ಸಾಂಸ್ಕೃತಿಕ ವೈಭವ ಪುನರುಜ್ಜೀವನಗೊಳ್ಳಲಿ : ಡಾ.ಮಾಳಿ
Let the cultural glory be revived: Dr. Mali
ಲೋಕದರ್ಶನ ವರದಿ
ಹಾರೂಗೇರಿ 25 : ಜ್ಞಾನ, ವಿಜ್ಞಾನ ಮಾತ್ರ ಶಿಕ್ಷಣವಲ್ಲ. ಕಲೆಯೂ ಶಿಕ್ಷಣದ ಅವಿಭಾಜ್ಯ ಅಂಗವಾಗಿದೆ. ಶಾಲಾ-ಕಾಲೇಜುಗಳಲ್ಲಿ ಸಾಂಸ್ಕೃತಿಕ ವೈಭವಗಳು ಪುನರುಜ್ಜೀವನಗೊಳ್ಳುವ ಅಗತ್ಯವಿದೆ ಎಂದು ಹಿರಿಯ ಸಾಹಿತಿ ಡಾ.ವಿ.ಎಸ್.ಮಾಳಿ ಹೇಳಿದರು.
ಪಟ್ಟಣದ ಜನತಾ ಶಿಕ್ಷಣ ಸಂಸ್ಥೆಯ ಭಗವಾನ ವಿಜ್ಞಾನ ಪದವಿ ಪೂರ್ವ ಕಾಲೇಜಿನ ಸಭಾಭವನದಲ್ಲಿ ರವಿವಾರ ಸಂಜೆ ನಡೆದ ಶರದಿ ನಾಟ್ಯ ಕಲಾಬಳಗ ಹಮ್ಮಿಕೊಂಡ ಸಾಂಸ್ಕೃತಿಕ ವೈಭವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಭಾರತೀಯ ಸನಾತನ ಕಲೆಗಳು ವಿಶ್ವವ್ಯಾಪಿ ಮೆಚ್ಚುಗೆಗೆ ಪಾತ್ರವಾಗಿವೆ. ಕಲೆಗಳನ್ನು ಆರಾಧಿಸುವ ಮನಸ್ಸುಗಳು ನಿತ್ಯ ಸಂತೋಷವಾಗಿರುತ್ತವೆ. ಅಳಿವಿನಂಚಿನಲ್ಲಿರುವ ಕಲೆಗಳನ್ನು ಪೋಷಿಸಿ ಬೆಳೆಸಬೇಕೆಂದು ಡಾ.ಮಾಳಿ ಹೇಳಿದರು.
ಹಿರಿಯ ಚಿಂತಕ ಡಿ.ಎಸ್.ನಾಯಿಕ ಸಾಂಸ್ಕೃತಿಕ ವೈಭವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತ ಕಲೆ ಇಲ್ಲದ ಜೀವನವಿಲ್ಲ. ಪ್ರತಿಯೊಂದು ಕಲೆಗೂ ಸಮಾಜ, ವ್ಯಕ್ತಿಯ ವ್ಯಕ್ತಿತ್ವವನ್ನು ಹೆಚ್ಚಿಸುವ ಸಾಮರ್ಥ್ಯವಿದೆ. ಕಲಾವಿದರ ಕಲೆಗೆ ಬೆಲೆ ತಂದು, ಕಲಾ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುವ ಬಹುದೊಡ್ಡ ಜವಾಬ್ದಾರಿ ನಮ್ಮ ಮೇಲಿದೆ ಎಂದರು.
ಚಿಕ್ಕೋಡಿ ಕೆಎಲ್‌ಇ ಕಾನೂನು ಕಾಲೇಜು ಪ್ರಾಚಾರ್ಯ ದೀಪಾಲಿ ಪಾಟೀಲ, ಬೆಳಗಾವಿಯ ಅಶ್ವಿನಿ ಬೆಳವಡಿ ಮಾತನಾಡಿದರು. ರಾಯಬಾಗದ ಪ್ರೇಮ್ಸ್ ಅಕಾಡೆಮಿ, ನದಿ ಇಂಗಳಗಾವಿಯ ಶ್ರೀ ಗುರು ಬಸವ ನೃತ್ಯ ತಂಡದ ಸಮೂಹ ನೃತ್ಯ, ಶರದಿ ನಾಟ್ಯ ಕಲಾಬಳಗದ ವಿದ್ಯಾರ್ಥಿನಿಯರ ಭರತನಾಟ್ಯ, ರಂಗಕಲಾಶ್ರೀ ಸಂಘದ ಕನ್ನಡಪರ ಗೀತೆ, ಡಿ.ಎಸ್.ಚಾಳೇಕರ ಸಂಗೀತ ಕಲಾಬಳಗದ ವಾದನ ಸಂಗೀತ ಪ್ರೀಯರ ಮನಗೆದ್ದವು.
