ಸಾವಿತ್ರಿಬಾಯಿ ಫುಲೆ ನಿಸ್ವಾರ್ಥ ಸೇವೆ ನಮಗೆ ಮಾರ್ಗದರ್ಶಿಯಾಗಲಿ

Let Savitribai Phule selfless service be our guide

ರಾಣೇಬೆನ್ನೂರ:  ಜ 20 ಶಿಕ್ಷಣ ಹೊಂದಿದ ಮಹಿಳೆ ಸಮಾಜದ ಶಕ್ತಿಯಾಗಬಲ್ಲಳು ಎಂಬುದನ್ನು ನಮ್ಮ ದೇಶದ ​‍್ರ​‍್ರಥಮ ಮಹಿಳಾ ಶಿಕ್ಷಕಿ  ಸಾವಿತ್ರಿಬಾಯಿ ಫುಲೆ ತೋರಿಸಿಕೊಟ್ಟಿದ್ದಾರೆ. ಬಾಲೆಯ ಶಿಕ್ಷಣಕ್ಕೆ ಅಷ್ಟೇನೂ ಸವಲತ್ತುಗಳು ಇಲ್ಲದ ಕಾಲದಲ್ಲೂ ಕೂಡ ಧೈರ್ಯದಿಂದ ಶಿಕ್ಷಣಕ್ಕಾಗಿ ಮುನ್ನಡೆದ ಮಹಿಳೆ ಸಾವಿತ್ರಿಬಾಯಿ ಪುಲೆ. ಶಿಕ್ಷಣದ ಎಲ್ಲ ಹಂತಗಳಲ್ಲಿ ಮೇಲುಗೈ ಸಾಧಿಸುತ್ತಿರುವ ಬಾಲಕಿಯರ ಶಿಕ್ಷಣಕ್ಕೆ ನಾವೆಲ್ಲಾ ಕಟಿಬದ್ಧರಾಗೋಣ ಎಂದು ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ಯಾಮ ಸುಂದರ ಅಡಿಗ ಹೇಳಿದರು.  

ನಗರದ ತಾಲೂಕ ಪ್ರಾಥಮಿಕ ಶಾಲಾ ಶಿಕ್ಷಕಿಯರ ಸಹಕಾರಿಯ ಪತ್ತಿನ ಸಂಘದಲ್ಲಿ ನಡೆದ 194ನೇ ಸಾವಿತ್ರಿಬಾಯಿ ಪುಲೆ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.  ವಿಶೇಷ ಉಪನ್ಯಾಸಕರಾಗಿ ಆಗಮಿಸಿದ ಹಾವೇರಿ ಡಯಟ್ ಉಪನ್ಯಾಸಕರಾದ ವಿಜಯ ಪಾಟೀಲ ಇಂದಿನ ಆಧುನಿಕ ಯುಗದಲ್ಲಿ ಬಾಲಕಿಯರು ಶಿಕ್ಷಣ ಪಡೆಯುವಲ್ಲಿ ಇರುವ ಸಮಸ್ಯೆಗಳನ್ನು ಶಿಕ್ಷಕರಾಗಿ ನಾವು ಗುರುತಿಸಬೇಕು. ಅವುಗಳನ್ನು ಪರಿಹರಿಸುವಲ್ಲಿ ಪಾಲಕರು ಮತ್ತು ಶಿಕ್ಷಕರು ಗಮನಹರಿಸಬೇಕು ಬಾಲಕಿಯರಲ್ಲಿ ಮನೋಸ್ಥೈರ್ಯವನ್ನ ತುಂಬಿ ಅವರಲ್ಲಿಯ ಆತ್ಮಸ್ಥೈರ್ಯ ಬರುವಂತೆ ತಿಳಿಸಿದರು. ಗುರುಮಾತೆಯರಾದ ವಿದ್ಯಾವತಿ ಮಳಿಮಠ ಅಕ್ಷರದವ್ವ ಸಾವಿತ್ರಿಬಾಯಿ ಪುಲೆ ಇವರ ಜೀವನ ಚರಿತ್ರೆಯನ್ನು ಪರಿಚಯಿಸಿದರು.  

ಇದೇ ಸಂದರ್ಭದಲ್ಲಿವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹಿಳೆಯರನ್ನು ಸನ್ಮಾನಿಸಲಾಯಿತು. ಕ್ಷೇತ್ರ ಸಮನ್ವಯಾಧಿಕಾರಿ  ಅಧಿಕಾರಿ ಮಂಜು ನಾಯಕ್, ದೈಹಿಕ ಶಿಕ್ಷಣಾಧಿಕಾರಿ ಪ್ರಭಾಕರ್ ಚಿಂದಿ, ಸಾವಿತ್ರಿಬಾಯಿ ಪುಲೆ ಸಂಘದ ಅಧ್ಯಕ್ಷ ನೇತ್ರಾವತಿ ಕಾಟಣ್ಣನವರ , ಕಾರ್ಯದರ್ಶಿ ರತ್ನಾ ಲಮಾಣಿ,  ಗೌರವಾಧ್ಯಕ್ಷ ಸುಶೀಲಾ ಗುರುಲಿಂಗಪ್ಪಗೌಡ್ರ,, ಕ ರಾ ಪ್ರಾ ಶಾ ಸಂ ಮಹಿಳಾ ಸಂಚಾಲಕರಾದ ವಿಮಲಾ ಶಿಡಗನಾಳ ವೇದಿಕೆಯಲ್ಲಿ ಉಪಸ್ಥಿತರಿದ್ದರು   ಪೂರ್ಣಿಮಾ ಛತ್ರದ , ಗೀತಾ ಅಜೋಡಿಮಠಎಸ್ ಎಮ್ ಮಲ್ಲನಗೌಡರ,  ಅನ್ನಪೂರ್ಣ ಬಣಕಾರ ಮಮತಾ ಆನ್ವೇರಿ, , ನಿರ್ಮಲಾ ಲಮಾಣಿ, ಪದ್ಮಾವತಿ ಪಾಟೀಲ, ಸುಧಾ ಹಳ್ಡಲ್ಡರ್, ಸುಧಾ ಭರಮಗೌಡರ, ಅನ್ನಪೂರ್ಣ ಚೌಹಾಣ, ನೀಲಮ್ಮ ಮಠದ, ಮಂಜುಳಾ ನಾಮದೇವ ಸೇರಿದಂತೆ ಮತ್ತಿತರ ಶಿಕ್ಷಕರು, ಸಂಘಟನೆಯ ಮುಖಂಡರು ಉಪಸ್ಥಿತರಿದ್ದರು. ಮಂಜುನಾಥ್ ಕೊರವರ, ಪ್ರಾರ್ಥಿಸಿದರು. ಪೂರ್ಣಿಮಾ ಛತ್ರದ ಸ್ವಾಗತಿಸಿದರು. ಕಮಲಮ್ಮ ಬಣಕಾರ ಪ್ರಾಸ್ತಾನಿಕವಾಗಿ  ಮಾತನಾಡಿದರು.ಗೀತಾ ಅಜ್ಜೋಡಿಮಠ ನಿರೂಪಿಸಿ, ರತ್ನಾ ಲಮಾಣಿ ವಂದಿಸಿದರು.