ಸಾಹಿತ್ಯ ಸಾಧನೆ ಮೂಲಕ ಉನ್ನತ ಪ್ರಶಸ್ತಿ ಪಡೆದುಕೊಳ್ಳಲಿ: ಡಾ.ವೀರಣ್ಣ
ಧಾರವಾಡ: ಹಿರಿಯ ಸಾಹಿತಿ ಡಾ.ವೀರಣ್ಣ ರಾಜೂರ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ನಲ್ಲಿ ಹತ್ತಾರು ಪ್ರಶಸ್ತಿ, ದತ್ತಿಗಳಿವೆ. ಈ ಪೈಕಿ ನೃಪತುಂಗ ಹಾಗೂ ಶ್ರೀವಿಜಯ ಪ್ರಶಸ್ತಿಗಳು ಮಾತ್ರ ಪ್ರಮುಖವಾದವುಗಳು. ಗೌರವಯುತ ಸಹ ಹೌದು. ಈ ಬಾರಿ ನೃಪತುಂಗ ಡಾ.ಚೆನ್ನವೀರ ಕಣವಿ ಅವರಿಗೆ ಹಾಗೂ ಶ್ರೀವಿಜಯ ಮಾತರ್ಾಂಡಪ್ಪ ಅವರಿಗೆ ಒಲಿದು ಬಂದಿದ್ದು ಇಬ್ಬರು ಧಾರವಾಡದವರು ಎನ್ನುವುದು ಹೆಮ್ಮೆಯ ವಿಷಯ. ಮಾತರ್ಾಂಡಪ್ಪ ಪಶುಸಂಗೋಪನೆ ಇಲಾಖೆ ನೌಕರನಾಗಿದ್ದರೂ ಸಾಹಿತ್ಯ, ಸಂಘಟನೆ, ನಾಟಕಕರಾನಾಗಿ ಅನೇಕ ಮುಖಗಳಾಗಿ ಕಾರ್ಯ ಮಾಡುತ್ತಿದ್ದಾರೆ. ಯಾವುದೇ ಅಜರ್ಿ ಹಾಕದೇ ಪಡೆಯುವ ಪ್ರಶಸ್ತಿಗಳಲ್ಲಿ ಇದೂ ಸಹ ಒಂದಾಗಿದ್ದು ಬರುವ ದಿನಗಳಲ್ಲಿ ಇನ್ನೂ ಉನ್ನತ ಸಾಹಿತ್ಯ ಸಾಧನೆ ಮೂಲಕ ಉನ್ನತ ಪ್ರಶಸ್ತಿಗಳನ್ನು ಪಡೆದುಕೊಳ್ಳಲಿ ಎಂದು ಹಾರೈಸಿದರು.
ಕನ್ನಡ ಸಾಹಿತ್ಯ ಪರಿಷತ್ನ ಪ್ರತಿಷ್ಟಿತ ಶ್ರೀವಿಜಯ ಪ್ರಶಸ್ತಿ ಪುರಸ್ಕೃತ ಮಾತರ್ಾಂಡಪ್ಪ ಕತ್ತಿ ಅವರಿಗೆ ಪಂ. ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಟಾನ, ರಂಗ ಪರಿಸರ, ರಂಗ ಸಂಗ ಸಂಸ್ಥೆ ಹಾಗೂ ಕಲಾಸಂಗಮ ಜಂಟಿಯಾಗಿ ನಗರದ ರಂಗಾಯಣದ ಸಾಂಸ್ಕೃತಿಕ ಸಮುಚ್ಛಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ನಾಗರಿಕ ಸನ್ಮಾನ ನೆರವೇರಿಸಿ ಮಾತನಾಡಿದರು. ಅವರು ವೃತ್ತಿಯ ಜೊತೆಗೆ ಕಲೆಗಳನ್ನು ಪ್ರವೃತ್ತಿಯಾಗಿಟ್ಟುಕೊಳ್ಳುವುದು ಮನಸ್ಸಿನ ನೆಮ್ಮದಿಯನ್ನು ಕೊಡುತ್ತದೆ ಎಂದು ಹೇಳಿದರು.
