ಬೆನ್ ಸ್ಟೋಕ್ಸ್ ನಿಯಂತ್ರಿಸಲು ಲಿಯಾನ್ ಪ್ರಮುಖ ಅಸ್ತ್ರ: ಟಿಮ್ ಪೈನ್

ಮ್ಯಾಂಚೆಸ್ಟರ್, ಆ 30    ಹೇಡಿಂಗ್ಲೆ ಅಂಗಳದಲ್ಲಿ ನಥಾನ್ ಲಿಯಾನ್ ಸುಲಭ ರನೌಟ್ ಮಾಡುವಲ್ಲಿ ವಿಫಲವಾಗಿದ್ದರಿಂದ ಆಸ್ಟ್ರೇಲಿಯಾ ಕಳೆದ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಕೇವಲ ಒಂದು ವಿಕೆಟ್ನಿಂದ ಸೋಲು ಅನುಭವಿಸಿತ್ತು.  ಆದಾಗ್ಯೂ ಹಿರಿಯ ಸ್ಪಿನ್ನರ್ ಪರ ಆಸೀಸ್ ನಾಯಕ ಟಿಮ್ ಪೈನ್ ಬ್ಯಾಟ್ ಬೀಸಿದ್ದಾರೆ.  

ಮೊದಲನೇ ಟೆಸ್ಟ್ ಪಂದ್ಯದಲ್ಲಿ ನಥಾನ್ ಲಿಯಾನ್ ಅವರು ದ್ವಿತೀಯ ಇನಿಂಗ್ಸ್ನಲ್ಲಿ 49 ಕ್ಕೆ 6 ವಿಕೆಟ್ ಸೇರಿದಂತೆ ಒಟ್ಟು 9 ವಿಕೆಟ್ ಕಿತ್ತಿದ್ದರು. ಇದರ ನೆರವಿನಿಂದ ಆಸ್ಟ್ರೇಲಿಯಾ ಪಂದ್ಯ ಗೆದ್ದು 1-0 ಮುನ್ನಡೆ ಕಾಯ್ದುಕೊಂಡಿದೆ. ದಿ ಲಾಡ್ರ್ಸ ಅಂಗಳದಲ್ಲಿನ ಪಂದ್ಯದ ಪ್ರಥಮ ಇನಿಂಗ್ಸ್ನಲ್ಲಿ 68 ರನ್ಗಳಿಗೆ ಮೂರು ವಿಕೆಟ್ ಪಡೆದಿದ್ದರು. ಆದರೆ, ಕಳೆದ ಪಂದ್ಯದಲ್ಲಿ 102/0 ಹಾಗೂ 114 ಕ್ಕೆ 2 ವಿಕೆಟ್ಗಳಿಗೆ ಶಕ್ತರಾಗಿದ್ದರು.  

ಕಳೆದ ಪಂದ್ಯದಲ್ಲಿ ಇಂಗ್ಲೆಂಡ್ ಗೆಲುವಿಗೆ ಕೊನೆಯ ವಿಕೆಟ್ಗೆ 73 ರನ್ ಅಗತ್ಯವಿತ್ತು. ಈ ವೇಳೆ ಅತ್ಯುತ್ತಮ ಬ್ಯಾಟಿಂಗ್ ಮಾಡಿದ ಬೆನ್ ಸ್ಟೋಕ್ಸ್ ಒಬ್ಬರೇ ಏಕಾಂಗಿ ಹೋರಾಟ ನಡೆಸಿ ಪಂದ್ಯವನ್ನು ಗೆಲ್ಲಿಸಿದ್ದರು. ಆದರೆ, ಕೊನೆಯ ಹಂತದಲ್ಲಿ ಇಂಗ್ಲೆಂಡ್ಗೆ ಎರಡು ರನ್ ಅಗತ್ಯವಿದ್ದಾಗ ಸುಲಭವಾಗಿ ರನೌಟ್ ಮಾಡುವ ಅವಕಾಶವನ್ನು ನಥಾನ್ ಲಿಯಾನ್ ಕೈ ಚೆಲ್ಲಿಕೊಂಡರು. ಇದರ ಪರಿಣಾಮ ಆಸ್ಟ್ರೇಲಿಯಾದುಬಾರಿ ಬೆಲೆ ತೆತ್ತಬೇಕಾಗಿತ್ತು. ರೋಚಕ ಗೆಲುವಿನೊಂದಿಗೆ ಇಂಗ್ಲೆಂಡ್ 1-1 ಸಮಬಲ ಸಾಧಿಸಿತ್ತು.  

