ಅಸ್ಕಿ ಪಿಕೆಪಿಎಸ್ ಜಿಲ್ಲೆಯ ಮಾದರಿ ಸಂಘವಾಗಲಿ: ಡಾ.ಪ್ರಭುಗೌಡ
Let Aski PKPS become a model association in the district: Dr. Prabhugowda
ತಾಳಿಕೋಟಿ 29 : ಸಹಕಾರಿ ಸಂಘಗಳು ಪರಸ್ಪರ ಸಹಕಾರದಿಂದ ನಡೆಯುತ್ತವೆ ಸಂಘದ ಬೆಳವಣಿಗೆ ಸದಸ್ಯರ ಒಗ್ಗಟ್ಟನ್ನು ಅವಲಂಬಿಸಿದೆ ಎಲ್ಲರೂ ಒಂದಾಗಿ ಕೆಲಸ ಮಾಡಿದಾಗ ಮಾತ್ರ ಸಂಘದ ಅಭಿವೃದ್ಧಿ ಸಾಧ್ಯ ಎಂದು ಖ್ಯಾತ ನೇತ್ರ ತಜ್ಞ,ಸಮಾಜ ಸೇವಕ ಡಾ.ಪ್ರಭುಗೌಡ ಲಿಂಗದಳ್ಳಿ ಹೇಳಿದರು.
ರವಿವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ವಿಜಯಪುರ ಅನುಗ್ರಹ ವಿಷನ್ ಫೌಂಡೇಶನ್ ವತಿಯಿಂದ ಹಮ್ಮಿಕೊಂಡ ಅಸ್ಕಿ ವಿವಿದೋದ್ದೇಶ ಪ್ರಾಥಮಿಕ ಗ್ರಾಮೀಣ ಸಹಕಾರ ಸಂಘದ ನೂತನ ಸದಸ್ಯರ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು. ಸಹಕಾರಿ ಸಂಘಗಳ ಕಾರ್ಯ ವ್ಯಾಪ್ತಿ ಈಗ ಬಹಳಷ್ಟು ವಿಸ್ತರಿಸಿದೆ ಇದರ ಅಡಿಯಲ್ಲಿ ಹಲವಾರು ಲಾಭದಾಯಕ ವ್ಯವಹಾರಗಳನ್ನು ಮಾಡಲು ಅವಕಾಶವಿದೆ ಅವುಗಳನ್ನು ಬಳಸಿಕೊಂಡು ಸಂಘದ ಅಭಿವೃದ್ಧಿಗೆ ಪ್ರಯತ್ನಿಸಿ. ಚುನಾವಣೆಯಲ್ಲಿ ಸ್ಪರ್ಧಿಸಿ ಪರಾಭವ ಗೊಂಡವರನ್ನು ಜೊತೆಯಲ್ಲಿ ತೆಗೆದುಕೊಂಡು ಹೋಗಿ ಈ ಸಂಘವು ನಿಮ್ಮ ಅವಧಿಯಲ್ಲಿ ಇಡೀ ಜಿಲ್ಲೆಗೆ ಒಂದು ಮಾದರಿ ಸಂಘವಾಗಿ ಬೆಳೆಯಲಿ, ನಿಮಗೆಲ್ಲರಿಗೂ ಅಭಿನಂದಿಸುತ್ತೇನೆ ಎಂದರು. ಸಂಘದ ಅಧ್ಯಕ್ಷ ಎಂ.ಕೆ.ಚೌಧರಿ ಹಾಗೂ ಸದಸ್ಯ ಹಣಮಗೌಡ ಬಿರಾದಾರ ಮಾತನಾಡಿ ನಮ್ಮನ್ನು ಆಮಂತ್ರಿಸಿ ಸನ್ಮಾನ ಮಾಡುವುದರ ಜೊತೆಗೆ ನಮ್ಮ ಜವಾಬ್ದಾರಿಗಳ ಅರಿವು ಮೂಡಿಸಿದ ಡಾ.ಪ್ರಭುಗೌಡರಿಗೆ ಅಭಿನಂದಿಸುತ್ತೇವೆ ಎಂದರು.
ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ಶಂಕ್ರ್ಪ ಕೆಳಗಿನಮನಿ, ಮುಖಂಡರಾದ ಬಾಲು ತಳವಾರ, ಡಾ.ಪ್ರಭುಗೌಡ ಬಿರಾದಾರ(ಅಸ್ಕಿ), ರಾಯನಗೌಡ ಬಿರಾದಾರ, (ನೀರಲಗಿ) ಮಲ್ಲನಗೌಡ ಬಿರಾದಾರ(ಅಸ್ಕಿ), ಶಿವನಗೌಡ ಬಿರಾದರ(ಅಸ್ಕಿ), ನಾನಾ ಗೌಡ ಬಿರಾದಾರ, ಕಾರ್ಯದರ್ಶಿ ಎಂ.ಎಂ.ತಳವಾರ,ಆಡಳಿತ ಮಂಡಳಿ ಸದಸ್ಯರಾದ ಹಣಮಗೌಡ ಬಿರಾದಾರ, ಮಲ್ಲನಗೌಡ ಕರಿಗೌಡರ, ವಿಶ್ವನಾರೆಡ್ಡಿ ಬಿರಾದಾರ, ಶಿವರುದ್ರ್ಪ ಮಗದಾಳ, ಬಸವರಾಜ ಬ್ಯಾಕೋಡ, ರುದ್ರಗೌಡ ಬಿರಾದಾರ, ಸಿದ್ರಾಮಪ್ಪ ವಡಗೇರಿ, ಈರ ಘಂಟೆಪ್ಪ ದೊಡ್ಡಮನಿ, ಸಂಗಮೇಶ ಪಾಟೀಲ,ನಬಿ ಕೊಂಡಗೂಳಿ ಮತ್ತಿತರರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 