ್ತು ಏ.ಸಿ.ಡಿ.ಎಸ್ ಮೇಲ್ವಿಚಾರಕರಾದ ಭಾಗ್ಯ ಜಾಧವ ಮಾತನಾಡಿದರು. ಕ್ಷೇತ್ರ ಜನಸಂಪರ್ಕ ಕಾಯರ್ಾಲಯ, ವಿಜಯಪುರದ ಮುರಳೀಧರ್ ಕಾರಾಬಾರಿ ಪ್ರಾಸ್ಥಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ತಾಲೂಕ ಪಂಚಾಯತ ಉಪಾದ್ಯಕ್ಷೆ ಸುನಂದಾ ಪವಾರ, ಎಸ್.ಎಸ್.ಕಾಲೇಜಿನ ಪ್ರಾಚಾರ್ಯರಾದ ರವೀಂದ್ರ ನಾಯಕ, ಮಾತೃಶಕ್ತಿ ಸಂಸ್ಥೆ ಅದ್ಯಕ್ಷ ರವಿಕುಮಾರ ನಾಗನಗೌಡರ, ಅಂಗನವಾಡಿ ಮೇಲ್ವಿಚಾರಕರಾದ ಕವಿತಾ ಅಳವಾಡಿ, ಸುನಂದಾ ಕಾಲತಿಪ್ಪಿ ಹಾಗೂ ಕಾರ್ಯಕತರ್ೆಯರು, ಸ್ವಸಹಾಯ ಸಂಘದ ಸದಸ್ಯರು ಮತು ಪಟ್ಟಣ ಪಂಚಾಯತಿಯ ಆರೋಗ್ಯ ನಿರೀಕ್ಷಕರು ಹಾಗೂ ಸಿಬ್ಬಂದಿ, ಕಾಲೇಜಿನ ವಿದ್ಯಾಧರ್ಿಗಳು ಮುಂತಾದವರು ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ವಿವಿಧ ಸ್ಪಧರ್ೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮ ಪೂರ್ವದಲ್ಲಿ ಕಲಾ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ನಗರದ ಪ್ರಮುಖ ಬೀದಿಗಳಲ್ಲಿ ವಿದ್ಯಾಥರ್ಿಗಳು ಮತ್ತು ಅಂಗನವಾಡಿ ಕಾರ್ಯಕತರ್ೆಯರು, ಸ್ವಸಹಾಯ ಸಂಘದ ಸದಸ್ಯರಿಂದ ಜಾಗೃತಿ ಜಾಥಾ ನಡೆಯಿತು.