ಬೆಳಗಾವಿ 09: ವಿದ್ಯಾಥರ್ಿಗಳಲ್ಲಿ ಶಿಸ್ತು ಕಾರ್ಯಕ್ಷಮತೆ, ನಡತೆ, ಅರಿವು, ಜ್ಞಾನ ಅಡಕವಾಗಿರಬೇಕು. ಜೀವನದಲ್ಲಿ ಸವಾಲುಗಳನ್ನು ಎದುರಿಸದೇ ಸಮಸ್ಯೆಗಳು ಪರಿಹಾರವಾಗುವುದಿಲ್ಲ. ಸತ್ಯವನ್ನು ಒಪ್ಪಿಕೊಳ್ಳುವ ಮನಸ್ಸು ಇರಬೇಕು. ಭಾವನೆಗಳನ್ನು ಅರ್ಥಮಾಡಿಕೊಂಡು ವಿವೇಚನೆಯಿಂದ ಬದುಕು ರೂಪಿಸಿಕೊಳ್ಳಬೇಕು ಎಂದು ಬೆಳಗಾವಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿವರ್ಾಹಕ ಅಧಿಕಾರಿ ಆರ್. ರಾಮಚಂದ್ರನ್ ಅವರು ಹೇಳಿದರು.
ನಗರದ ಪ್ರತಿಷ್ಠಿತ ಕೆ.ಎಲ್.ಇ. ಸಂಸ್ಥೆಯ ರಾಜಾ ಲಖಮಗೌಡ ಪದವಿ ಪೂರ್ವ ಹಾಗೂ ಪದವಿ ಮಹಾವಿದ್ಯಾಲಯದ ಸರ್. ಸಿ. ವ್ಹಿ. ರಾಮನ್ ಸಭಾಂಗಣದಲ್ಲಿ ದಿ. 6ರಂದು ಆಯೋಜಿಸಿದ 2018-19ನೇ ಸಾಲಿನ ಪಠ್ಯ ಪಠ್ಯೇತರ ಚಟುವಟಿಕೆಗಳ ಉದ್ಥಾಟನಾ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಅವರು ಮಾತನಾಡುತ್ತಿದ್ದರು.
ಪ್ರತಿಯೊಬ್ಬ ವ್ಯಕ್ತಿ ಕ್ರೀಯಾಶೀಲತೆಯಿಂದ ಸೇವಾ ಮನೋಭಾವನೆಯ ಜೊತೆಗೆ ಸ್ಪಧರ್ಾಮನೋಭಾವನೆ ಹೊಂದಬೇಕು. ಶಿಕ್ಷಣವನ್ನು ಅರ್ಥಪೂರ್ಣವಾಗಿ ಪೂರೈಸಿಕೊಂಡು ಮಹಿಳೆಯರನ್ನು ಗೌರವ ಭಾವದಿಂದ ಕಂಡುಕೊಳ್ಳಬೇಕು. ಮಾನವೀಯತೆಯ ಜೊತೆಗೆ ದೇಶಭಕ್ತಿಯನ್ನು ವಿದ್ಯಾಥರ್ಿಗಳು ಕಲಿಯಬೇಕು. ವಿದ್ಯಾಥರ್ಿಗಳು ಗುರಿ ಮುಟ್ಟುವವರೆಗೆ ಸತತ ಪ್ರಯತ್ನ ಮಾಡಿ ಜೀವನದಲ್ಲಿ ಯಶಸ್ವಿಯಾಗಬೇಕೆಂದು ಆರ್. ರಾಮಚಂದ್ರನ್ ಅವರು ಕರೆ ನೀಡಿದರು.
ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಸ್ಥಾನಿಕ ಆಡಳಿತ ಮಂಡಳಿಯ ಕಾಯರ್ಾಧ್ಯಕ್ಷ ಎಲ್.ವ್ಹಿ. ದೇಸಾಯಿಯವರು ಮಾತನಾಡುತ್ತಾ, ವಿದ್ಯಾಥರ್ಿಗಳು ಆತ್ಮವಿಶ್ವಾಸದಿಂದ ಪೂರ್ವ ಸಿದ್ಧತೆ ಮಾಡಿಕೊಂಡರೇ ಮಾತ್ರ ಪರೀಕ್ಷೆಗಳಲ್ಲಿ ಉನ್ನತ ಅಂಕ ಪಡೆಯಬಹುದು. ವಿದ್ಯಾಥರ್ಿಗಳು ಸ್ಪಧರ್ಾ ಪರೀಕ್ಷೆಗಳನ್ನು ಎದುರಿಸಬೇಕು. ಹೆಚ್ಚೆಚ್ಚು ಅಧ್ಯಯನ ಮಾಡಿದರೇ ಗೆಲವು ನಿಮ್ಮದಾಗುತ್ತದೆ ಎಂದು ಹೇಳಿದರು.
ಪ್ರೊ. ಯು. ಆರ್. ರಜಪೂತ ಸಂಪಾದಿಸಿದ "ಎ ಹ್ಯಾಂಡ ಬುಕ್ ಆ್ಯನ್ ಎಕ್ಷಪಿರಿಮೆಂಟ" ಹಾಗೂ ಬಿ.ಎಸ್.ಸಿ. ಅಂತಿಮ ವರ್ಷದ ವಿಧ್ಯಾಥರ್ಿನಿ ಚೈತ್ರಾ ಸೈಬಣ್ಣನವರ ಸಂಪಾದಿಸಿದ "ಬೆಳಗಾವಿ ಬೆಳದಿಂಗಳು" ಎಂಬ ಹೊತ್ತಿಗೆಯನ್ನು ಬಿಡುಗಡೆಗೊಳಿಸಲಾಯಿತು.
ರಶ್ಮಿ ಹಾಗೂ ಸಂಗಡಿಗರು ಪ್ರಾಥರ್ಿಸಿದರು. ಪದವಿ ಪ್ರಾಚಾರ್ಯ ಡಾ. ವ್ಹಿ. ಡಿ. ಯಳಮಲಿ ಸ್ವಾಗತಿಸಿದರು. ಪದವಿ ಪೂರ್ವ ಪ್ರಾಚಾರ್ಯ ಎಸ್. ಜಿ. ನಂಜಪ್ಪನವರ ಅತಿಥಿಗಳನ್ನು ಪರಿಚಯಿಸಿದರು. ಜುನೇದ್ ಎಸ್. ಕೆ. ವಂದನೆ ಸಲ್ಲಿಸಿದರು. ನಯನಾ ಮತ್ತು ಆದಿತ್ಯ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ಎಲ್ಲ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.
ಭಾವಚಿತ್ರದಲ್ಲಿ: ಆರ್. ರಾಮಚಂದ್ರನ್ ಅವರು ಮಾತನಾಡುವಾಗ ಪ್ರೊ. ಜಿ. ವ್ಹಿ. ಮಠದ, ಪ್ರೊ. ಆರ್. ಆರ್. ವಡಗಾವಿ, ಪ್ರಾ. ಡಾ. ವ್ಹಿ. ಡಿ. ಯಳಮಲಿ, ಎಲ್. ವ್ಹಿ. ದೇಸಾಯಿ. ಪ್ರಾ. ಎಸ್. ಜಿ. ನಂಜಪ್ಪನವರ, ವಿಜಯಕುಮಾರ ಪಾಟೀಲ ಹಾಗೂ ಡಾ. ಆರ್. ಎಸ್. ಹಿರೇಮಠ ಉಪಸ್ಥಿತರಿದ್ದಾರೆ.