ಈವೇಳೆ ಕಲಾ ಸಾಧಕರಾದ ಡಿ.ಎಸ್.ಚಾಳೇಕರ, ವಿನಾಯಕ ಸುತಾರಾ, ಡಾ.ಮಹಾದೇವ ಅಲಾಸೆ, ಸುಭಾಸ ಪಾಟೀಲ ಹಾಗೂ ಎಸ್ಸೆಸ್ಸೆಲ್ಸಿ ಸಾಧಕ ವಿದ್ಯಾರ್ಥಿಗಳನ್ನು ಶರದಿ ನಾಟ್ಯ ಕಲಾಬಳಗದಿಂದ ಸನ್ಮಾನಿಸಿ, ಗೌರವಿಸಲಾಯಿತು.
ರಾಯಬಾಗ ತಾಲೂಕು ಕಸಾಪ ಘಟಕ ಆಧ್ಯಕ್ಷ ಈರಣ್ಣಗೌಡ ಪಾಟೀಲ, ರಾಮಣ್ಣ ಗಸ್ತಿ, ಬಿ.ಬಿ.ಕರ್ಣವಾಡಿ, ಲೇಖಕ ಬಿ.ಎ.ಜಂಬಗಿ, ಭರತ ಕಲಾಚಂದ್ರ, ಜಾಸ್ಮಿನ ಅಲಾಸೆ, ಡಾ.ನಂದಿತಾ ಒಡೆಯರ, ಈರ್ಪ ಸುತಾರ, ಡಾ.ಅಲಾಸಿ ಜಮಾದಾರ, ವಿಕ್ರಮ ಪತ್ತಾರ, ಪ್ರೊ.ಬಿ.ಎಂ.ಚಿಂಚಲಿಕರ, ವಾಯ್.ಜಿ.ಪತ್ತಾರ, ಸಂತೋಷ ತಮದಡ್ಡಿ, ರವೀಂದ್ರ ಪಾಟೀಲ, ಎಂ.ಎಸ್.ಬಳವಾಡ, ಬಿ.ಎಂ.ಹಣಸಿ, ಪರಮೇಶ ಬಾಡಗಿ, ಎಂ.ಬಿ.ಮದಬಾವಿ ಹಾಗೂ ಮೊದಲಾದ ಗಣ್ಯರು ವೇದಿಕೆಯಲ್ಲಿದ್ದರು.
ಶರದಿ ನಾಟ್ಯ ಕಲಾಬಳಗದ ಕಾರ್ಯದರ್ಶಿ ರಾಧಿಕಾ ಪತ್ತಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಸಾಪ ಕಾರ್ಯದರ್ಶಿ ಶಂಕರ ಕ್ಯಾಸ್ತಿ ಸ್ವಾಗತಿಸಿದರು. ಶ್ರೀಧರ ಹೋಳ್ಕರ ಕಾರ್ಯಕ್ರಮ ನಿರೂಪಿಸಿದರು. ಶಂಕ್ರು, ಅದಿತಿ, ಆರತಿ ವಂದಿಸಿದರು.
ಕನ್ನಡಪರ ನಿರ್ಣಯಕ್ಕೆ ಹಿಂದೇಟು: ಮಹಾಪೌರರ ನಡೆ ಈಗ ಸಂಶಯಕ್ಕೆ ಯಡೆ
ಬೆಳಗಾವಿಯಲ್ಲಿ ಬಿಗ್ ಹಾಕಿದ ಮನೆಗಳಿಗೆ ಪೊಲೀಸ ಭದ್ರತೆ ವ್ಯವಸ್ಥೆಗೆ ಜನರ ಮೆಚ್ಚುಗೆ
ಬೆಳಗಾವಿಗೆ ಬಂದ 20 ಜನ ಬಾಂಗ್ಲಾದವರಲ್ಲ : ಬಂಗಾಳ ಮೂಲದ ಚಿನ್ನದಂಗಡಿ ಕೂಲಿ ಕಾರ್ಮಿಕರು
ಭೀಕರ ಅಪಘಾತಕ್ಕೆ ಓರ್ವ ಸಾವು : ಮೂವರಿಗೆ ಗಂಭೀರ ಗಾಯ
ಶವ ವಾಹನದಲ್ಲಿ ಹಾಳಾದ ಸ್ಟ್ರೆಚರ್ : ಶವ ಸಾಗಿಸಲು ನಾಗರಿಕರ ಪರದಾಟ : ಸ್ಟ್ರೆಚರ್ ಖರೀದಿಗೆ ಪುರಸಭೆಯಲ್ಲಿ ದುಡ್ಡು ಇಲ್ಲವಾ?
ನೀಲಣ್ಣವರ ಪರ ಮಹಾರಾಷ್ಟ್ರದ ಹೂಡಿಕೆದಾರನ ಬ್ಯಾಟಿಂಗ್: ಪೊಲೀಸರ ವಿರುದ್ದ ಆಕ್ರೋಶದ ಅಡಿಯೊ ವೈರಲ್ 