ಜೀವದಲ್ಲಿ ಅಹಂಕಾರ ಬಿಟ್ಟು ತಾಳ್ಮೆ ಜೀವನ ಮಾಡಬೇಕು- ಮುಂಡರಗಿ ಜಗದ್ಗುರು

Let go of pride in life and live patiently - Mundaragi Jagadguru

ಜೀವದಲ್ಲಿ ಅಹಂಕಾರ ಬಿಟ್ಟು ತಾಳ್ಮೆ ಜೀವನ ಮಾಡಬೇಕು- ಮುಂಡರಗಿ ಜಗದ್ಗುರು

ಕುಕನೂರ 03: ಜೀವನದಲ್ಲಿ ಯಶಸ್ಸು ಸಾಧಿಸಲು ನಮ್ಮಲ್ಲಿ ತಾಳ್ಮೆ ಇರಬೇಕು, ತಾಳಿದವನು ಬಾಳುತ್ತಾನೆ ಎಂದು ಮುಂಡರಗಿ ಜಗದ್ಗುರು ಅನ್ನದಾನೀಶ್ವರ ಮಠದ ಜಗದ್ಗುರು ಡಾ ಅನ್ನದಾನೀಶ್ವರ ಮಹಾಶಿವಯೋಗಿಗಳು ಹೇಳಿದರು. 

ಅವರು ಕುಕನೂರ ತಾಲೂಕಿನ ತಳಕಲ್ ಗ್ರಾಮದ ಮುಂಡರಗಿ ಅನ್ನದಾನೀಶ್ವರ ಶಾಖಾಮಠದ ಜಾತ್ರ ಮಹೋತ್ಸವ ಮತ್ತು ಕಲ್ಬುರ್ಗಿ ಶರಣಬಸವೇಶ್ವರ ಪುರಾಣ ಮಂಗಳದ ಸಾನೀದ್ಯ ವಹಿಸಿ ಮಾತನಾಡುತ್ತಾ ಗುರುವಿನ ಮಾರ್ಗದರ್ಶನದಲ್ಲಿ ನಡೆಯಬೇಕು, ಸೇವಾ ಮಾಡುವ ಗುಣವನ್ನ ನಾವುಗಳು ಅಳವಡಿಸಿಕೊಳ್ಳಬೇಕು. ನಮ್ಮಲ್ಲಿ ತ್ಯಾಗದ ಬದುಕು ಇರಬೇಕು, ಒಬ್ಬರನ್ನ ನೋಡಿ ಖುಷಿ ಪಡಬೇಕು, ಬದುಕು ನಾಲ್ಕು ಜನರ ಕಲ್ಯಾಣಕ್ಕೆ ದಾರಿಯಾಗಬೇಕು, ಹಮ್ಮು ಬಿಮ್ಮುಗಳು ಇಲ್ಲದ ನಮ್ಮದಾಗಬೇಕು ಎಂದರು.ನಂತರ ಮಾತನಾಡಿದ ತಳಕಲ್ ಶಾಖಾಮಠದ ಪೂಜ್ಯ ಡಾ.ಮಹಾದೇವ ಸ್ವಾಮೀಜಿ ಮುಂಡರಗಿ ಅನ್ನದಾನೀಶ್ವರ ಮಠಕ್ಕೆ 900 ವರ್ಷಗಳ ಭವ್ಯವಾದ ಪರಂಪರೆಯಿದೆ, ಮಠ ತನ್ನ ಮೂಲ ಆಸ್ತಿಯನ್ನು ಹಲವಾರು ಕಲ್ಯಾಣ ಕಾರ್ಯಗಳಿಗೆ ದಾನ ನೀಡಿದೆ, ಸಾಹಿತ್ಯಿಕವಾಗಿ 260ಕ್ಕೂ ಹೆಚ್ಚು ಗ್ರಂಥಗಳನ್ನು ಈ ನಾಡಿಗೆ ನೀಡಿದೆ, ಶೈಕ್ಷಣಿಕವಾಗಿ 1924 ರಲ್ಲೆ ಶ್ರೀ ಜಗದ್ಗುರು ಅನ್ನದಾನೀಶ್ವರ ವಿದ್ಯಾ ಸಮಿತಿ ಪ್ರಾರಂಭಿಸಿ ಶಿಕ್ಷಣವನ್ನು ನೀಡಿದ ಕೀರ್ತಿ ಶ್ರೀಮಠಕ್ಕೆ ಇದೆ ಇಂತಹ ಶ್ರೀಮಠಕ್ಕೆ ನಾಡಿನ ತುಂಬೆಲ್ಲ ಭಕ್ತರು ಇದ್ದಾರೆ ಅವರ ಭಕ್ತಿ ದೊಡ್ಡದು ಎಂದರು. 