ಆಕಾಶವಾಣಿ ನಿವೃತ್ತ ನಿದರ್ೇಶಕ ಸಿ.ಯು. ಬೆಳ್ಳಕ್ಕಿ ಮಾತನಾಡಿ ಸಾಹಿತ್ಯ, ಸಂಗೀತ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಹೊಸ-ಹೊಸ ಪ್ರತಿಭೆಗಳು ಸೃಷ್ಟಿಯಾಗುತ್ತಿದ್ದು, ಆ ಪ್ರತಿಭೆಗಳನ್ನು ಧಾರವಾಡದ ಸಾರ್ವಜನಿಕ ವಲಯ ಪ್ರೋತ್ಸಾಹಿಸಿ ಬೆಳೆಸಬೇಕಿದೆ. ಮಣ್ಣಿನಲ್ಲಿ ಪ್ರತಿಭೆ ಸಾಹಿತ್ಯ, ಸಂಗೀತ ಕ್ಷೇತ್ರಕ್ಕೆ, ಇಡೀ ರಾಷ್ಟ್ರದಲ್ಲಿಯೇ ದೊಡ್ಡ ಕೊಡುಗೆ ನೀಡಿದ ಊರು ಧಾರವಾಡ. ಅವಿಭಜಿತ ಧಾರವಾಡ ಎಂದು ರಾಜಕೀಯ ಮಾಡುವ ಬದಲು ಧಾರವಾಡ, ಹಾವೇರಿ ಹಾಗೂ ಗದಗ ಮಣ್ಣು, ಮಂದಿ ಒಂದೇ ಎಂದ ಅವರು, ಈ ಮಣ್ಣಿನಲ್ಲಿಯೇ ಸಾಹಿತ್ಯ, ಸಂಗೀತವಿದೆ. ಯಾವ ರಾಜಾಶ್ರಯ ಇಲ್ಲದೇ ಬರೀ ಇಲ್ಲಿನ ಸಹೃದಯರ ಪ್ರೋತ್ಸಾಹದಿಂದಲೇ ಸಾಮಾನ್ಯ ವ್ಯಕ್ತಿಯೂ ಕೂಡಾ ಎತ್ತರಕ್ಕೆ ಬೆಳೆದ ಉದಾಹರಣೆಗಳಿವೆ. ಪ್ರಸ್ತುತ ಈ ಕ್ಷೇತ್ರಗಳಲ್ಲಿ ಸಾಕಷ್ಟು ಬದಲಾವಣೆಗಳು ಆಗುತ್ತಿದ್ದು ಮತ್ತಷ್ಟು ನಿರೀಕ್ಷೆಗಳು, ಅವಕಾಶಗಳು ಹೆಚ್ಚುತ್ತಿವೆ. ಅವುಗಳನ್ನು ಬಳಸಿಕೊಂಡು ಯುವ ಪ್ರತಿಭೆಗಳು ಉನ್ನತ ಮಟ್ಟಕ್ಕೆ ಏರಿ ಧಾರವಾಡದ ಹೆಸರನ್ನು ನಿರಂತರವಾಗಿ ಪ್ರಜ್ವಲಗೊಳಿಸಬೇಕು ಎಂದು ಹೇಳಿದರು.
ರಂಗಕಮರ್ಿ ವಿಠ್ಠಲ ಕೊಪ್ಪದ ಮಾತನಾಡಿ, ಕನ್ನಡದ ಮೊದಲ ಗ್ರಂಥ ಕವಿರಾಜಮಾರ್ಗವನ್ನು ರಚಿಸಿದ ಕವಿ ಶ್ರೀವಿಜಯ ಹೆಸರಿನಲ್ಲಿ ಮಾತರ್ಾಂಡಪ್ಪ ಅವರಿಗೆ ಪ್ರಶಸ್ತಿ ಬಂದಿದ್ದು, ಅವರ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ. ಮೊದಲಿನಂತೆ ಧಾರವಾಡದಲ್ಲಿ ಸಾಹಿತ್ಯ, ಸಂಗೀತದ ಗಾಳಿ ಬೀಸುವಿಕೆ ಕಡಿಮೆಯಾಗುತ್ತಿದ್ದು ಇದನ್ನು ಸವಾಲಾಗಿ ಸ್ವೀಕರಿಸಿ ಯುವ ಸಾಹಿತಿಗಳು ಈ ಭಾಗದಲ್ಲಿ ಮತ್ತೇ ಸಾಹಿತ್ಯ, ಸಂಗೀತದ ಪ್ರಭಾವ ಹೆಚ್ಚಿಸಬೇಕು ಎಂದು ಹೇಳಿದರು.
