ಕುಷ್ಟರೋಗ ಪಾಪದ ಫಲವಲ್ಲ: ಡಾ. ವ್ಹಿ.ಡಿ ಕರ್ಪೂರಮಠ

ಧಾರವಾಡ30: ಕುಷ್ಠರೋಗ ಯಾವುದೇ ಜನ್ಮದ ಪಾಪದ ಫಲವಲ್ಲ ಅದು ತಿಳುವಳಿಕೆ ಕೊರತೆ, ಮೂಢನಂಬಿಕೆಯಿಂದ ಈ ರೋಗ ಉಲ್ಬಣಗೊಳುತ್ತಿದೆ. ಆರಂಭಿಕ ಹಂತದಲ್ಲಿ ಚಿಕಿತ್ಸೆ ಪಡೆದಲ್ಲಿ ಅಂಗವೈಕಲ್ಯವನ್ನು ತಡೆಗಟ್ಟಬಹುದು. 1952 ರಲ್ಲಿ ಈ ರೋಗದ ನಿರ್ಮೂಲನೆಗೆ ಭಾರತ ಸರಕಾರ ನಿರ್ಧರಿಸಿತು. ಆದರೆ ಅಂಕಿ ಅಂಶಗಳ ಪ್ರಕಾರ ಇನ್ನೂ 30 ಲಕ್ಷ ಜನ ಈ ರೋಗದಿಂದ ಭಾದಿತರಾಗಿದ್ದಾರೆ. ಜಗತ್ತಿಗೆ 4 ಕುಷ್ಟರೋಗಿಗಳಲ್ಲಿ 3 ಜನ ಭಾರತೀಯರು ಇರುವುದು ದುರ್ದೈವದ ಸಂಗತಿ ಎಂದು ಜೆ.ಎಸ್.ಎಸ್ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆಯಲ್ಲಿ ಆಯೋಜಿಸಿದ್ದ ಕುಷ್ಟರೋಗ ನಿರ್ಮೂಲನಾ ದಿನ ಹಾಗೂ ಮಹಾತ್ಮ ಗಾಂಧೀಜಿ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು. ಎಲ್ಲ ಸರಕಾರಿ ಆಸ್ಪತ್ರೆಗಳಲ್ಲಿ ಎಮ್.ಡಿ.ಟಿ ಮಾತ್ರೆಗಳು ಉಚಿತವಾಗಿ ದೊರೆಯುತ್ತವೆ. ಇವುಗಳನ್ನು ಸೇವಿಸುವದರಿಂದ ಕುಷ್ಟರೋಗದಿಂದ ಕಾಯಂ ಮುಕ್ತಿ ಪಡೆಯಬಹುದು ಎಂದು ಹೇಳಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಪ್ರಾಚಾರ್ಯರಾದ ಡಾ. ಅಜಿತ ಪ್ರಸಾದರವರು ಸತ್ಯ, ಶಾಂತಿ, ಅಹಿಂಸೆಗಳ ಮೂಲಕವೇ ಬ್ರಿಟೀಷರನ್ನು ದೇಶದಿಂದ ಓಡಿಸಿದ ಮಹಾತ್ಮಾ ಗಾಂಧಿಯವರು ಸಾಮಾಜಿಕ ಪಿಡುಗುಗಳಾದ ಆಸ್ಪತ್ರೆ, ಕುಷ್ಟರೊಗ ಮುಂತಾದವುಗಳನ್ನು ಸಮಾಜದಿಂದ ಹೊರಹಾಕಲು ಪ್ರಯತ್ನ ಪಟ್ಟರು. ಗಾಂಧೀಜಿಯವರ ತತ್ವಗಳನ್ನು ಆದರ್ಶವಾಗಿಟ್ಟುಕೊಂಡು ಭಾರತೀಯರಾದ ನಾವು ಈ ಕುಷ್ಟರೋಗ ನಿಮರ್ೂಲನೆಗೆ ಪಣ ಕೈಗೊಳ್ಳೊಣ ಜನರಲ್ಲಿ ಜಾಗೃತಿ ಮೂಡಿಸಿ ರೋಗ ಫೀಡಿತರಲ್ಲಿ ಆತ್ಮ ವಿಶ್ವಾಸ ಮೂಡಿಸೋಣ ಕುಷ್ಟರೊಗ ಸಂಪೂರ್ಣ ಗುಣ ಪಡಿಸಬಹುದಾದ ರೋಗ ಎಂದು ಹೇಳಿದರು.

ಮಹಾವೀರ ಉಪಾದ್ಯೆ ಕಾರ್ಯಕ್ರಮ ನಿರೂಪಿಸಿದರು. ಶ್ರೀಕಾಂತ ರಾಗಿ ಕಲ್ಲಾಪುರ, ಶಿವಾನಂದ ಟವಳಿ, ಮಾಲತೇಶ ಉಪಸ್ಥಿತರಿದ್ದರು.