ಶಿಕ್ಷಕ ವೃತ್ತಿಯ ಘನತೆ, ಗೌರವ ಎತ್ತಿಹಿಡಿಯಲಿ: ಜಗಜಂಪಿ

ಧಾರವಾಡ 13: ಆದರ್ಶ ಶಿಕ್ಷಕರು ವರ್ಗಗಳನ್ನು ಸ್ವರ್ಗಗಳನ್ನಾಗಿ ಪರಿವರ್ತಿ ಸುವ ಶಕ್ತಿಯನ್ನು ಹೊಂದಿರುತ್ತಾರೆ, ಶಿಕ್ಷಕರು ಕೇವಲ ಸಂಬಳದ ಶಿಕ್ಷಕರಾಗದೇ ವಿದ್ಯಾರ್ಥಿ ಗಳ ಬದುಕನ್ನು ಕಟ್ಟಿಕೊಡುವ ಶಿಕ್ಷಕರಾಗಬೇಕು. ವಿದ್ಯಾರ್ಥಿಗಳಿಗೆ ವಿದ್ಯೆ ನೀಡುವುದರ ಜೊತೆಗೆ ತಂದೆ-ತಾಯಿಗಳಂತೆ ಪ್ರೀತಿ ತೋರಿ ಮಾರ್ಗದರ್ಶನ ಮಾಡಬೇಕು. ಶಿಕ್ಷಕರ ಪಾತ್ರ ಸಮಾಜದಲ್ಲಿ ಪ್ರಮುಖವಾಗಿದೆ. ಶಿಕ್ಷಕ ಅಂದರೆ ಪೂರ್ಣತೆ. ಶಿಕ್ಷಕ ಪದವಿಗಿಂತ ದೊಡ್ಡ ಪದವಿ ಸಮಾಜದಲ್ಲಿ ಮತ್ತೊಂದಿಲ್ಲ, ಇದನ್ನು ಶಿಕ್ಷಕರು ಅರಿತು ವಿದ್ಯಾರ್ಥಿ ಗಳ ಸರ್ವಾ ಗೀಣ ಅಭಿವೃದ್ದಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಶಿಕ್ಷಕ ವೃತ್ತಿಯ ಘನತೆ, ಗೌರವ ಎತ್ತಿಹಿಡಿಯಬೇಕು, ಇಂಥ ಆದರ್ಶ ಗುಣವನ್ನು ದಿ. ರುದ್ರಪ್ಪ ಅಂಗಡಿ ಮಾಸ್ತರರ ವೃತ್ತಿ ಜೀವನದಲ್ಲಿ ನಾವು ಕಾಣಬಹುದಾಗಿದೆ ಎಂದು ಹಿರಿಯ ಸಾಹಿತಿ ಡಾ. ಬಸವರಾಜ ಜಗಜಂಪಿ ಹೇಳಿದರು.

ಕರ್ನಾ ಟಕ ವಿದ್ಯಾವರ್ಧಕ ಸಂಘವು ದಿ. ರೇಣವ್ವ ಅಂಗಡಿ ಹಾಗೂ ದಿ. ರುದ್ರಪ್ಪ ಗುಂಡಪ್ಪ ಅಂಗಡಿ ಸಂಸ್ಮರಣ ದತ್ತಿ ಅಂಗವಾಗಿ ಆಯೋಜಿಸಿದ್ದ `ಗುರುಗಳಾಗಿ ತಂದೆ-ತಾಯಿಗಳು' ವಿಷಯದ ಮೇಲೆ ಉಪನ್ಯಾಸ ನೀಡಿ ಅವರು ಮಾತನಾಡುತ್ತಿದ್ದರು.