ಕನರ್ಾಟಕ ವಿದ್ಯಾವರ್ಧಕ ಸಂಘದ ಕೋಶಾಧ್ಯಕ್ಷ ಕೃಷ್ಣಾ ಜೋಶಿ, ಕಲಾ ಸಂಗಮದ ಪ್ರಭು ಹಂಚಿನಾಳ, ಸಂಘಟಕ ಶಂಕರ ಹಲಗತ್ತಿ, ಮಾತನಾಡಿ ಚಿಲಿಪಿಲಿ ಸಂಸ್ಥೆಯಲ್ಲಿ ಸದಾ ಕ್ರೀಯಾಶೀಲವಾಗಿ ಇದ್ದುಕೊಂಡು ಪತ್ರಿಕೆಯನ್ನು ಉತ್ತುಂಗಕ್ಕೆ ಒಯ್ಯಲು ಶ್ರಮಿಸಿದ ಮಾತರ್ಾಂಡಪ್ಪ ಇನ್ನೂ ಹೆಚ್ಚು ಹೆಚ್ಚು ಬರೆದು ಉನ್ನತದ ಬರಹದಿಂದ ಹೊರಹೊಮ್ಮಲಿ ಎಂದು ಹೇಳಿದರು.
ಶಿಕ್ಷಕರ ಸಂಘಟನೆಯಾಗಿರುವ ಎಐಪಿಟಿಎ- ರಾಷ್ಟ್ರೀಯ ಉಪಾಧ್ಯಕ್ಷ ಬಸವರಾಜ ಗುರಿಕಾರ ಮಾತನಾಡಿ, ಪ್ರಸ್ತುತ ಸನ್ನಿವೇಶದಲ್ಲಿ ಪ್ರಶಸ್ತಿ ಅದರಲ್ಲೂ ಉನ್ನತ ಪ್ರಶಸ್ತಿಗಳನ್ನು ಪ್ರಾಮಾಣಿಕವಾಗಿ ಪಡೆಯುವುದು ಸಾಮಾನ್ಯದ ಮಾತಲ್ಲ. ಪ್ರಶಸ್ತಿಗಳನ್ನು ಒತ್ತಡ ಹೇರಿ ಕಿತ್ತುಕೊಳ್ಳುವ ಸಂಸ್ಕೃತಿ ಎಲ್ಲೆಡೆ ಇದೆ. ಇಂತಹ ಸಂದರ್ಭದಲ್ಲಿ ಅಜರ್ಿ ಹಾಕದೇ ಸ್ವಂತ ಸಾಹಿತ್ಯ ಸಾಧನೆಯ ಹಿನ್ನೆಲೆಯಲ್ಲಿ ಕಿರಿಯ ವಯಸ್ಸಿನಲ್ಲಿ ಪ್ರತಿಷ್ಟಿತ ಶ್ರೀವಿಜಯ ಪ್ರಶಸ್ತಿ ಪಡೆದುಕೊಂಡಿದ್ದು ಸಾಮಾನ್ಯದ ಮಾತಲ್ಲ ಎಂದರು.
