ಲೋಕದರ್ಶನವರದಿ
ಹುನಗುಂದ ೦೮: ಇಂದಿನ ಸ್ಪರ್ಧಾ ತ್ಮಕ ಜಗತ್ತಿನಲ್ಲಿ ವಿದ್ಯಾಥರ್ಿಗಳು ಮೌಲ್ಯಯುತ ಶಿಕ್ಷಣ ಪಡೆದುಕೊಳ್ಳಬೇಕು ಎಂದು ಭೂಮಿಕಾ ಎಜ್ಯೂಕೇಶನ್ ಟ್ರಸ್ಟ್ ಸಂಸ್ಥಾಪಕ ವಿಜಯಕುಮಾರ ಎಲ್.ಪಾಟೀಲ ಕುಲಕರ್ಣಿ ಹೇಳಿದರು.
ತಾಲೂಕಿನ ಅಮೀನಗಡ ಪಟ್ಟಣದ ಸಂಗಮೇಶ್ವರ ಸಂಯುಕ್ತ ಪಪೂ ಕಾಲೇಜಿನ ಆಶ್ರಯದಲ್ಲಿ 2019-20ನೇ ಸಾಲಿನ ಸಾಂಸ್ಕೃತಿಕ, ಕ್ರೀಡಾ ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ ಸಮಾರೋಪ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬಿಳ್ಕೋಡುಗೆ ಸಮಾರಂಭದಲ್ಲಿ ಅವರು ಮಾತನಾಡಿ, ವಿದ್ಯಾರ್ಥಿಗಳು ಕೇವಲ ಅಂಕಗಳಿಸಲು ಅಧ್ಯಯನ ಮಾಡಬಾರದು, ಜ್ಞಾನವನ್ನು ಪಡೆಯಲು ಅಧ್ಯಯನ ಮಾಡಬೇಕು. ನಿರಂತರ ಶ್ರಮ, ಶಿಸ್ತು, ಸೌಜನ್ಯ, ಮೌಲ್ಯಯುತ ಶಿಕ್ಷಣದಿಂದ ಮಾತ್ರ ಸಾಧನೆ ಮಾಡಲು ಸಾಧ್ಯ ಎಂದರು.
ಪ್ರಸ್ತುತ ಆಧುನಿಕ ದಿನಮಾನಗಳಲ್ಲಿ ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯಗಳು ಬೆಳೆಸುವ ಅಗತ್ಯವಿದೆ. ಮನುಷ್ಯ ಮನುಷ್ಯನನ್ನು ನಂಬಬೇಕಾದ ಸನ್ನಿವೇಶ ದೂರವಾಗಿದೆ.ಮನಸ್ಸಿನಲ್ಲಿ ಸ್ವಾರ್ಥ,ಲೋಭ ಹೆಚ್ಚಾಗುತ್ತಿದೆ. ವ್ಯಕ್ತಿಯು ಬೆಳೆದಂತೆ ಆತನ ಮನಸ್ಸಿನಲ್ಲಿರುವ ಭಾವನೆಗಳು ಮನುಷ್ಯತ್ವವನ್ನು ಮರೆಸುತ್ತಿದೆ. ಆಧುನಿಕ ಶಿಕ್ಷಣ ವ್ಯವಸ್ಥೆ ಸಂಸ್ಕ್ರತಿಯ ಜತೆಗೆ ನೈತಿಕತೆ ಮೌಲ್ಯ ಕಳೆದುಕೊಂಡಿದೆ. ಇಂದಿನ ಕಾಲದ ಶಿಕ್ಷಣಕ್ಕೂ ಹಿಂದಿನ ಕಾಲದ ಶಿಕ್ಷಣಕ್ಕೂ ಅಜಗಜಾಂತರ ವ್ಯತ್ಯಾಸವಿದೆ.ಮಹಾನ ವ್ಯಕ್ತಿಗಳು ಶಿಕ್ಷಣ ಕಡಿಮೆ ಪಡೆದುಕೊಂಡರು ಕೂಡಾ ಅವರು ಜಗತ್ತಿನಲ್ಲಿ ಉನ್ನತ ಮಟ್ಟದ ಸಾಧನೆ ಮಾಡುತ್ತಿದ್ದರು ಯಾಕೆಂದರೆ ಅವರು ಜ್ಞಾನ ಪಡೆಯಲು ಶಿಕ್ಷಣ ಪಡೆಯುತ್ತಿದ್ದರು.