ಶಿಕ್ಷಕರಾದವರ ಉಡುಗೆ ತೊಡುಗೆಗಳು ಸರಳವಾಗಿದ್ದು, ನೋಡುವವರಿಗೆ ಗೌರವ ಭಾವನೆ ಬರುವಂತಿರಬೇಕು. ಜಗತ್ತಿನಲ್ಲಿಯೇ ಭಾರತದ ಶಿಕ್ಷಕರು ಗೌರವಾನ್ವಿತರಾಗಿದ್ದಾರೆ. ಮಕ್ಕಳ ಉತ್ತಮ ಭವಿಷ್ಯ ನಿಮರ್ಾಣದಲ್ಲಿ ಪಾಲಕರು ಸಹ ಶಿಕ್ಷಕರಿಗೆ, ತಮ್ಮ ಸಹಕಾರ, ಬೆಂಬಲ ನೀಡಿ ಕೈಜೋಡಿಸಬೇಕು. ಶಿಕ್ಷಕರಾದವರು ವಿಕಾಸಶೀಲ ವ್ಯಕ್ತಿತ್ವ ಹೊಂದಿರಬೇಕು. ಅಂದರೆ ಮಾತ್ರ ವಿದ್ಯಾಥರ್ಿಗಳು  ಗುರುಗಳು ಕಲಿಸಿದ್ದನ್ನು ಸ್ವೀಕರಿಸುತ್ತಾರೆ, ಶಿಕ್ಷಕರ ಪ್ರತಿಯೊಂದು ಪದವು ಹೃದಯದಿಂದ ಹೊರಬರಬೇಕು, ಅದು ವಿದ್ಯಾರ್ಥಿಯ ಮನಸನ್ನು ಪರಿವರ್ತಿ ಸುವ ಶಕ್ತಿ ಹೊಂದಿರುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಹಿರಿಯ ವಿಮರ್ಶಕ, ಸಾಹಿತಿ ಡಾ. ಗುರುಲಿಂಗ ಕಾಪಸೆಯವರು ಮಾತನಾಡಿ, ನಾನು ಕೂಡಾ ಶಿಕ್ಷಕ, ನಮ್ಮ ಕಾಲದಲ್ಲಿ ಮುಲ್ಕಿ ಪರೀಕ್ಷೆ ಪಾಸಾಗುವುದೆಂದರೆ ಬಹಳ ಕಠಿಣವಾಗಿತ್ತು. ಇಂದಿನ ಪಿ.ಎಚ್.ಡಿ ಯನ್ನು ಸರಳವಾಗಿ ಮಾಡಬಹುದು.  ಆದರೆ ಆಗಿನ ಮುಲ್ಕಿ ಪರೀಕ್ಷೆ ಪಾಸು ಮಾಡುವುದು ಸರಳವಾಗಿರಲಿಲ್ಲ. ನನ್ನ ಸಂಪೂರ್ಣ ಸೇವಾವಧಿಯಲ್ಲಿ ನನಗೆ ಕಲಿಸಿದ ಗುರುಗಳ ಆದರ್ಶಗಳು ದಾರಿದೀಪ ಆಗಿದ್ದವು ಮತ್ತು ಇಂದಿಗೂ ನನಗೆ ಅವರ ಜೀವನ ಮಾರ್ಗದರ್ಶನವಾಗಿದೆ. ಆಗಿನ ಕಾಲದಲ್ಲಿ ನಿಸರ್ಗವು ಮನುಷ್ಯನ ಜೊತೆ ಇತ್ತು, ಕಾಲಕಾಲಕ್ಕೆ ಮಳೆ ಬರುತ್ತಿತ್ತು. ಬೆಳೆಗಳಿಗೆ ಬೇಕಾದ ವಾತಾವರಣ ಒದಗುತ್ತಿತ್ತು. ಅದಕ್ಕೆ ಆ ಕಾಲದಲ್ಲಿ ಕೃಷಿಯೆ ಪ್ರಧಾನ ಉದ್ಯೋಗವಾಗಿತ್ತು. ಯಾಕೇ ಆ ಕಾಲದಲ್ಲಿ ನಿಸರ್ಗ ಮನುಷ್ಯನ ಜೊತೆ ಇತ್ತು ? ಏಕೆಂದರೆ ಮನುಷ್ಯ ನಿಸರ್ಗದ ಜೊತೆ ಬದುಕುತ್ತಿದ್ದ  ಧರ್ಮ, ನ್ಯಾಯ, ನೀತಿಯಿಂದ ಕೂಡಿದ  ಸ್ವಚ್ಚವಾದ ಬದುಕಿತ್ತು, ಆಗಿನ ಕಾಲದಲ್ಲಿ ಶಿಕ್ಷಕರನ್ನು ದೇವರೆಂದು ಕಾಣುತ್ತಿದ್ದರು. ಶಿಕ್ಷಕರ ಮುಂದೆ ಯಾರೂ ಕುಳಿತುಕೊಂಡು ಮಾತನಾಡುತ್ತಿರಲಿಲ್ಲ, ಶಿಕ್ಷಕರಿಗೆ ಅಷ್ಟೊಂದು ಗೌರವ, ಮಯರ್ಾದೆ ನೀಡುತ್ತಿದ್ದರು. ಆಗಿನ ಕಾಲದಲ್ಲಿ ಮಕ್ಕಳನ್ನು ಹೊಡೆದರೆ, ಬೈದರೆ ತಮ್ಮ ಮಕ್ಕಳು ಏನೋ ತಪ್ಪು ಮಾಡಿರಬಹುದೆಂದು ಶಿಕ್ಷಕರ ನಡೆಯನ್ನು ಬೆಂಬಲಿಸುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ, ಈಗ ಮಕ್ಕಳಿಗೆ ಹೊಡೆದರೆ, ಬುದ್ಧಿವಾದ ಹೇಳಿದರೆ ಪಾಲಕರು ಶಿಕ್ಷಕರನ್ನು ಪ್ರಶ್ನಿಸುತ್ತಿರುವುದು ವಿಷಾದದ ಸಂಗತಿ ಎಂದರು. 