ನಾಗರಿಕ ಸನ್ಮಾನ ಸ್ವೀಕರಿಸಿದ ಮಾತರ್ಾಂಡಪ್ಪ ಕತ್ತಿ, ಬಾಲ್ಯದಲ್ಲಿ ಅನುಭವಿಸಿದ ಕಷ್ಟದ ದಿನಗಳೇ ಅಕ್ಷರ ರೂಪ ತಾಳಲು ಕಾರಣ. ನನ್ನ ಅಕ್ಷರ ರೂಪದ ಸಾಹಿತ್ಯವನ್ನು ಗುರುತಿಸಿ ಕಸಾಪ ನೀಡಿದ ಪ್ರಶಸ್ತಿ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ. ಓದಿನೊಂದಿಗೆ ಅನುಭವಗಳನ್ನು ಇನ್ನಷ್ಟು ಅಕ್ಷರ ರೂಪಗಳಲ್ಲಿ ನೀಡಲು ಹವಣಿಸುತ್ತಿದ್ದೇನೆ. ಸದ್ಯದಲ್ಲಿಯೇ ಡಾ.ದ.ರಾ. ಬೇಂದ್ರೆ ಅವರ ಕುರಿತಾದ ಅಂಬಿಕಾತನಯದತ್ತ ಕಾವ್ಯ ಅನುಸಂಧಾನ ಹಾಗೂ ಕಾಳಮ್ಮ ಹೊಂಗಲ ಅವರ ಜೀವನ ಸಾಧನೆ ಕೃತಿಗಳನ್ನು ತರುತ್ತಿದ್ದೇನೆ ಎಂದರು. ಅಧ್ಯಕ್ಷತೆ ವಹಿಸಿದ್ದ ಪಂ. ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಟಾನದ ಅಧ್ಯಕ್ಷ ಕೆ.ಎಚ್. ನಾಯಕ ಮಾತನಾಡಿ ಪ್ರತಿಯೊಂದು ಕಾರ್ಯವನ್ನು ಕ್ರೀಯಾಶೀಲವಾಗಿ ಹಮ್ಮಿಕೊಳ್ಳುತ್ತಾ ಅವಕಾಶ ವಂಚಿತರಿಗೆ ಅವಕಾಶಗಳನ್ನು ಕೊಡುತ್ತಾ ಅದರಲ್ಲಿ ತೃಪ್ತಿಪಡುವ ವ್ಯಕ್ತಿ ಮಾತರ್ಾಂಡಪ್ಪನವರು ಇನ್ನೂ ಹೆಚ್ಚು ಕಾರ್ಯಗಳನ್ನು ಮಾಡಲಿ ಎಂದು ಹೇಳಿದರು.
ಹಾಸ್ಯ ಕಲಾವಿದ ಮಹಾದೇವ ಸತ್ತಿಗೇರಿ ಮಾತನಾಡಿದರು. ಡಾ. ಶಶಿಧರ ನರೇಂದ್ರ, ಬಿ.ಐ. ಈಳಿಗೇರ, ನಿಂಗಣ್ಣ ಕುಂಠಿ, ಎಲ್.ಐ. ಲಕ್ಕಮ್ಮನವರ, ಮಲ್ಲೇಶಪ್ಪ ಸಾಧನಿ, ಸಾಯಿಕುಮಾರ ಹಿಳ್ಳಿ, ಶ್ರೀಶೈಲ ಚಿಕನಳ್ಳಿ ಹಾಗೂ ಹಾವೇರಿ ಕಲಾಸ್ಪಂದನದ ಕಾರ್ಯದಶರ್ಿ ಮಂಜುನಾಥ ಕತ್ತಿ, ಯೋಗೇಶ ಪಾಟೀಲ, ಜಗದೀಶ ಎಮ್ಕೆ, ಗಿರೀಶ ಕರಿಗಾರ, ಚಂದ್ರು ಶಂಕ್ರಿಕೊಪ್ಪ ಮತ್ತು ಸದಸ್ಯರು, ಆನಂದ ಪಡೆಪ್ಪನವರ, ಪಶುಸಂಗೋಪನಾ ಇಲಾಖೆಯ ಸಂಘದವರು ಇದ್ದರು. ಕಲಾ ಸಂಗಮದ ಪೃಭು ಹಂಚಿನಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೇಮಾನಂದ ಶಿಂಧೆ ಸ್ವಾಗತ ಗೀತೆ ಪ್ರಸ್ತುತಪಡಿಸಿದರು. ಸುರೇಶ ಬೆಟಗೇರಿ ಸ್ವಾಗತಿಸಿದರು. ವಿಜಯಲಕ್ಷ್ಮಿ ಶೆಟ್ಟಿ ನಿರೂಪಿಸಿದರು. ಶಿವಾನಂದ ಹೂಗಾರ ವಂದಿಸಿದರು.