ಲೋಕದರ್ಶನ ವರದಿ
ಯರಗಟ್ಟಿ 31: ಶಾಸಕರ ಅನುದಾನದಲ್ಲಿ ಇಲ್ಲಿನ ವೀರಭದ್ರೇಶ್ವರ ನಗರದಲ್ಲಿ 60.43 ಲಕ್ಷ ಸಿಸಿ ರಸ್ತೆ, ಸೋಮಾಪೂರ ಗ್ರಾಮದಲ್ಲಿ 83.48 ಲಕ್ಷ ಕಾಂಕ್ರಿಟ್ ರಸ್ತೆ ಹಾಗೂ 63.80 ಲಕ್ಷ ಸಿಸಿ ರಸ್ತೆ, ಆಲದಕಟ್ಟಿ.ಕೆ.ಎಮ್ ಗ್ರಾಮದಲ್ಲಿ 136.82 ಲಕ್ಷ ಡಾಂಬರಿಕರಣ ರಸ್ತೆ, ರೈನಾಪೂರ ಗ್ರಾಮದಲ್ಲಿ 83.73 ಲಕ್ಷ ಸಿಸಿ ರಸ್ತೆ ಕಾಮಗಾರಿಗಳಿಗೆ ಶಾಸಕ ಆನಂದ ಮಾಮನಿ ಗುದ್ದಲಿ ಪೂಜೆ ನೆರವೇರಿಸಿದರು.
ಜಿ.ಪಂ.ಸದಸ್ಯ ಅಜೀತಕುಮಾರ ದೇಸಾಯಿ, ಗ್ರಾ.ಪಂ.ಅಧ್ಯಕ್ಷೆ ಕಸ್ತೂರಿ ಕಡೆಮನಿ, ಸೊಪ್ಪಡ್ಲ ಗ್ರಾ.ಪಂ.ಅಧ್ಯಕ್ಷ ಸುರೇಶ ಬಂಟನೂರ, ಎಪಿಎಮ್ಸಿ ಮಾಜಿ ಅಧ್ಯಕ್ಷ ಬಸಯ್ಯ ಹಿರೇಮಠ, ಎಪಿಎಮ್ಸಿ ನಿರ್ಧೆಶಕ ಚಂದ್ರು ಅಳಗೋಡಿ, ತಾ.ಪಂ.ಮಾಜಿ ಅಧ್ಯಕ್ಷ ಪರ್ವತಗೌಡ ಪಾಟೀಲ, ಪಿಡಬ್ಲೂಡಿ ಅಭಿಯಂತರ ಉಮೇಶ ಪರಾಳದ, ಈರಣ್ಣ ಚಂದರಗಿ, ವಿಠ್ಠಲ ಬಂಟನೂರ, ಹನಮಂತ ಜೂಗನವರ, ಐ.ಜಿ.ಬೆಣ್ಣಿ, ಗೌಡಪ್ಪ ಸವದತ್ತಿ, ಸಂಗನಗೌಡ ದ್ಯಾಮನಗೌಡರ, ದಾವಲಸಾಬ ಚಪ್ಟಿ, ರೇವಣಪ್ಪ ಅಂಗಡಿ, ಡಾ.ವಿಶ್ವನಾಥ ತಾಂಶಿ, ಮಲ್ಲಪ್ಪ ಪಾಟೀಲ, ಮಗೆಪ್ಪ ಮುಗಳಿ, ಅಭಿವೃದ್ಧಿ ಅಧಿಕಾರಿ ಬಿ.ಬಿ.ಅಮ್ಮಿನಭಾವಿ, ವೆಂಕಟೇಶ ದೇವರಡ್ಡಿ, ವೆಂಕಣ್ಣ ಕೊಪ್ಪದ, ಸದಾನಂದ ಪಾಟೀಲ, ಶಿವಾನಂದ ಪಟ್ಟಣಶೆಟ್ಟಿ ಮುಂತಾದವರಿದ್ದರು.