ಹುಬ್ಬಳ್ಳಿಯ ಎಸ್.ಜೆ.ಎಂ.ವ್ಹಿ.ಎಸ್. ಮಹಿಳಾ ಮಹಾವಿದ್ಯಾಲಯದ ಸಂಗೀತ ವಿಭಾಗದ ಮುಖ್ಯಸ್ಥ ಡಾ. ಡಿ. ಪಿ. ಜ್ಯೋತಿಲಕ್ಷ್ಮಿ ಹಾಗೂ ಸಂಗಡಿಗರು ಸೊಗಸಾಗಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ದಿ. ರೇಣವ್ವ ಹಾಗೂ ದಿ. ರುದ್ರಪ್ಪ ಅಂಗಡಿಯವರ ಭಾವಚಿತ್ರಗಳಿಗೆ ಪುಷ್ಪನಮನದೊಂದಿಗೆ ಗೌರವ ಸಲ್ಲಿಸಲಾಯಿತು. 

ವೇದಿಕೆಯಲ್ಲಿ ಸಂಘದ ಕಾಯರ್ಾಧ್ಯಕ್ಷ ಶಿವಣ್ಣ ಬೆಲ್ಲದ ಹಾಗೂ ಸುಮಂಗಲಾ ಲಿಂಗರಾಜ ಅಂಗಡಿ ಉಪಸ್ಥಿತರಿದ್ದರು. ದತ್ತಿದಾನಿ ಡಾ. ಲಿಂಗರಾಜ ಅಂಗಡಿಯವರು ಮಾತನಾಡಿ, ದತ್ತಿ ಆಶಯ ವಿವರಿಸಿದರು. ಪ್ರೊ. ಕೆ. ಎಸ್. ಕೌಜಲಗಿ ಸ್ವಾಗತಿಸಿದರು. ಸಂಘದ ಪ್ರಧಾನ ಕಾರ್ಯದಶರ್ಿ ಪ್ರಕಾಶ ಉಡಿಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕಾರಿ ಸಮಿತಿ ಸದಸ್ಯ ಸತೀಶ ತುರಮರಿ ನಿರೂಪಿಸಿ, ವಂದಿಸಿದರು.  

ಸಂಘದ ಉಪಾಧ್ಯಕ್ಷ ನಿಂಗಣ್ಣ ಕುಂಟಿ (ಇಟಗಿ), ಸಹಕಾರ್ಯದರ್ಶಿ  ಸದಾನಂದ ಶಿವಳ್ಳಿ, ಕಾರ್ಯಕಾರಿ ಸಮಿತಿ ಸದಸ್ಯರಾದ ಮನೋಜ ಪಾಟೀಲ, ಪ್ರೊ. ಮಾಲತಿ ಪಟ್ಟಣಶೆಟ್ಟಿ, ಡಾ. ಶರಣಮ್ಮ ಗೋರೆಬಾಳ, ಡಾ. ಜಿನದತ್ತ ಹಡಗಲಿ, ಪ್ರೇಮಕ್ಕ ಮ. ಹೊರಟ್ಟಿ, ಪೂಣರ್ಿಮಾ ಹೆಗಡೆ, ಎಸ್. ಜಿ. ಸಬರದ, ಎನ್. ಆರ್. ಬಾಳಿಕಾಯಿ, ಜಿ. ಬಿ. ಹೊಂಬಳ, ಅಶೋಕ ನಿಡವಣಿ, ಪ್ರಮಿಳಾ ಜಕ್ಕಣ್ಣವರ, ಜಯಶ್ರೀ ಜಾತಿಕರ್ತ ಎಫ್. ಬಿ. ಕಣವಿ, ಎಸ್. ಜಿ. ಗಡಾದ, ಎಂ. ವೀರಣ್ಣ ಒಡ್ಡೀನ, ಎಸ್. ಎಂ. ರಾಚಯ್ಯನವರ, ಮಹಾಂತೇಶ ನರೇಗಲ್ಲ, ವಾಯ್. ಸಿದ್ನಾಳ ಹಾಗೂ ಅಂಗಡಿ ಪರಿವಾರದವರು ಸೇರಿದಂತೆ ಅನೇಕರು ಭಾಗವಹಿಸಿದ್ದರು.