ಲೋಕದರ್ಶನ ವರದಿ
ಬೈಲಹೊಂಗಲ 24: ವಿದ್ಯಾಥರ್ಿ ದೆಸೆಯಿಂದಲೇ ಮಕ್ಕಳು ಉನ್ನತ ಗುರಿ ಹೊಂದಬೇಕು. ಗುರಿ ಈಡೇರುವವರೆಗೂ ವಿರಮಿಸದೆ ಕಷ್ಟ ಪಟ್ಟು ಓದಬೇಕು. ಉತ್ತಮ ಗುರುಗಳ ಮಾರ್ಗದರ್ಶನದೊಂದಿಗೆ ತಾಯಿ ತಂದೆ ಹೆಮ್ಮೆ ಪಡುವಂತ ಸಾಧನೆ ಮಾಡಿ ತೋರಿಸಬೇಕು ಎಂದು ಖ್ಯಾತ ಉಪನ್ಯಾಸಕ, ವಾಗ್ಮಿ ಡಾ.ಗುರುರಾಜ ಕರ್ಜಗಿ ಹೇಳಿದರು.
ತಾಲೂಕಿನ ಚಿಕ್ಕಬೆಳ್ಳಿಕಟ್ಟಿ ಗ್ರಾಮದ ಎಮ್.ಎಮ್.ಆನಿಕಿವಿ ಸರಕಾರಿ ಪ್ರೌಢಶಾಲೆಯಲ್ಲಿ ಅಕಾಡೆಮಿ ಫಾರ್ ಕ್ರಿಯೇಟಿವ್ ಟೀಚಿಂಗ್ ಬೆಂಗಳೂರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾಯರ್ಾಲಯ ಬೈಲಹೊಂಗಲ, ಎಸ್.ಸಿ.ಎಚ್ ಫೌಂಡೇಶನ್ ಗೋವನಕೊಪ್ಪ ಇವರುಗಳ ಸಹಯೋಗದಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾಥರ್ಿಗಳಿಗೆ ಹಾಗೂ ಪಾಲಕರಿಗೆ ಆಯೋಜಿಸಲಾಗಿದ್ದ ಪ್ರೇರಣಾ ಕಾಯರ್ಾಗಾರ ಮತ್ತು ನಮ್ಮ ನಡಿಗೆ ಯಶಸ್ಸಿನೆಡೆಗೆ ನಾಲ್ಕನೇ ಮಾಲಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿ, ಮನೆಯಲ್ಲಿ ಕುಳಿತು ಯಶಸ್ಸು ಸಿಗಬೇಕೆಂದರೆ ಸಾಧ್ಯವಿಲ್ಲ.
ನಿರಂತರ ಪ್ರಯತ್ನ ಇರಬೇಕು. ತಾಯಿ ತಂದೆ ತಮ್ಮ ಆಸೆ ಆಕಾಂಕ್ಷೆಗಳನ್ನು ಹತ್ತಿಕ್ಕಿ ಮಕ್ಕಳಿಗೋಸ್ಕರ ಸಾಕಷ್ಟು ತ್ಯಾಗ ಮಾಡಿರುತ್ತಾರೆ ವಿದ್ಯಾಥರ್ಿಗಳು ಅವರ ಪ್ರೀತಿ ತ್ಯಾಗವನ್ನು ಪದೆ ಪದೆ ನೆನೆದು ಓದುವಾಗ ಗಟ್ಟಿ ಮನಸ್ಸು ಮಾಡಿ ಓದಬೇಕು.
ಹಾಗಯೇ ಪಾಲಕರು ಕೂಡ ಮಕ್ಕಳಿಗೆ ಮಾದರಿಯಾಗಿ ಬದುಕಬೇಕು. ನಡೆ ನುಡಿಯಲ್ಲಿ ಉತ್ತಮ ಚಾರಿತ್ರ್ಯ ಪಾಲಿಸಬೇಕು. ಮಕ್ಕಳ ವಿದ್ಯಾಭ್ಯಾಸ, ಅವರ ಹವ್ಯಾಸಗಳ ಬಗ್ಗೆ ಗಮನ ಹರಿಸುತ್ತಿರಬೇಕು ಎಂದು ಮಕ್ಕಳ ಪಾಲಕರಿಗೆ ಸಲಹೆ ನೀಡಿದ ಅವರು ಪರೀಕ್ಷಾ ಸಮಯದಲ್ಲಿ ವಿದ್ಯಾಥರ್ಿಗಳು ಸ್ಮರಣ ಶಕ್ತಿ ಹೆಚ್ಚಿಸಲು ಮತ್ತು ಉತ್ತಮ ಅಂಕ ಗಳಿಕೆಗೆ ಅನುಪಾಲಿಸಬೇಕಾದ ಸರಳ ಸೂತ್ರಗಳ ಬಗ್ಗೆ ನಿದರ್ಶನಗಳೊಂದಿಗೆ ವಿವರಿಸಿದರು.
ಇದೇ ವೇಳೆ ಪ್ರೌಢಶಾಲೆ ಮತ್ತು ಎಸ್ಸಿಎಚ್ ಫೌಂಡೇಶನ್ ವತಿಯಿಂದ ಡಾ.ಕರ್ಜಗಿಯವರನ್ನು ಸತ್ಕರಿಸಲಾಯಿತು.
ಜಿಪಂ ಸದಸ್ಯ ಶಂಕರ ಮಾಡಲಗಿ, ಕಸಾಪ ತಾಲೂಕಾ ಮಾಜಿ ಅಧ್ಯಕ್ಷ ಈಶ್ವರ ಹೋಟಿ, ಮುಖ್ಯ ಶಿಕ್ಷಕ ಸಿ.ವೈ.ತುಬಾಕಿ, ಬೈಲಹೊಂಗಲ ಖಜಾನೆ ಅಧಿಕಾರಿ ಸುನೀಲ್ ಮೂಗಿ, ಪಿಯು ಕಾಲೇಜು ಎಸ್ಡಿಎಂಸಿ ಉಪಾಧ್ಯಕ್ಷ ಶಿವರುದ್ರಪ್ಪ ಹಟ್ಟಿಹೊಳಿ ಹಾಗೂ ಸುತ್ತಲಿನ ಗ್ರಾಮಗಳ ಪ್ರೌಢಶಾಲೆಗಳ ಶಿಕ್ಷಕರು, ವಿದ್ಯಾಥಿಗಳು, ಪಾಲಕರು, ಸಾರ್ವಜನಿಕರು ಭಾಗವಹಿಸಿದ್ದರು.
ಬಿಇಓ ಪಾರ್ವತಿ ವಸ್ತ್ರದ ಸ್ವಾಗತಿಸಿದರು. ಸಿಆರ್ಪಿ ರಾಜು ಹಕ್ಕಿ, ಶಿಕ್ಷಕಿ ಸವಿತಾ ಮತ್ನಾಳಿ ನಿರೂಪಿಸಿದರು. ಸುಧಾ ಹಂಚಿನಾಳ ವಂದಿಸಿದರು