ಬೆಳಗಾವಿ: ಸಾಹಿತ್ಯ ಕ್ಷೇತ್ರದಲ್ಲೂ ಕೂಡ ಉತ್ತರ ಕನರ್ಾಟಕಕ್ಕೆ ಸಾಕಷ್ಟು ಪ್ರಾಶಸ್ತ್ಯ ಸಿಕ್ಕಿಲ್ಲ. ಕನ್ನಡ ಸಾಹಿತ್ಯ ಪರಿಷತ್ತಿನಿಂದ ಇತ್ತೀಚಿನ ವರ್ಷಗಳಲ್ಲಿ ಈ ಭಾಗದ ಹಿರಿಯ ಸಾಹಿತಿಗಳನ್ನು ಗುರುತಿಸಿ, ಅವರ ಕುರಿತ ಕಾರ್ಯಕ್ರಮಗಳನ್ನು ಆಯೋಜಿಸುವ ಕಾರ್ಯ ಮಾಡಲಾಗುತ್ತಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಮನು ಬಳಿಗಾರ ಹೇಳಿದರು.
ನಗರದ ಕನ್ನಡ ಸಾಹಿತ್ಯ ಭವನದಲ್ಲಿ ರವಿವಾರ 18 ರಂದು ಡಿ.ಎಸ್. ಕಕರ್ಿ ಪ್ರತಿಷ್ಠಾನ ವತಿಯಿಂದ ಆಯೋಜಿಸಲಾಗಿದ್ದ ಡಿ.ಎಸ್. ಕಕರ್ಿ ಅವರ ಜನ್ಮದಿನೋತ್ಸವ ಹಾಗೂ ಕಾವ್ಯ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು,
ದಕ್ಷಿಣ ಕನರ್ಾಟಕದವರು ಉತ್ತರ ಕನರ್ಾಟಕದ ಸಾಹಿತಿಗಳನ್ನು ನೆನೆಸಿಕೊಳ್ಳುವುದೇ ಇಲ್ಲ. ತುಂಗಭದ್ರಾ ನದಿ ದಾಟಿ ಮುಂದಿನ ಪ್ರದೇಶದ ಜನರು ಅವರಿಗೆ ನೆನಪೇ ಆಗುವುದಿಲ್ಲ ಎಂದರು.
ಧಾರವಾಡದ ಸಾಹಿತ್ಯ ಸಮ್ಮೇಳನದಲ್ಲಿ ಗಡಿಭಾಗದ ಸಮಸ್ಯೆಗಳ ಕುರಿತು ಚಚರ್ಿಸಲು ವಿಶೇಷ ಗೋಷ್ಠಿ ಏರ್ಪಡಿಸಲಾಗಿದೆ. ದಕ್ಷಿಣ ಕನರ್ಾಟಕದ ಸಾಹಿತಿಗಳು ಮಾತ್ರ ಖ್ಯಾತರಾಗುತ್ತಾರೆ. ಉತ್ತರ ಕನರ್ಾಟಕದ ಸಾಹಿತಿಗಳಿಗೆ ಸೂಕ್ತ ಗೌರವ ಸಿಗುತ್ತಿಲ್ಲ. ರನ್ನ ಪ್ರತಿಷ್ಠಾನ, ಪಂಪ ಸಾಹಿತ್ಯ ಕಾರ್ಯಕ್ರಮವನ್ನು ಇತ್ತೀಚಿನ ವರ್ಷಗಳಲ್ಲಿ ಮಾಡಿದ್ದೇವೆ ಎಂದು ತಿಳಿಸಿದರು.
ಉತ್ತರ ಕನರ್ಾಟಕದ ಸಾಹಿತಿಗಳ ಪ್ರತಿಷ್ಠಾನ ಸ್ಥಾಪಿಸಲು ಯಾರು ಅಜರ್ಿ ಸಲ್ಲಿಸಿರಲಿಲ್ಲ. ಈ ಬಗ್ಗೆ ಕೇಳಿದರೆ ಸಕರ್ಾರದ ಮುಂದೆ ಕೈ ಚಾಚುವುದು ಬೇಡ ಎನ್ನುತ್ತಾರೆ. ಕನ್ನಡ ಸಂಸ್ಕೃತಿ ಇಲಾಖೆ ಹಾಗೂ ಪರಿಷತ್ನಿಂದ ದಕ್ಷಿಣ ಕಣರ್ಾಟಕ ಭಾಗದವವರು ಒಬ್ಬ ವ್ಯಕ್ತಿಯ ಹೆಸರಿನಲ್ಲಿರುವ ಒಂದು ಸಂಘ, ಸಂಸ್ಥೆಗೆ 10 ರಿಂದ 20 ಲಕ್ಷದವರೆಗೂ ಪಡೆಯುತ್ತಿದ್ದಾರೆ. ವ್ಯವಸ್ಥೆಯೊಳಗೆ ನಾವು ಬದಲಾಗಬೇಕು. ಕನ್ನಡದ ಕಾರ್ಯಕ್ರಮ ಹೆಚ್ಚು ಆಯೋಜನೆ ಮಾಡಬೇಕು ಎಂದರು.
