ವೃಕ್ಷೋಧ್ಯಾನ ನಿರ್ಮಾಣ ಕಾಮಗಾರಿಗೆ ಶಾಸಕ ವಿರೂಪಾಕ್ಷಪ್ಪ ಚಾಲನೆ

ಲೋಕದರ್ಶನವರದಿ

ಬ್ಯಾಡಗಿ: ತಾಲೂಕಿನ ಮೋಟೆಬೆನ್ನೂರ ಗ್ರಾಮದ ಹೊರ ವಲಯದಲ್ಲಿ ಬರುವ ಅರಣ್ಯ ಇಲಾಖೆಯ ಪ್ರದೇಶದಲ್ಲಿ 56 ಲಕ್ಷ ರೂ ಗಳ ವೆಚ್ಚದಲ್ಲಿ ಹೊಸ ವೃಕ್ಷೋಧ್ಯಾನ ( ಟ್ರೀ-ಪಾಕರ್್ ) ನಿಮರ್ಾಣ ಮಾಡಲು ರಾಜ್ಯ ಸಕರ್ಾರ ಮಾಡಲು ಉದ್ದೇಶಿಸಿದೆ ಎಂದು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಹೇಳಿದರು. 

  ವಲಯ ಅರಣ್ಯ ಇಲಾಖೆಯ ಸರ್ವ್  ನಂಬರ್ 427 ರಲ್ಲಿನ  10 ಹೆಕ್ಟೇರ್ ಪ್ರದೇಶದಲ್ಲಿ ಹೊಸ ವೃಕ್ಷೋಧ್ಯಾನ ( ಟ್ರೀ- ಪಾಕರ್್ ) ನಿಮರ್ಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು ಹೊಂಗೆ, ಬೇವು, ಚಂದನ ಹಾಗೂ ರಕ್ತ ಚಂದನ ಸೇರಿದಂತೆ ವಿವಿಧ ಸಸ್ಯಗಳನ್ನು ಹಾಗೂ  ಔಷಧೀಯ ಗುಣಗಳುಳ್ಳ ಸಸ್ಯಗಳನ್ನು ಬೆಳೆಸಲು ತಂತ್ರಜ್ಞಾನದ ವಿಧಾನ ಅನುಸರಿಸುವ ಮೂಲಕ ಒಂದು ಉತ್ತಮ ಉದ್ಯಾನವನ್ನು ನಿಮರ್ಿಸಲು ಮುಂದಾಗುವಂತೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು. 

   ವಲಯ ಅರಣ್ಯಾಧಿಕಾರಿ ಮಹೇಶ ಮರೆಮ್ಮನವರ ಮಾತನಾಡಿ, 10 ಹೆಕ್ಟೇರ್ ಪ್ರದೇಶದಲ್ಲಿ ಪ್ರವಾಸಿ ತಾಣ ವಾಗುವಂತಹ ಒಂದು ಉತ್ತಮ ವಾದ ಉದ್ಯಾನವನ್ನು ನಿಮರ್ಿಸುವುದಾಗಿ ತಿಳಿಸಿದರಲ್ಲದೆ 1.50 ಹೆಕ್ಟೇರ್ ಪ್ರದೇಶದಲ್ಲಿ ಸಾಲು ಮರ ತಿಮ್ಮಕ್ಕ ವೃಕ್ಷೋಧ್ಯಾನವನ್ನು ಇದರಲ್ಲಿ ಮಾದರಿಯಾಗುವಂತೆ ನಿಮರ್ಿಸಲಾಗುವುದು ಎಂದು ತಿಳಿಸಿದರು. 

         ಈ ಸಂದರ್ಭದಲ್ಲಿ ತಾ ಪಂ. ಸ್ಥಾಯಿ ಸಮಿತಿ ಅಧ್ಯಕ್ಷರಾದ ಯಲ್ಲನಗೌಡ್ರ ಕರೆಗೌಡ್ರ, ಶಿವಬಸಪ್ಪ ಕುಳೇನೂರ, ಶಿವಪ್ಪ ಹರಮಗಟ್ಟಿ, ದ್ಯಾಮಣ್ಣ ಭರಡಿ, ಅರಣ್ಯ ಇಲಾಖೆಯ ಸಿಬ್ಬಂದಿಗಳಾದ ಪ್ರಕಾಶ ಸವಣೂರು, ವಸಂತ ಪಾಟೀಲ, ಗಣೇಶ, ನಾಗರಾಜ ಸೇರಿದಂತೆ ಇನ್ನಿತರರಿದ್ದರು.