ಪೋಲಿಯೋ ಮುಕ್ತ ಭಾರತ ಕಟ್ಟಲು ಎಲ್ಲರೂ ಮುಂದಾಗಲಿ: ಶಿಕ್ಷಣ ಇಲಾಖೆಯ ಸಂಪನ್ಮೂಲ ವ್ಯಕ್ತಿ ಕವಿತಾ


ಲೋಕದರ್ಶನ ವರದಿ

ಗದಗ 20: ಪೊಲೀಯೊದಿಂದ ಮಕ್ಕಳನ್ನು ರಕ್ಷಿಸಲು, ಪೊಲೀಯೋ ಮುಕ್ತ ಭಾರತ ಕಟ್ಟಲು ಪಾಲಕರು ಮುಂದಾಗಬೇಕೆಂದು ಶಿಕ್ಷಣ ಇಲಾಖೆಯ ಸಂಪನ್ಮೂಲ ವ್ಯಕ್ತಿ  ಕವಿತಾ ದಂಡಿನ ಹೇಳಿದರು.

 ಗಂಗಾಪೂರಪೇಟೆಯ ದುರ್ಗಾದೇವಿ  ಶಿಕ್ಷಣ ಸಮಿತಿಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ  ಕಲ್ಯಾಣ ಇಲಾಖೆ, ತಾಲ್ಲೂಕ  ಆರೋಗ್ಯಾಧಿಕಾರಿಗಳ ಕಾಯರ್ಾಲಯದಿಂದ ಹಮ್ಮಿಕೊಂಡ ದುರ್ಗಾದೇವಿ ಪ್ರಾಥಮಿಕ ಶಾಲೆಯಲ್ಲಿ  ಜರುಗಿದ ಪೊಲೀಯೋ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಪೊಲೀಯೋ ಹನಿ ಹಾಕಿ ಮಾತನಾಡಿ, 5 ವರ್ಷದ ಒಳಗಿನ ಮಕ್ಕಳಿಗೆ ಪೊಲೀಯೋ ಲಸಿಕೆ ಹಾಕುವದರಿಂದ ಮಕ್ಕಳಲ್ಲಿ  ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ ಎಂದು ಹೇಳಿದರು. ವೈದ್ಯಾಧಿಕಾರಿ ಡಾ. ಗೀತಾ ಧನಗರ, ಡಾ. ಎಸ್.ಎ.ಬಿರಾದಾರ, ನೇತ್ರಾಧಿಕಾರಿ ರುದ್ರೇಶ ಬಳಿಗಾರ, ಸುಶ್ರೂಶಕಿ ಸುಧಾ ಬೆಂತೂರ, ಶಾಲೆಯ ಮುಖ್ಯೋಪಾದ್ಯಾಯನಿ ಎಸ್.ಆರ್. ಸಂಬರಗಿಮಠ, ಶಿಕ್ಷಕಿಯರಾದ ಎಂ.ಆರ್.ಅಂಗಡಿ, ಎಂ.ಎಂ.ಹಿಡ್ಕಿಮಠ, ಎಸ್.ಬಿ. ಹರವಿ, ಎಂ.ಬಿ.ಫಣಿಬಂದ, ಪಿ.ಪಿ.ಶಿರೋಳಕರ, ಎಂ.ಎಂ.ಅಗಸಿಮನಿ,  ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.