ಧಾರವಾಡ 17: ಕಾತರ್ಿಕ ಮಾಸದಲ್ಲಿ ಶ್ರೀಲಕ್ಷ್ಮೀ ಪೂಜೆ ಹಾಗೂ ಸಹಸ್ರ ದೀಪವನ್ನು ಬೆಳಗಿಸುವ ಈ ಶುಭ ಕಾರ್ಯಕ್ರಮವನ್ನು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ನಡೆಸುತ್ತಿರುವುದು ಶ್ಲಾಘನೀಯ. ಅಜ್ಞಾನವೆಂಬ ಕತ್ತಲೆಯನ್ನು ಕಳೆದು ಜ್ಞಾನವೆಂಬ ದೀಪವನ್ನು ಬೆಳಗಿಸಿ ಸಹಬಾಳ್ವೆ ನಡೆಸಿದ್ದಲ್ಲಿ ಪರಮಾತ್ಮ ಮೆಚ್ಚುತ್ತಾನೆ ಎಂದು ಕುಂದಗೋಳ ಕಲ್ಯಾಣಪೂರ ಮಠದ ತ್ರಿವಿಧದಾಸೋಹಿ ಬಸವಣ್ಣಜ್ಜನವರು ನುಡಿದರು.
ಮುರುಘಾಮಠ ವಲಯ ಸಾಮೂಹಿಕ ಶ್ರೀಲಕ್ಷ್ಮೀ ಪೂಜೆ ಹಾಗೂ ಕಾತರ್ಿಕ ದೀಪೋತ್ಸವ ವ್ಯವಸ್ಥಾಪನಾ ಸಮಿತಿ ಮತ್ತು ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟಗಳ ವತಿಯಿಂದ ಜೋಶಿ ಮಂಗಳ ಕಾಯರ್ಾಲಯದಲ್ಲಿ ಜರುಗಿದ ಧಾಮರ್ಿಕ ಸಭಾ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿಕೊಂಡು ಅವರು ಆಶೀರ್ವಚನ ನೀಡಿದರು.
ಈಗಾಗಲೆ ಧರ್ಮಸ್ಥಳ ಯೋಜನೆಯ ಸ್ವ-ಸಹಾಯ ಸಂಘಗಳ ಮೂಲಕ ಸದಸ್ಯರು ಸಂಘಗಳನ್ನು ರಚನೆ ಮಾಡಿ ಸ್ವ-ಸಹಾಯ ಸಂಘವೆಂಬ ಹಣತೆಯಲ್ಲಿ ಜ್ಞಾನವೆಂಬ ಎಣ್ಣೆಯನ್ನು ಸುರಿದು ಅಭಿವೃದ್ಧಿಯೆಂಬ ಬೆಳಕನ್ನು ಇಂದು ಮನೆ ಮನೆಗಳಲ್ಲಿ ಬೆಳಗಿಸಿಕೊಳ್ಳುತ್ತಿದ್ದಾರೆಂದು ನುಡಿದರು.
ಉದ್ಘಾಟನೆಯನ್ನು ಕ್ಷೇ.ಧ.ಗ್ರಾ.ಯೋಜನೆ ಧಾರವಾಡ ಜಿಲ್ಲೆಯ ನಿದರ್ೇಶಕ ದಿನೇಶ್ ಎಮ್. ಮಾಡಿದರು. ಯೋಜನೆಯು ಸ್ವ-ಸಹಾಯ ಸಂಘದ ಸದಸ್ಯರಿಗೆ ಪರಸ್ಪರ ಸಹಬಾಳ್ವೆ ಸಂಘಟನೆಯ ಶಕ್ತಿಯನ್ನು ಬೆಳಸಿ ಸ್ವಾವಲಂಬನೆಯ ಬದುಕನ್ನು ಕಟ್ಟಿಕೊಂಡು ಸಮುದಾಯದಲ್ಲಿ ಉತ್ತಮ ಪ್ರಜೆಯಾಗಿ ಬಾಳಲು ಯೋಜನೆಯು ಮಾರ್ಗದರ್ಶನ ನೀಡುತ್ತಿದೆ. ಈ ರೀತಿಯ ಸಹಭಾಗಿತ್ವ ಕಾರ್ಯಕ್ರಮವು ವಿಶೇಷವಾಗಿದ್ದು ಹೆಚ್ಚಿನ ಶಕ್ತಿ ಹೊಂದಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದು ಸಂತಸದ ವಿಷಯವಾಗಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ 10 ಸಾವಿರಕ್ಕೂ ಹೆಚ್ಚು ಸಹಸ್ರ ದೀಪವನ್ನು ಬೆಳಗಿಸಲಾಯಿತು.
ತಾಲೂಕಿನ ಯೋಜನಾಧಿಕಾರಿ ಉಲ್ಲಾಸ್ ಮೇಸ್ತ ಅವರು ಧಾಮರ್ಿಕ ಕಾರ್ಯಕ್ರಮದ ಬಗ್ಗೆ ಪ್ರಾಸ್ತಾವಿಸಿ ಸ್ವಾಗತಿಸಿದರು. ಧಾಮರ್ಿಕ ಕಾರ್ಯಕ್ರಮವನ್ನು ರಘುಪತಿ ತಂತ್ರಿಯವರು ವಿಧಿವಿಧಾನಗಳಿಂದ ನೇರವೇರಿಸಿದರು. ಅಧ್ಯಕ್ಷತೆಯನ್ನು ಮುರುಘಾಮಠ ಲಕ್ಷ್ಮೀ ಪೂಜೆ ಮತ್ತು ಕಾತರ್ಿಕ ದೀಪೋತ್ಸವ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷೆ ಶೋಭಾ ನವಲೂರ, ಮುಖ್ಯ ಅತಿಥಿಗಳಾಗಿ ಮರೆವಾಡ ಗ್ರಾಮ ಪಂಚಾಯತ ಉಪಾಧ್ಯಕ್ಷ ಅಡಿವೆವ್ವ ಜಂಟಿನಗೌಡ, ಧಾರವಾಡ ತಾಲೂಕ ಪಂಚಾಂತ ಸದಸ್ಯೆ ಶಾಹಿರಾ ಹಸನನಾಯ್ಕ ನಾಯ್ಕರ ಉಪಸ್ಥಿತರಿದ್ದರು.
ಕೃಷಿ ಮೇಲ್ವಿಚಾರಕ ತನ್ವೀರ್ ಹುಸೇನ ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದರು. ವಲಯದ ಮೇಲ್ವಿಚಾರಕ ತಿಮ್ಮಪ್ಪರವರು ವಂದಿಸಿದರು. ಮೇಲ್ವಿಚಾರಕರಾದ ಸುನೀಲ. ಮಹೇಶ ಹಾಗೂ ಸೇವಾಪ್ರತಿನಿಧಿಗಳು ಭಾಗವಹಿಸಿದ್ದರು.