ಮಾರಕರೋಗದ ನಡುವೆ ಪರಿಸರ ರಕ್ಷಣೆ ಮೌನ ಕ್ರಾಂತಿಯಾಗಲಿ: ಜೋಷಿ

ಬಳ್ಳಾರಿ/ಹೊಸಪೇಟೆ,ಜೂ.05: ಸದ್ಯ ದೇಶದಲ್ಲಿ ಹಬ್ಬುತ್ತಿರುವ ಕೊವೀಡ್-19 ಮಾರಕ ರೋಗದ ನಡುವೆಯು ಪರಿಸರ ಸಂರಕ್ಷಣೆಯ ಪರ ಮೌನಕ್ರಾಂತಿ ನಡೆಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಲ್.ಡಿ.ಜೋಷಿ ಅಭಿಪ್ರಾಯ ಪಟ್ಟರು.

ಹೊಸಪೇಟೆಯ ಮುನ್ಸಿಪಲ್ ಕಾಲೇಜು ಮೈದಾನ ಆವರಣದಲ್ಲಿ ಶುಕ್ರವಾರ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಹೊಸಪೇಟೆಯ ಅರಣ್ಯ, ಕಂದಾಯ, ತಾಲೂಕು ಪಂಚಾಯಿತಿ, ಶಿಕ್ಷಣ ಇಲಾಖೆಯ ಸಂಯುಕ್ತಾಶ್ರಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಗಿಡನೆಟ್ಟು ನೀರುಣಿಸಿ ಅವರು ಮಾತನಾಡಿದರು.

ನಮ್ಮ ಕ್ಷೇತ್ರದ ಶಾಸಕರೇ ಅರಣ್ಯ ಹಾಗೂ ಜೀವವೈವಿಧ್ಯ ಸಚಿವರು ಆಗಿರುವ ಕಾರಣ ಇನ್ನೂ ಹೆಚ್ಚಿನ ಮಟ್ಟದಲ್ಲಿ ಕ್ಷೇತ್ರವನ್ನು ಪರಿಸರ ಪ್ರಿಯವಾಗಿ ಕಟ್ಟಬೇಕು; ಸೈನಿಕರು ದೇಶಕಾಯುವ ರೀತಿಯಲ್ಲೇ ಪರಿಸರ ಪ್ರೇಮಿಗಳು ಮರಗಳನ್ನು ಪೋಷಿಸಿ ನಿಸರ್ಗವನ್ನು ಕಾಪಾಡುತ್ತಿದ್ದಾರೆ. ಪರಿಸರಕ್ಕೆ ಮಾರಕವಾದ ದೈನಂದಿನ ವಸ್ತುಗಳ ಬಳಕೆ ಕಡಿಮೆ ಮಾಡಿ ಭೂ ಮಾಲಿನ್ಯ, ಜಲಮಾಲಿನ್ಯವನ್ನು ಇನ್ನಿಲ್ಲದಂತೆ ಮಾಡಿ ಪರಿಸರ ಸ್ನೇಹಿ ಜೀವನವನ್ನು ನಡೆಸುವುದರ ಜೊತೆಗೆ ವರ್ಷವಿಡೀ ವನಮಹೋತ್ಸವ ಹಾಗೂ ವೃಕ್ಷೋತ್ಸವವನ್ನು ಆಚರಿಸಬೇಕು ಎಂದು ಹೇಳಿದ ಅವರು ದೇಶದಲ್ಲೇ ವೈವಿಧ್ಯಮಯ ಕಾಡುಗಳನ್ನು ಪಶ್ಚಿಮ ಘಟ್ಟಗಳು ಹೊಂದಿವೆ. ಈ ಘಟ್ಟಗಳಿಂದ ಮಾನ್ಸೂನ್ ಮಾರುತ ಕಾಣುತ್ತಿದ್ದೇವೆ. ಪ್ರಕೃತಿಯನ್ನು, ಕಾಡುಗಳನ್ನು ಕಡೆಗಣಿಸಿದರೆ ನಮ್ಮ ಘಟ್ಟಗಳು ಸಹ ಮರುಭೂಮಿ ಆಗುವುದರಲ್ಲಿ ಸಂದೇಹವಿಲ್ಲ ಎಂದರು.

    ನಗರಸಭೆ ಪೌರಾಯುಕ್ತರದ ಜಯಲಕ್ಷ್ಮೀ ಅವರು ಮಾತನಾಡಿ, ಈ ವರ್ಷದ ಧ್ಯೇಯ ವಾಕ್ಯವಾದ ಜೀವ ವೈವಿಧ್ಯತೆಯನ್ನು ಸಂಭ್ರಮಿಸಿ ಪರಿಸರ ಉಳಿಸುವ ಕಾರ್ಯದೊಂದಿಗೆ ಸಾರ್ಥಕತೆಗೊಳಿಸಬೇಕು ಹೆತ್ತ ತಾಯಿ, ನಿಸರ್ಗ ಮಾತೆ ಎರಡು ಮಾನವನಿಗೆ ಮುಖ್ಯವಾದವುಗಳಾಗಿದ್ದು, ಇಬ್ಬರನ್ನು ಗೌರವದಿಂದ ಪೋಷಿಸಿ ನಗರವನ್ನು ಹಸಿರು ಹೊಸಪೇಟೆಯನ್ನಾಗಿಸಬೇಕು ಎಂದರು.

       ನಂತರ ಹುಡಾ ಅಧ್ಯಕ್ಷರಾದ ಅಶೋಕ್ ಜೀರೆ ಅವರು ಮಾತನಾಡಿ, ಪರಿಸರ ದಿನ ಕೇವಲ ಸಾಂಕೇತಿಕ ಆಚರಣೆ ಆಗದೇ ಎಲ್ಲರೂ ಎಲ್ಲಾ ಕಾಲದಲ್ಲೂ ಭಾಗವಹಿಸಬೇಕು, ಸಕರ್ಾರದ ಧ್ಯೇಯವನ್ನು ಆಚರಣೆಗೆ ತಂದು ಸ್ವಾಸ್ತ್ಯ ಸಮಾಜ ನಿಮರ್ಾಣಕ್ಕೆ ಶ್ರಮಿಸೋಣ ಎಂದರು.ಈ ಸಂದರ್ಭದಲ್ಲಿ ತಾಪಂ ಅಧ್ಯಕ್ಷೆ ನಾಗವೇಣಿ, ವಲಯ ಅರಣ್ಯಾಧಿಕಾರಿ ಎಲ್.ಬಸವರಾಜ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಂ.ಡಿ.ಮೋಹನ್, ಉಪವಲಯ ಅರಣ್ಯಾಧಿಕಾರಿ ಶಿವುಕುಮಾರ್, ರಮೇಶ್ ಸೇರಿದಂತೆ ವಿವಿಧ ಇಲಾಖೆಯ ಸಿಬ್ಬಂದಿಗಳು, ಅಧಿಕಾರಿಗಳು ಇದ್ದರು.