ನೊಂದು-ಬೆಂದವರ ಬಾಳಿಗೆ ಸಹಾಯ ಹಸ್ತ ನೀಡಿ: ಕೆಬಿಕೆ

ಲೋಕದರ್ಶನವರದಿ

ರಾಣೇಬೆನ್ನೂರು-ಜು.22: ಲಯನ್ಸ್ ಸಂಸ್ಥೆಯು ಅನೇಕ ಜನಪರ ಸೇವಾ ಚಟುವಟಿಕೆಗಳನ್ನು ನಿರಂತರವಾಗಿ ಮಾಡುತ್ತಿದೆ. ಇಂತಹ ಹಾದಿಯಲ್ಲಿ ಇತರ ಸಂಘ- ಸಂಸ್ಥೆಗಳು ಸಮಾಜಮುಖಿ ಕಾರ್ಯದಲ್ಲಿ ತೊಡಗಬೇಕು, ಹೆಚ್ಚು ಜನರು ಇಂತಹ ಸಂಸ್ಥೆಯೊಂದಿಗೆ ಸಕ್ರೀಯವಾಗಿ ಭಾಗವಹಿಸಲು ಪ್ರಾಮಾಣಿಕವಾಗಿ ಕೈಜೋಡಿಸಬೇಕು ಎಂದು ವಿಧಾನಸಭಾ ಮಾಜಿ ಅಧ್ಯಕ್ಷ ಕೆ.ಬಿ.ಕೋಳಿವಾಡ ಹೇಳಿದರು. 

ರವಿವಾರ ರಾತ್ರಿ ಇಲ್ಲಿನ ಆದಿಶಕ್ತಿ ದೇವಸ್ಥಾನದ ಬಿ.ಕೆ.ಗುಪ್ತಾ ಸಭಾಭವನದಲ್ಲಿ ನಡೆದ ಸಿಟಿ ಲಯನ್ಸ್ ಕ್ಲಬ್ನ ನೂತನ ಪದಾಧಿಕಾರಿಗಳ  ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು, ಲಯನ್ಸ್ ಸಂಸ್ಥೆ ಸ್ನೇಹ ಮತ್ತು ಸೇವೆ ಎಂಬ ಧ್ಯೇಯದೊಂದಿಗೆ ವಿಶ್ವದಾಧ್ಯಂತ ತನ್ನದೇ ಆದ ನಿಟ್ಟಿನಲ್ಲಿ ಸಮಾಜ ಸೇವಾ ಕಾರ್ಯದಲ್ಲಿ ತೊಡಗಿರುವುದು ಸಂತಸದ ವಿಷಯವಾಗಿದೆ. ಇದು ಹಿಗೆಯೇ ನಿರಂತರವಾಗಿ ಸಾಗಲು ಸರ್ವರೂ ಸಹಕರಿಸಬೇಕು ಎಂದರು. 

ಮಾಜಿ ಸಚಿವ ರುದ್ರಪ್ಪ ಲಮಾಣಿ ಮಾತನಾಡಿ ದೇಶದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಸಿಟಿ ಲಯನ್ಸ್ ಸಂಸ್ಥೆಯು ಅಸಹಾಯಕರ, ದೀನ, ದಲಿತರ ಆರೋಗ್ಯವನ್ನು ಸೇವಾ ಮನೋಭಾವನೆಯಿಂದ ಮತ್ತು ಫಲಾಪೇಕ್ಷೆ ಇಲ್ಲದೆ ಶ್ರಮಿಸುತ್ತಿರುವುದು ಶ್ಲಾಘನೀಯ. 

       ಈಗಾಗಲೇ ಆರೋಗ್ಯ ತಪಾಷಣೆ ಶಿಬಿರ ಮಧುಮೇಹ, ಪರಿಸರ, ನೀರಿನ ಸಂರಕ್ಷಣೆ, ಸ್ವಚ್ಚ ಭಾರತ, ವಿದ್ಯಾಭ್ಯಾಸಕ್ಕೆ ನೆರವು, ಕಣ್ಣಿನ ತಪಾಷಣೆ, ರಕ್ತದಾನ  ಸೇರಿದಂತೆ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸುತ್ತಿದೆ ಎಂದರು.

   ನಿಕಟ ಪೂರ್ವ  ಜಿಲ್ಲಾ ಗವರ್ನರ ಆನಂದ ಪೊಟ್ನೇಸ್ ಅವರು, ಸಿಟಿ ಲಯನ್ಸ್ ಕ್ಲಬ್ನ ನೂತನ ಅಧ್ಯಕ್ಷ ಡಾ. ರಘುಪತಿರಡ್ಡಿ ಕೆಂಚರಡ್ಡಿ, ಉಪಾಧ್ಯಕ್ಷೆ ರುಕ್ಮಿಣಿದೇವಿ ಕಳಸದ, ಎನ್.ಎಸ್ ಪಾಟೀಲ, ಕಾರ್ಯದಶರ್ಿ ನಾಗರಾಜ ನಲವಾಗಲ, ಖಜಾಂಚಿ ನಾಗರಾಜ ಮಾಕನೂರ ಸೇರಿದಂತೆ ಇತರ ಸದಸ್ಯರುಗಳಿಗೆ ಅಧಿಕಾರ ಹಸ್ತಾಂತರಿಸಿದರು. ನೂತನ ಪದಾಧಿಕಾರಿಗಳಿಗೆ ಲಯನ್ಸ್ನ ಡಾ. ರಂಜನಾ ನಾಯಕ ಪ್ರತಿಜ್ಞಾ ವಿಧಿ ಭೋಧಿಸಿದರು.

     ನ್ಯಾಯವಾದಿ ಎ.ಎಂ.ನಾಯಕ, ವಿ.ಆರ್.ಹಿರೇಗೌಡ್ರ, ರಾಜಣ್ಣ ನಾಯಕ, ಸುವರ್ಣ ಹಿರೇಗೌಡ್ರ, ಶಾಂತಾ ಪಾಟೀಲ, ವಿದ್ಯಾ ಮಾಕನೂರ, ಮೇಘರಾಜ ಪವಾರ, ಸುರೇಶ ಕೆಂಚರಡ್ಡಿ, ಶಂಕರ ಬಿಸರಳ್ಳಿ, ಬಸವರಾಜ ಬಳ್ಳಾರಿ, ನಿತ್ಯಾನಂದ ಕುಂದಾಪುರ, ಪರಶುರಾಮ ಕಾಳೇರ, ಕೊಟ್ರೇಶಪ್ಪ ಎಮ್ಮಿ ಸೇರಿದಂತೆ ಮತ್ತಿತರರು ಇದ್ದರು. ಇದೇ ಸಂದರ್ಭದಲ್ಲಿ ನೂತನ ಸದಸ್ಯರುಗಳನ್ನು ಸ್ವಾಗತಿಸಿ ಅಭಿನಂದಿಸಲಾಯಿತು.