ಹಿರೇಸಿಂದೋಗಿ ಪೂಜ್ಯ ಚಿದಾನಂದ ಮಹಾಸ್ವಾಮಿಗಳು ಮಾತನಾಡಿ ಕಲ್ಬುರ್ಗಿ ಶರಣಬಸವೇಶ್ವರ ಪುರಾಣ ಹಚ್ಚುವುದರಿಂದ ಈ ನಾಡಿಗೆ ಕಲ್ಯಾಣವಾಗುತ್ತದೆ ತಳಕಲ್ ಭಕ್ತರು ಉತ್ತಮ ಕೆಲಸ ಮಾಡಿದ್ದಾರೆ, ಧಾರ್ಮಿಕ ಕಾರ್ಯಗಳು ನಡೆಯುವುದರಿಂದ ಮನುಷ್ಯ ಸದ್ಗುಣಗಳನ್ನು ಬೆಳೆಸಿಕೊಳ್ಳಲು ಸಹಕಾರಿಯಾಗುತ್ತದೆ, ಕುಕನೂರ ಶ್ರೀಗಳು ಮುಂಡರಗಿ ಜಗದ್ಗುರುಗಳ ನೆಚ್ಚಿನ ಪ್ರೀತಿಯ ಶಿಷ್ಯ ಮತ್ತು ಸೇವಕ ಎಂದರು. ಪ್ರವಚನ ಸೇವೆಯನ್ನ ಪೂಜ್ಯ ಶಿವಯೋಗಿಶ್ವರ ಸ್ವಾಮೀಜಿ, ಸಂಗೀತ ಸೇವೆಯನ್ನ ಕುಮಾರ ಶಾಸ್ತ್ರಿ ತೊಳಲಿ, ಮಲ್ಲಿಕಾರ್ಜುನ ಕರ್ಜಗಿ, ಈಶ್ವರಯ್ಯ ಹಲಸಿನಮಠದ, ಬಸಯ್ಯ ಚಂಡೂರು ಮಾಡಿದರು.ಬೆಳಿಗ್ಗೆ ಕಲ್ಬುರ್ಗಿ ಶರಣಬಸವೇಶ್ವರ ಭಾವಚಿತ್ರ, ಕುಂಬಾ ಮೇರವಣಿಗೆ ಮತ್ತು ಸಂಜೆ ಅನ್ನದಾನೀಶ್ವರ ರಥೋತ್ಸವಕ್ಕೆ ಮುಂಡರಗಿ ಪೂಜ್ಯರು ಚಾಲನೆ ನೀಡಿದರು. ಮಹಾದಾಸೋಹ ಸೇವೆಯನ್ನ ಭಕ್ತರು ಮಾಡಿದ್ದರು.ಈ ಸಂದರ್ಭದಲ್ಲಿ ಮಂಗಳೂರಿನ ಪೂಜ್ಯ ಸಿದ್ದಲಿಂದ ಸ್ವಾಮೀಜಿ, ಮೈನಳ್ಳಿ ಪೂಜ್ಯ ಸಿದ್ದೇಶ್ವರ ಸ್ವಾಮೀಜಿ, ಗ್ರಾಮದ ಸ್ವಾತಂತ್ರ್ಯ ಹೋರಾಟಗಾರ ಗೂಳಪ್ಪಜ್ಜ ಮೂಲಿಮನಿ, ವೀರಯ್ಯ ಕುಕನೂರ, ಜಯಣ್ಣ ಮುಂಡರಗಿ, ತಳಕಲ್ ಮತ್ತು ಸುತ್ತಮುತ್ತಲಿನ ಗ್ರಾಮಗಳ ಸದ್ಬಕ್ತರು ಇದ್ದರು.