ಹಿಪ್ಪರಗಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ: ಜನರಲ್ಲಿ ಮನೆಮಾಡಿದ ಆತಂಕ
Leopard sighted in Hipparagi village: Fears spread among people
ಲೋಕದರ್ಶನ ವರದಿ
ಜಮಖಂಡಿ 14: ತಾಲ್ಲೂಕಿನ ಹಿಪ್ಪರಗಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ ಕಂಡ ಗ್ರಾಮಸ್ಥರು ಮತ್ತು ವಯೋವೃದ್ದರು, ಮಕ್ಕಳು, ಕೆಲಸಕ್ಕೆ ಹೋಗುವ ಹೆಣ್ಣುಮಕ್ಕಳು ಚಿರತೆಯ ಭಯದಿಂದ ಕೆಲಸಕ್ಕೆ ಹೋಗಲು ಹಿಂಜರಿಯುತ್ತಿದ್ದಾರೆ. ಹಿಪ್ಪರಗಿ ಗ್ರಾಮದ ಹಳೇಪೂರ ಮಠದ ಮಾವಿನಮಡ್ಡಿ ನಿವಾಸಗಳು ಹೊಲ- ಗದ್ದೆಗಳಿಗೆ ಹಾಗೂ ಮಕ್ಕಳು ಹೊರಗಡೆ ಆಟವಾಡಲು. ಶಾಲೆಗೆ ಕಳುಹಿಸಲು ಚಿರತೆಗೆ ಹೆದ್ದರಿ ಭಯಗೊಂಡಿದ್ದಾರೆ. ಮಾವಿಮಡ್ಡಿ ವಸತಿಯ ನಿವಾಸಿಯಾದ ಈರ್ಪ ವಜ್ರವಾಡ ತೋಟದಲ್ಲಿ ದನ - ಕರುಗಳು ಹಾಗೂ ಎಮ್ಮೆಗಳು ಇರುವ ಸ್ಥಳಕ್ಕೆ ಚಿರತೆ ಪ್ರತ್ಯಕ್ಷವಾಗಿದ್ದು. ಹೊಲಗದ್ದೆಯಿಂದ ಬಂದ ಚಿರತೆ ಸಣ್ಣ ಎಮ್ಮೆಯ ಮರಿಯ ಮೇಲೆ ದಾಳಿಯನ್ನು ನಡೆಸಿದೆ. ಸಂಜೆ 7 ಗಂಟೆ ಸುಮಾರಿಗೆ ಈರ್ಪ ವಜ್ರವಾಡ ದನಕರುಗಳಿಗೆ ನೀರು. ಮೇವು ಹಾಕಿ ಕುಳಿತುಕೊಂಡ ಸಮಯದಲ್ಲಿ ಚಿರತೆ ಅವರ ಕಣ್ಮುಂದೆ ಎಮ್ಮೆ ಕರುವಿನ ಮೇಲೆ ದಾಳಿಯನ್ನು ಮಾಡಿದೆ ಎಂದು ಪ್ರತ್ಯೇಕ್ಷದರ್ಶಿ ಈರ್ಪ ವಜ್ರವಾಡ ತಿಳಿಸಿದ್ದಾರೆ.
ಅಧಿಕಾರಿಗಳ ವಿರುದ್ದ ಆಕ್ರೋಶ ;
ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಾಟ್ಟಾಚಾರಕ್ಕೆ ಬಂದು ಹಾರಿಕೆ ಉತ್ತರವನ್ನು ನೀಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ ನಿವಾಸಿಗಳು. ಬೆಳಗ್ಗೆ ಘಟನಾ ಸ್ಥಳಕ್ಕೆ ಬರುತ್ತವೆ ಎಂದು ಹೇಳಿದ ಅರಣ್ಯ ಇಲಾಖೆಯವರು ಒಂದು ದಿನ ಕಳೆದರು ಬರುತ್ತಿಲ್ಲ ಎಂದು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
ತಾಲೂಕಾಡಳಿತ ನಿರ್ಲಕ್ಷ್ಯ :
ಚಿರತೆ ಎಮ್ಮೆ ಕರುವಿನ ಮೇಲೆ ದಾಳಿ ಮಾಡಿದನ್ನು ಕಂಡ ಅಲ್ಲಿನ ನಿವಾಸಿಗಳು ಭಯಭೀತಗೊಂಡಿದರು ಸಹ ತಾಲೂಕಾಡಳಿತ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳದೆ ಹಾಗೂ ಧೈರ್ಯ ತುಂಬುವ ಕೆಲಸ ಮಾಡದೆ ನಿರ್ಲಕ್ಷ್ಯ ವಹಿಸುತ್ತಿರುವ ಕಾರಣ ಮತ್ತಷ್ಟು ಅಲ್ಲಿನ ನಿವಾಸಿಗಳಲ್ಲಿ ಭಯ ಕಾಡತೊಡಗಿದೆ.
24 ಗಂಟೆಯಲ್ಲಿ ಕಾರು ಕಳ್ಳತನ ಪ್ರಕರಣ ಭೇಧಿಸಿದ ಪೊಲೀಸರು : ಖದೀಮರ ಪತ್ತೆಗಾಗಿ ಶೋಧ
ಗಡಿ ಮರಾಠಿ ಶಾಲೆಗಳಲ್ಲಿ ಕನ್ನಡ ಕಹಳೆ: 7 ಕನ್ನಡ ಪ್ರಾಥಮಿಕ, 2 ಪ್ರೌಡ ಶಾಲೆಗಳಿಗೆ ರಾಜ್ಯ ಸರಕಾರ ಗ್ರಿನ್ ಸಿಗ್ನಲ್
ಅಂತರಾಜ್ಯ ಖದೀಮನ ಬಂಧನ : 45.56 ಲಕ್ಷ ಮೌಲ್ಯದ ಚಿನ್ನಾಭರಣ, ದ್ವಿಚಕ್ರ ವಾಹನ ವಶಕ್ಕೆ
ಹಿಡಕಲ್ ಹಿನ್ನೀರಿನಲ್ಲಿ ಮುಳುಗಿದ್ದ ಹುನ್ನೂರು ವಿಠಲ ಮಂದಿರ ಜಲದಿಗ್ಭಂಧನದಿಂದ ಮುಕ್ತಿ
2027ರ ಮೇ. 4ರಿಂದ ಸಂಕೇಶ್ವರ ಮಹಾಲಕ್ಷ್ಮೀ ಜಾತ್ರಾ ಮಹೋತ್ಸವ ಪ್ರಾರಂಭ
48 ಗಂಟೆಯಲ್ಲಿ ಮನೆಗಳ್ಳರಿಬ್ಬರ ಬಂಧನ : 21,02 ಲಕ್ಷ ಮೌಲ್ಯದ 154.6 ಗ್ರಾಂ ಚಿನ್ನಾಭರಣ ವಶಕ್ಕೆ 