ವಿದ್ಯಾಥರ್ಿಗಳು ಸಂಶೋಧನಾ ಸಾಹಿತ್ಯಗಳ ಅಧ್ಯಯನ ಮಾಡಲಿ: ಗಾಯಿ

ಧಾರವಾಡ 06: ಅನೇಕ ಸಂಶೋಧನಾ ಪತ್ರಿಕೆಗಳ ಅಧ್ಯಯನದಿಂದ ವಿದ್ಯಾಥರ್ಿಗಳಿಗೆ ಶೈಕ್ಷಣಿಕವಾಗಿ ಉನ್ನತಿ ಹೊಂದಲು ಸಾಧ್ಯ ಎಂದು ಕನರ್ಾಟಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಪ್ರಮೋದ ಗಾಯಿ ಹೇಳಿದರು.

ಕವಿವಿಯ ರಾಜ್ಯಶಾಸ್ತ್ರ ವಿಭಾಗದಲ್ಲಿ ನಡೆದ "ರಿಸ್ಟ್ರಕ್ಚರಿಂಗ್ ಪೊಲಿಟಿಕಲ್ ಸೈನ್ಸ್ ಇನ್ ದಿ ಏಜ್ ಆಫ್ ಗ್ಲೋಬಲೈಸೆಷನ್ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಅವರು, ವಿದ್ಯಾಥರ್ಿಗಳ ಆಲೋಚನಾ ಶಕ್ತಿ ಹಾಗೂ ಅಥರ್ೈಸಿಕೊಳ್ಳುವ ಸಾಮಥ್ರ್ಯ ವೃದ್ಧಿಯಾಗಬೇಕಾದರೆ ವಿವಿಧ ಸಂಶೋಧನಾ ಸಾಹಿತ್ಯಗಳ ಕುರಿತು ಅಧ್ಯಯನ ಮಾಡಬೇಕು. ಇಂದಿನ ಜಾಗತಿಕ ಯುಗದಲ್ಲಿ ರಾಜ್ಯಶಾಸ್ತ್ರ ವಿಷಯದ ಆಯಾಮಗಳಾದ ಅಂತರಾಷ್ಟ್ರೀಯ ಸಂಬಂಧ, ವ್ಯಾಪಾರ-ವಹಿವಾಟು, ಮಾನವ ಹಕ್ಕುಗಳು ಹಾಗೂ ಮುಂತಾದ ವಿಷಯಗಳು ಬದಲಾಗಿವೆ. ಹಾಗಾಗಿ ವಿದ್ಯಾಥರ್ಿಗಳು ಹೊಸ ವಿಚಾರಗಳನ್ನು ತಮ್ಮ ಅಧ್ಯಯನದಲ್ಲಿ ರೂಢಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಈ ಪುಸ್ತಕ ಬಹು ಉಪಯುಕ್ತವಾಗಿದೆ ಎಂದು ಹೇಳಿದರು.

ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ. ಎಮ್.ಜಿ. ಖಾನ್ ಪುಸ್ತಕ ಕುರಿತು ಮಾತನಾಡಿ, 2011 ರಲ್ಲಿ ನಡೆದ ರಾಜ್ಯಶಾಸ್ತ್ರ ವಿಷಯದ ಕುರಿತು ನಡೆದ ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಮಂಡನೆಯಾದ ಪತ್ರಿಕೆಗಳ ಸಂಕಲನವೇ ಈ ಪುಸ್ತಕ. ಅಂತರಾಷ್ಟ್ರೀಯ ಚಿಂತಕರು ಹಾಗೂ ಅನೇಕ ವಿದ್ವಾಂಸರು ಮಂಡಿಸಿದ ವಿಷಯಗಳು ಇಲ್ಲಿ ವಿದ್ಯಾಥರ್ಿಗಳಿಗೆ ಲಭ್ಯವಿದೆ ಎಂದು ಹೇಳಿದರು. 

ಮೌಲ್ಯಮಾಪನ ಕುಲಸಚಿವ ಡಾ. ಎನ್.ಎಮ್. ಸಾಲಿ, ಪುಸ್ತಕದ ಸಂಪಾದಕ ಹಾಗೂ ವಿಭಾಗದ ಪ್ರಾಧ್ಯಾಪಕ ಪ್ರೊ. ಹರೀಶ ರಾಮಸ್ವಾಮಿ, ವಿಭಾಗದ ಮುಖ್ಯಸ್ಥ ಪ್ರೊ. ಎಮ್. ಯರಿಸ್ವಾಮಿ, ಪ್ರೊ. ಬಿ.ಎಮ್. ರತ್ನಾಕರ, ಡಾ. ರತ್ನಾ ಎಮ್ ಹಾಗೂ ವಿದ್ಯಾಥರ್ಿಗಳು ಹಾಜರಿದ್ದರು.