ವಿದ್ಯಾರ್ಥಿಗಳು ಸಂಸ್ಕಾರ ಬೆಳೆಸಿಕೊಂಡು ಉತ್ತಮ ಪ್ರಜೆಗಳಾಗಲಿ: ಹಿರೇಮಠ

Let students develop culture and become good citizens: Hiremath

ವಿದ್ಯಾರ್ಥಿಗಳು ಸಂಸ್ಕಾರ ಬೆಳೆಸಿಕೊಂಡು ಉತ್ತಮ ಪ್ರಜೆಗಳಾಗಲಿ: ಹಿರೇಮಠ 

ಸಿಂದಗಿ 03: ಮಕ್ಕಳು ಶಿಸ್ತು ಅಳವಡಿಸಿಕೊಂಡು ಸರಿಯಾಗಿ ಅಧ್ಯಯನ ಮಾಡಿ ಉನ್ನತ ಸ್ಥಾನ ತಲುಪಬೇಕು ಎಂದು ತಹಶೀಲ್ದಾರ ಪ್ರದೀಪಕುಮಾರ ಹಿರೇಮಠ ಹೇಳಿದರು. ಪಟ್ಟಣದ ಸೋಂಪುರ ರಸ್ತೆಯಲ್ಲಿರುವ ಭುವನೇಶ್ವರಿ ವಿದ್ಯಾವರ್ಧಕ ಸಂಘದ ಕಾವ್ಯಾ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆ, ಆರೂಢ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆ ಹಾಗೂ ಸಂಗಮೇಶ್ವರ ಕಾಲೇಜ್ ಆಫ್ ಫಾರ್ಮಸಿ ವತಿಯಿಂದ ಹಮ್ಮಿಕೊಂಡ ಕಾವ್ಯ ಸಿರಿ ಉತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ವಿದ್ಯಾರ್ಥಿಗಳು ನಿತ್ಯ ಪರಿಶ್ರಮ ಪಡಬೇಕು. ತಾಳ್ಮೆಯಿಂದ ವರ್ತಿಸಬೇಕು. ಉತ್ತಮ ಆರೋಗ್ಯ ಕಾಪಾಡಿಕೊಂಡು ಸಂಸ್ಕಾರವಂತಿಕೆ ಬೆಳೆಸಿಕೊಂಡು ಉತ್ತಮ ಪ್ರಜೆಗಳಾಗಬೇಕು ಎಂದರು. ಶಾಲೆಯಿಂದ ನವೋದಯ ಸೈನಿಕ, ಆದರ್ಶ, ಮೂರಾರ್ಜಿ ವಸತಿ ಶಾಲೆಗಳಿಗೆ ಆಯ್ಕೆಯಾದ ಮಕ್ಕಳಿಗೆ ಶಾಸಕ ಅಶೋಕ ಮನಗೂಳಿ ಸನ್ಮಾನಿಸಿ ಮಾತನಾಡಿದ ಅವರು, ಶಿಕ್ಷಕರು ಮಕ್ಕಳಿಗೆ ಗುಣಾತ್ಮಕ ಸಂಸ್ಕಾರದ ಪಠ್ಯದ ಜೊತೆಗೆ ಸ್ಪರ್ಧಾತ್ಮಕ ವಿಷಯಾಧಾರಿತ ಶಿಕ್ಷಣ ನೀಡಿದಾಗ ವಿದ್ಯಾರ್ಥಿಗಳಲ್ಲಿ ಸ್ಪಾರ್ಧಾ ಮನೋಭಾವ ಮೂಡಲಿ ಸಾಧ್ಯ ಎಂದರು. ಅತಿಥಿ ಸ್ಥಾನವನ್ನು ಅಲಂಕರಿಸಿ ಕನ್ನಡ ಸಾಹಿತ್ಯ ಪರಿಷತ್ತ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ಮಾತನಾಡಿದರು. ಕಾರ್ಯಕ್ರಮದ ಸಾನಿಧ್ಯ ವಹಿಸಿದ ಯಂಕಂಚಿ ಕೂಂಟೋಜಿ ಹಿರೇಮಠದ ಅಭಿನವ ರುದ್ರಮುನಿ ಶಿವಾಚಾರ್ಯರು ಆಶೀರ್ವಚನ ನೀಡಿದರು. ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಅರವಿಂದ ಡೋಣೂರ, ಎಂ.ಎಂ.ಹಂಗರಗಿ, ವಿಶ್ವನಾಥ ಕುರುಡಿ, ರೂಪಾ ಪಾಟೀಲ, ಕಾಂಚನಾ ನಾಗರಬೆಟ್ಟ, ಸಂಸ್ಥೆಯ ಅಧ್ಯಕ್ಷ ಚಂದ್ರಶೇಖರ ನಾರಗಬೆಟ್ಟ, ಪಾಲಕ ಪ್ರತಿನಿಧಿ ಚಂದ್ರಕಾಂತ ಸಿಂಗೆ, ಡಾ.ಗೌರಿ ಉತ್ನಾಳ ವೇದಿಕೆಯ ಮೇಲಿದ್ದರು. ಕಾವ್ಯಾ ಶಾಲೆಯಿಂದ ನವೋದಯ ಸೈನಿಕ, ಆದರ್ಶ, ಮೂರಾರ್ಜಿ ಸೇರಿದಂತೆ ವಿವಿಧ ವಸತಿ ಶಾಲೆಗಳಿಗೆ ಆಯ್ಕೆಯಾದ ಮಕ್ಕಳಿಗೆ ಶಾಸಕ ಅಶೋಕ ಮನಗೂಳಿ ಸನ್ಮಾನಿಸಿ ಗೌರವಿಸಿದರು. ಬಳಿಕ ಶಾಲೆಯ ವಿದ್ಯಾರ್ಥಿಗಳಿಂದ ಸಂಗೀತ, ನೃತ್ಯ ಹಾಗೂ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳು ಜನಮನ ಸೆಳೆದವು. ಸಂದೀಪ ಚಾಂದಕವಟೆ, ರಾಜಕುಮಾರ ಕಾಂಬಳೆ, ಸುಮಾ ವಸ್ತ್ರದ, ಕಾರ್ತಿಕ ನಾಗರಬೆಟ್ಟ, ಕಾವ್ಯಾ ನಾಗರಬೆಟ್ಟ, ಸಂಗನಗೌಡ ಪಾಟೀಲ, ಪಂಡಿತ ಯಂಪೂರೆ, ಮಲ್ಲನಗೌಡ ಪಾಟೀಲ ಇಬ್ರಾಹಿಂಪೂರ, ಪ್ರಸಾದ, ರಮೇಶ ಯಾಳಗಿ, ಮಹಾಂತೇಶ ನೂಲಾನವರ, ವಿರೇಶ, ಜಬ್ಬರ ಸೇರಿದಂತೆ ಶಾಲೆಯ ಬೋಧಕ-ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಹಾಗೂ ಪಾಲಕರು ಇದ್ದರು.