ಆದರೆ ಇಂದಿನ ವಿದ್ಯಾರ್ಥಿಗಳು ಕೇವಲ ಅಂಕಗಳಿಸಲು ಮತ್ತು ಉದ್ಯೋಗ ಪಡೆಯಲು ಮಾತ್ರ ಶಿಕ್ಷಣ ಪಡೆಯುತ್ತಿದ್ದಾರೆ.ಆದರಿಂದ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಮೌಲ್ಯಯುತ ಶಿಕ್ಷಣ ನೀಡಬೇಕು ಇದರಿಂದ ಮಾತ್ರ ಸಮಾಜ ಸುಧಾರಣೆಯಾಗಲು ಮತ್ತು ವಿದ್ಯಾರ್ಥಿಗಳು ಉನ್ನತ ಮಟ್ಟದ ಸಾಧನೆ ಮಾಡಲು ಸಾಧ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಎಮ್.ಎನ್.ವಂದಾಲ ಮಾತನಾಡಿ,ವಿದ್ಯಾರ್ಥಿಗಳು ಸಮಯದ ಸದ್ಬಳಿಕೆ ಮಾಡಿಕೊಂಡು ಶ್ರದ್ಧೆಯಿಂದ ಸತತ ಅಧ್ಯಯನ ನಡೆಸಿ ಮುಂಬರುವ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆದು ಸತ್ಪ್ರಜೆಗಳಾಗಿ,ಪ್ರಾಮಾಣಿಕ ಜೀವನ ನಡೆಸಬೇಕು ಕರೆ ನೀಡಿದರು.ಹುಬ್ಬಳ್ಳಿಯ ಭೂಮಿಕಾ ಎಜ್ಯೂಕೇಶನ್ ಟ್ರಸ್ಟ್ ಸಂಸ್ಥಾಪಕ ವಿಜಯಕುಮಾರ ಎಲ್.ಪಾಟೀಲ ಕುಲಕರ್ಣಿ ದಂಪತಿಗಳನ್ನು ಸನ್ಮಾನ ಮಾಡಿ ಗೌರವಿಸಲಾಯಿತು.ಸಮಾರಂಭದಲ್ಲಿ ಸಂಗಮೇಶ್ವರ ವಿದ್ಯಾವರ್ಧಕ ಸಂಘದ ಚೇರಮನ್ ಐ.ಎಸ್.ಲಿಂಗದಾಳ, ಸಂಗಮೇಶ್ವರ ಸಂಯುಕ್ತ ಪಪೂ ಕಾಲೇಜ ಚೇರಮನ್ ಸಿ.ಡಿ.ಇಲಕಲ್ಲ, ಎನ್.ಎಸ್.ಎಸ್.ವಿಭಾಗದ ಸಂಯೋಜಕ ಎಂ.ಎಸ್.ಕಾರಭಾರಿ, ಸಾಂಸ್ಕ್ರತಿಕ ವಿಭಾಗದ ಮುಖ್ಯಸ್ಥ ಶಿವಪ್ಪ ಎಚ್,ಉಪನ್ಯಾಸಕ ಜಿ.ಎಮ್.ಡೊಳ್ಳಿನ,ನಿವೃತ್ತ ಪ್ರಾಚಾರ್ಯ ಎಮ್.ಎಚ್.ಕೆಲೂರ,ಮಾಧ್ಯಮಿಕ ಶಿಕ್ಷಕ ಜಿಲ್ಲಾಧ್ಯಕ್ಷ ಆರ್.ಜಿ.ಸನ್ನಿ,ಎಸ್.ಸಿ.ಚಟ್ಟೇರ, ಬಿ.ಕೆ.ಮಾಟೂರ, ಉಪನ್ಯಾಸಕಿ ಆಶಾ ಲಕ್ಕಮ,ಉಪನ್ಯಾಸಕ ಸಮೀರ ಸಕರ್ಾವಸ್,ಎಮ್.ಆರ್.ಹಿರೇಮಠ, ಎಚ್.ಎಚ್.ವಡ್ಡರ ಸೇರಿದಂತೆ ಇನ್ನಿತರರು ಇದ್ದರು.