ಹೆಲ್ಪ್ ಕಂಪ್ಯೂಟರ್ಸ್ ಕೇಂದ್ರಕ್ಕೆ ಶಾಸಕ ಓಲೇಕಾರ ಚಾಲನೆ

ಹಾವೇರಿ : ಶಿವಯೋಗೇಶ್ವರ ನಗರದಲ್ಲಿ ಹೆಲ್ಪ್ ಎಜ್ಯುಕೇಶನಲ್ & ವೆಲ್ಫೆರ್ ಸೊಸೈಟಿ ವತಿಯಿಂದ ಆಥರ್ಿಕವಾಗಿ ಹಿಂದುಳಿದ ಮಕ್ಕಳಿಗೆ ಗುಣಮಟ್ಟದ ಉಚಿತ  ಕಂಪ್ಯೂಟರ್ ಶಿಕ್ಷಣ ತರಬೇತಿ ನೀಡುವ ಗುರಿ ಹೊಂದಿರುವ ಹೆಲ್ಪ್ ಕಂಪ್ಯೂಟರ್ಸ್ ಕೇಂದ್ರವನ್ನು ಶಾಸಕರಾದ ನೆಹರು ಓಲೇಕಾರ ಉದ್ಘಾಟಿಸಿದರು.

ಇಂದಿನ ತಾಂತ್ರಿಕ ಯುಗದಲ್ಲಿ ಕಂಪ್ಯೂಟರ್ ಕಲಿಕೆ ಅತ್ಯಗತ್ಯವಾಗಿದ್ದು, ಯುವಕ, ಯುವತಿಯರಿಗೆ ಉಚಿತ ಕಂಪ್ಯೂಟರ್ ತರಬೇತಿ ನೀಡುವ ಧ್ಯೇಯ ಹೊಂದಿರುವ ಸೊಸೈಟಿಯು ಭವಿಷ್ಯದಲ್ಲಿ ಹೆಮ್ಮರವಾಗಿ ಬೆಳೆಯಲಿ ಎಂದು ಹಾರೈಸಿದರು.

ಮಾಜಿ ಸಚಿವ ಬಸವರಾಜ ಶಿವಣ್ಣನವರ ಮಾತನಾಡಿ ಆಥರ್ಿಕವಾಗಿ ಹಿಂದುಳಿದ ಮಕ್ಕಳಿಗೆ ಅದರಲ್ಲೂ ಶಿಕ್ಷಣ ವಂಚಿತ ಎಲ್ಲಾ ಸಮುದಾಯದ ಮಕ್ಕಳಿಗೆ ಉಚಿತ ಕಂಪ್ಯೂಟರ್ ಶಿಕ್ಷಣ ತರಬೇತಿ ನೀಡುತ್ತಿರುವ ಹೆಲ್ಪ್ ಎಜ್ಯುಕೇಶನಲ್ & ವೆಲ್ಫೆರ್ ಸೊಸೈಟಿಯು ಉತ್ತಮವಾಗಿ ಕಾರ್ಯನಿರ್ವಹಿಸಲಿ ಎಂದು ಹಾರೈಸಿದರು.

       ಕಾರ್ಯಕ್ರಮದ ಅಧ್ಯಕ್ಷತೆಯನ್ನು  ಹಜರತಅಲಿ ಎಂ. ಮೆಲ್ಮುರಿ ವಹಿಸಿದ್ದರು.ಗೌರವನ್ವಿತ ಅಥಿತಿಗಳನ್ನು ಸನ್ಮಾನಿಸಲಾಯಿತು.ಅತಿಥಿಗಳಾಗಿ ಶಿವಕುಮಾರ ಸಂಗೂರ, ಸಂಜೀವಕುಮಾರ ನೀರಲಗಿ, ಬಾಬು ಮೋಮಿನಗಾರ, ಪೀರಸಾಬ ಚೋಪದಾರ, ದಾದಾಪೀರ ಚೂಡಿಗಾರ,  ಅಬ್ದುಲರಜಾಕ ಜಮಾದಾರ,  ನಜೀರಸಾಬ ನದಾಫ,  ಇಫರ್ಾನಖಾನ ಪಠಾಣ, ಎಂ.ಎಂ. ಹೂಲಿಹಳ್ಳಿ, ಎಸ್.ಎಸ್. ಖಾಜಿ, ಎಂ.ಎನ್. ನಾಯಕ, ಖಾಜಾಮೊಹಿದ್ದೀನ ಕೆ.ಮಕಬೂಲ್ ಲಿಂಗಹದಳ್ಳಿ ಸೊಸೈಟಿಯ ಪದಾಧಿಕಾರಿಗಳು ಹಾಗೂ ವಿದ್ಯಾಥರ್ಿಗಳು ಪಾಲ್ಗೊಂಡಿದ್ದರು.