ಈ ಬಗ್ಗೆ ಪ್ರತಿಕ್ರಿಯಿಸಿದ ಟಿಮ್ ಪೈನ್, "ಕಳೆದ ಎರಡು ಪಂದ್ಯಗಳಲ್ಲಿ ನಥಾನ್ ಲಿಯಾನ್ ಅವರು ಬೆನ್ ಸ್ಟೋಕ್ಸ್ ಅವರನ್ನು ಕ್ಯಾಚ್ ಹಾಗೂ ಎಲ್ಬಿಡಬ್ಲ್ಯುಗಳಲ್ಲಿ ಐದು ಅಥವಾ ಆರು ಬಾರಿ ಬೀಳಿಸಿದ್ದರು. ಈಗಲೂ ಬೆನ್ ಸ್ಟೋಕ್ಸ್ ಅವರಿಗೆ ನಥಾನ್ ಲಿಯಾನ್ ಅವರೇ ಪ್ರಮುಖ ಅಸ್ತ್ರ ಎಂದು ಹಿರಿಯ ಸ್ಪಿನ್ನರ್ ಪರ ಪೈನ್ ಬ್ಯಾಟ್ ಬೀಸಿದ್ದಾರೆ. 

ಮೂರನೇ ಪಂದ್ಯದಲ್ಲಿ ಸೋತು ಆಘಾತಕ್ಕೆ ಒಳಗಾಗಿರುವ ಆಸ್ಟ್ರೇಲಿಯಾ ತಂಡ ನಾಲ್ಕನೇ ಪಂದ್ಯಕ್ಕೆ ವೇಗಿಗಳ ಆಯ್ಕೆಯಲ್ಲಿ ಇನ್ನೂ ಗೊಂದಲದಲ್ಲಿದೆ. ಐಸಿಸಿ ವಿಶ್ವಕಪ್ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಮಿಚೆಲ್ ಸ್ಟಾರ್ಕಾರ್ ಇನ್ನೂ ಒಂದೂ ಪಂದ್ಯದಲ್ಲೂ ಆಡಿಲ್ಲ. ಡಬರ್ಿಶೈರ್ ವಿರುದ್ಧ ಅಭ್ಯಾಸ ಪಂದ್ಯದಲ್ಲಿ ಮೂರು ವಿಕೆಟ್ ಕಿತ್ತಿದ್ದಾರೆ.  

   "ನೆಟ್ಸ್ನಲ್ಲಿ ಮಿಚೆಲ್ ಸ್ಟಾರ್ 

 ತುಂಬಾ ಕಠಿಣ ಪರಿಶ್ರಮ ಪಡುತ್ತಿದ್ದಾರೆ. ಚೆಂಡಿನ ಮೇಲಿನ ನಿಯಂತ್ರಣ ಹಾಗೂ ಲೆಂಗ್ತ್ ಅತ್ಯುತ್ತಮವಾಗಿದೆ. ಅವರು ಹೊಸ ಚೆಂಡಿನಲ್ಲಿ ಉತ್ತಮವಾಗಿ ಬೌಲಿಂಗ್ ಮಾಡಬಲ್ಲರು. ನಿಧಾನಗತಿ ಪಿಚ್ಗಳಲ್ಲಿ ಅವರ ನಿರ್ವಹಣೆ ಅತ್ಯುತ್ತಮವಾಗಿದೆ. ಹೊಸ ಚೆಂಡಿನಲ್ಲಿ ಅವರು ತೋರಿದ ಪ್ರದರ್ಶನದ ಬಗ್ಗೆ ಖುಷಿ ಇದೆ ಎಂದು ಟಿಮ್ ಪೈನ್ ಹೇಳಿದ್ದಾರೆ. 

***