ಪರಿಷತ್ತಿಗೆ ಶಂ.ಬಾ. ಜೋಶಿ ಸ್ಮಾರಕ ನಿಮರ್ಾಣಕ್ಕೆ 10 ಲಕ್ಷ ಮಂಜೂರು ಮಾಡಲಾಗಿದೆ. ಕಕರ್ಿ ಸ್ಮಾರಕ ನಿಮರ್ಾಣಕ್ಕೆ ಶೀಘ್ರದಲ್ಲೇ ಶಂಕುಸ್ಥಾಪನೆ ನೆರವೇರಿಸಲಾಗುವುದು. ಸಾಹಿತ್ಯ ಪರಿಷತ್ತಿನಿಂದ ಆಗಬೇಕಾದ ಕೆಲಸಗಳ ಬಗ್ಗೆ ಸಾರ್ವಜನಿಕರು ಮುಕ್ತವಾಗಿ ತಮ್ಮ ಸಲಹೆ ನೀಡಬಹುದು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ನಾಗನೂರ ರುದ್ರಾಕ್ಷಿ ಮಠದ ಸಿದ್ಧರಾಮ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಕನ್ನಡಿಗರೇ ಕನ್ನಡವನ್ನು ನಿರ್ಲಕ್ಷ್ಯ ಮಾಡಿದರೆ ಬೇರೆ ಭಾಷೆಯವರು ನಮ್ಮ ಭಾಷೆಯನ್ನು ಹೇಗೆ ಗೌರವಿಸುತ್ತಾರೆ. ಪಾಲಕರು ತಮ್ಮ ಮಕ್ಕಳನ್ನು ಇಂಗ್ಲೀಷ್ ಶಾಲೆಗಳತ್ತ ಕಳಿಸುತ್ತಿದ್ದಾರೆ. ಇಂಗ್ಲೀಷ್ ವ್ಯಾಮೋಹವನ್ನು ಬಿಟ್ಟು, ಮಕ್ಕಳಿಗೆ ಕನ್ನಡ ಮಾಧ್ಯಮದಲ್ಲಿಯೇ ಶಿಕ್ಷಣ ಕೊಡಿಸಲು ಮುಂದಾಗಬೇಕು. ಸೃಜನಶೀಲತೆ ಬೆಳೆಸಲು ಮಕ್ಕಳಿಗೆ ಮಾತೃಭಾಷೆಯಲ್ಲಿ ಶಿಕ್ಷಣ ಕೊಡಿಸಬೇಕು. ಗಡಿಭಾಗದಲ್ಲಿ ಕನ್ನಡ ಬೆಳೆಸುವ ಕಾರ್ಯವಾಗಬೇಕು ಎಂದು ಹೇಳಿದರು.
ಸಾಹಿತಿ ಪ್ರಕಾಶ ಕಡಮೆ ಅವರ 'ಅಮ್ಮನಿಗೊಂದು ಕವಿತೆ' ಕವನ ಸಂಕಲನಕ್ಕೆ ಕಾವ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕಕರ್ಿ ಅವರ ಪುತ್ರಿ ಶೈಲಜಾ ತಂಬದ ರಚಿಸಿದ 'ವಸಂತ ಋತು' ಕವನ ಸಂಕಲನವನ್ನು ಬಿಡುಗಡೆಗೊಳಿಸಲಾಯಿತು.
ಈ ಸಂದರ್ಭದಲ್ಲಿ ಸಾಹಿತಿ ಜಲತ್ಕುಮಾರ ಪುಣಜಗೌಡ ಮಾತನಾಡಿ, ಕೃತಿ ಪರಿಚಯಿಸಿದರು. ಸಾಹಿತಿ ಚಂದ್ರಕಾಂತ ಕುಸನೂರ ಅಧ್ಯಕ್ಷತೆ ವಹಿಸಿ ಮಾತನಾಡಿದರು, ಬಸಟೆಪ್ಪಾ ಕಕರ್ಿ, ಚಂದ್ರಶೇಖರ ಕಕರ್ಿ , ಸರಜರ್ೂ ಕಾಟ್ಕರ್ , ಎಮ್ ವಾಯ್, ಮೆಣಸಿನಕಾಯಿ, ಪ್ರೋ ಗೀರಿಶ ಮುರಿಗೆಪ್ಪಾ ಕಕರ್ಿ, ಯು.ರು. ಪಾಟೀಲ. ಎಮ್ ಎಸ್ ಇಂಚಲ, ವಿದ್ಯಾದರ ಮ್ಯಾಗೋಟ್ಟಿ, ಸಿದ್ದನಗೌಡ ಪಾಟೀಲ, ಕಕರ್ಿ ಕುಟುಂಬವರ್ಗ, ಡಾ. ಗುರುದೇವಿ ಹುಲ್ಲೇಪ್ಪನ್ನವರಮಠ , ಸುನಂದಾ ಎಮ್ಮಿ ಪರಿಚಯಿಸಿದರು. ಸುನೀತಾ ಪಾಟೀಲ ಸಂಗಡಿಗರು ಪ್ರಾರ್ಥನಾ ಗೀತೆ ಹಾಡಿದರು, ಪ್ರತಿಕ್ಷಾ ಹಿರೇಮಠ ಅವರ ಗುರುಕಾರುಣ್ಯಾ ನಾಟ್ಯಾಲಯದಿಂದ ನೃತ್ಯ ನಮನ ಮಾಡಿದರು. ಹಾಗೂ ಇತರರು ಉಪಸ್ಥಿತರಿದ್ದರು. ವಿಜಯಲಕ್ಷ್ಮೀ ಪುಟ್ಟಿ ನಿರೂಪಿಸಿದರು. ಅನ್ನಪ್ಪಾ ಕಕರ್ಿ ವಂದಿಸಿದರು.