ಪಾಲಕರು ಮಕ್ಕಳ ಆಸಕ್ತಿಗಳಿಗನುಗುಣವಾಗಿ ಶಿಕ್ಷಣ ನೀಡಲಿ: ಅವನಿ

ಲೋಕದರ್ಶನ ವರದಿ

ಕೊಪ್ಪಳ 29: ಪಾಲಕರು ಮಕ್ಕಳ ಆಸಕ್ತಿಗಳಿಗನುಗುಣವಾಗಿ ಶಿಕ್ಷಣ ನೀಡಬೇಕು. ಮಕ್ಕಳಲ್ಲಿ ಅದ್ಭುತವಾದ ಪ್ರತಿಭೆಗಳಿರುತ್ತವೆ. ಪಾಲಕರು ಆ ಪ್ರತಿಭೆಗಳಿಗೆ ನಿರೆರೆದು ಪೋಷಿಸಬೇಕು. ಮಕ್ಕಳು ವೈದ್ಯರಾಗಬೇಕು, ಅಭಿಯಂತರರಾಗಬೇಕು ಎಂದು ಪಾಲಕರು ನಿರ್ಧರಿಸಿದರೆ ಸಾಲದು. ಆ ಮಗುವಿಗೆ ಅದರ ಬಗ್ಗೆ ಆಸಕ್ತಿ ಇರಬೇಕು. ಕೆಲವು ಮಕ್ಕಳಿಗೆ ಕಲೆ, ಸಾಹಿತ್ಯ, ಸಂಗೀತದ ಬಗ್ಗೆ ಆಸಕ್ತಿ ಇರುತ್ತದೆ. ಆದರೆ ಪಾಲಕರು ಅದರ ಕಡೆಗೆ ಗಮನ ಕೊಡುವುದಿಲ್ಲ. ಕೇವಲ ಉದ್ಯೋಗಾಧಾರಿತ ಶಿಕ್ಷಣದ ಕಡೆಗೆ ಗಮನ ಕೊಡಬಾರದು. ನಮ್ಮ ದೇಶದ ಪಾರಂಪರಿಕ ಕಲೆಗಳಾದ ಭರತನಾಟ್ಯ, ಬಯಲಾಟ, ನಾಟಕ, ಯಕ್ಷಗಾನ, ಜಾನಪದ ಮುಂತಾದ ಕಲೆಗಳನ್ನು ಉಳಿಸಿ ಬೆಳಸಿಕೊಂಡು ಹೋಗುವ ಜವಾಬ್ದಾರಿ ಎಲ್ಲರ ಮೇಲಿದೆ. ನಾನು ಈ ಸಮ್ಮೇಳನಾಧ್ಯಕ್ಷತೆಯ ಸ್ಥಾನವನ್ನು ಕನಸು ಮನಸ್ಸಿನಲ್ಲಿಯೂ ನಿರೀಕ್ಷಿಸಿರಲಿಲ್ಲ. ನನ್ನ ಭರತನಾಟ್ಯ ಕಲೆಗೆ ನನ್ನ ಅಜ್ಜ-ಅಜ್ಜಿ, ತಂದೆ-ತಾಯಿಗಳು ಹಾಗೂ ಗುರುಗಳು ಎಲ್ಲರೂ ನನಗೆ ಪ್ರೋತ್ಸಾಹ ನೀಡಿದರು. ಇದರ ಶ್ರೇಯಸ್ಸು   ಇವರೆಲ್ಲರಿಗೂ ಸಲ್ಲುತ್ತದೆ ಎಂದು ಅವನಿ ಗಂಗಾವತಿ ಹೇಳಿದರು.

ಅವರು ಕೊಪ್ಪಳದ ಸಾಹಿತ್ಯ ಭವನದಲ್ಲಿ ಕೊಪ್ಪಳ ಜಿಲ್ಲಾ ನಾಗರಿಕರ ಸಾಂಸ್ಕೃತಿಕ ವೇದಿಕೆ ಹಮ್ಮಿಕೊಂಡ ಮಕ್ಕಳ 5ನೇ ಸಾಂಸ್ಕೃತಿಕ ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.

ಕೊಪ್ಪಳ ಜಿಲ್ಲಾ ನಾಗರಿಕ ವೇದಿಕೆಯ ಉಪಾಧ್ಯಕ್ಷರಾದ ಸಿದ್ಧಪ್ಪ ಹಂಚಿನಾಳ, ಹರಗಿನಡೋಣಿ ಮಠದ ಅಭಿನವ ಸಿದ್ಧಲಿಂಗಶಿವಾಚಾರ್ಯ ಮಹಾಸ್ವಾಮಿಗಳು, ಬಸವನಬಾಗೇವಾಡಿಯ ಭೂಕೈಲಾಸ ಗದ್ದುಗೆ ಹಿರೇಮಠದ ಗುರುಶಾಂತವೀರ ಶಿವಾಚಾರ್ಯ ಮಹಾಸ್ವಾಮಿಗಳು, ಕೊಪ್ಪಳ ಜಿಲ್ಲಾ ನಾಗರಿಕ ವೇದಿಕೆಯ ಅಧ್ಯಕ್ಷರಾದ ಮಹೇಶಬಾಬು ಸುವರ್ೆ, ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಹನುಮಂತಪ್ಪ ಚಿಲವಾಡಗಿ, ಸಿರಿಗನ್ನಡ ವೇದಿಕೆಯ ಜಿಲ್ಲಾಧ್ಯಕ್ಷರಾದ ಜಿ.ಎಸ್.ಗೋನಾಳ, ಸಿರಿಗನ್ನಡ ವೇದಿಕೆಯ ಗೌರವಾಧ್ಯಕ್ಷರಾದ ಎಂ.ಬಿ.ಅಳವಂಡಿ, ಹಿರಿಯರಾದ ಮಾರುತಿರಾವ್ ಸುವರ್ೆ,  ಸಂಶೋಧಕರಾದ ಹನುಮಂತರೆಡ್ಡಿ ಬಳ್ಳಾರಿ, ಲೇಖಕಿಯಾದ ಅನ್ನಪೂರ್ಣ ಮನ್ನಾಪೂರ, ಶಿಕ್ಷಣಪ್ರೇಮಿಯಾದ ಸಿದ್ಧಲಿಂಗಯ್ಯ ಹಿರೇಮಠ,  ಪತ್ರಕರ್ತರಾದ   ಎಂ. ಸಾದಿಕ್ ಅಲಿ ಮುಂತಾದವರು  ವೇದಿಕೆಯ ಮೇಲೆ ಉಪಸ್ಥಿತರಿದ್ದರು.

ಶಿವಕುಮಾರ ಹಿರೇಮಠ ಸ್ವಾಗತಿಸಿದರು. ವಾಯ್.ಬಿ. ಜೂಡಿ ನಿರೂಪಿಸಿದರು. ಫಕೀರಪ್ಪ ಗೋಟೂರು ವಂದಿಸಿದರು.