ಲೋಕದರ್ಶನ ವರದಿ
ಬೆಳಗಾವಿ,4: ಕಾನೂನು ವಿದ್ಯಾಥರ್ಿಗಳು ಇತರ ವಿದ್ಯಾಥರ್ಿಗಳಿಗಿಂತ ವಿಭಿನ್ನರು. ಬೇರೆ ವಿದ್ಯಾಥರ್ಿಗಳಿಗಿಂತ ಕಾನೂನು ವಿದ್ಯಾಥರ್ಿಗಳಿಗಿರುವ ಜವಾಬ್ದಾರಿ ದೊಡ್ಡದು. ಭವಿಷ್ಯದಲ್ಲಿ ನ್ಯಾಯವಾದಿ, ನ್ಯಾಯಾಧೀಶರಾಗಿ ಸಮಾಜಕ್ಕೆ ನ್ಯಾಯ, ಶ್ರೇಷ್ಠ ತೀರ್ಪನ್ನು ನೀಡುವ ಮೂಲಕ ಕಾನೂನಿನ ಘನತೆಯನ್ನು ಎತ್ತಿ ಹಿಡಿಯಬೇಕು ಎಂದು ನಗರದ ಬೆನನ್ಸ್ಮಿತ್ ಪದವಿ ಪೂರ್ವ ಮಹಾವಿದ್ಯಾಲಯದ ಉಪನ್ಯಾಸಕ ಶ್ರೀಕಾಂತ ಶಾನವಾಡ ಕಿವಿ ಮಾತು ಹೇಳಿದರು.
ಕನರ್ಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಮತ್ತು ಕೆಎಲ್ಇ ಸಂಸ್ಥೆಯ ಬಿ.ವಿ.ಬೆಲ್ಲದ ಕಾನೂನು ಮಹಾವಿದ್ಯಾಲಯಗಳ ವತಿಯಿಂದ ನಗರದ ಲಿಂಗರಾಜ ಮಹಾವಿದ್ಯಾಲಯದ ಕೇಂದ್ರ ಸಭಾಗೃಹದಲ್ಲಿ ಭಾನುವಾರ ನಡೆದ ಅಂತರ್ ಕಾಲೇಜು ಕಾನೂನು ಮಹಾವಿದ್ಯಾಲಯಗಳ ವಲಯ ಮಟ್ಟದ ಯುವ ಜನೋತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ದೇಶದ ಸಂವಿಧಾನ ರಚನೆಗೆ ಕಾನೂನು ಓದಿದವರೇ ಬುನಾದಿ ಹಾಕಿಕೊಟ್ಟಿದ್ದರು. ಕಾನೂನು ಮಾನವೀಯ ಮೌಲ್ಯ ಎತ್ತಿ ಹಿಡಿಯುವಂತೆ ಇರಬೇಕು. ಮಾನವ ಕುಲದ ಪರವಾಗಿ ಕಾನೂನು ವಿದ್ಯಾಥರ್ಿಗಳು ತೀಪರ್ು ಬರೆಯುವಂತೆ ರೂಪುಗೊಳ್ಳಬೇಕು. ಎಲ್ಎಲ್ಬಿ, ಎಲ್ಎಲ್ಎಂ ಏನೇ ಓದಿ. ಮೊದಲು ಮಾನವೀಯ ಗುಣಗಳನ್ನು ಅಳವಡಿಸಿಕೊಂಡು ವ್ಯಕ್ತಿಗೆ ನ್ಯಾಯ ದೊರೆಕಿಸಿಕೊಡುವ ವ್ಯಕ್ತಿಯಾಗಿ ಗುರುತಿಸಿಕೊಳ್ಳಿ ಎಂದು ಸಲಹೆ ನೀಡಿದರು.
ದೇಶದ ಕೆಲ ವಿಶ್ವವಿದ್ಯಾಲಯಗಳು ಕೀಳು ವಿಷಯ ಎತ್ತಿಕೊಂಡು ವ್ಯವಸ್ಥೆಯನ್ನೇ ಬುಡಮೇಲು ಮಾಡುತ್ತಿವೆ. ಆ ಬಗ್ಗೆ ವಿದ್ಯಾಥರ್ಿಗಳು ಎಚ್ಚರಿಕೆ ವಹಿಸಬೇಕು. ಎಡ-ಬಲ ಎಂದು ಗುರುತಿಸಿಕೊಳ್ಳದೇ ದೇಶದ ಅಭಿವೃದ್ದಿ ಬಗ್ಗೆ ಗಮನ ಹರಿಸುವ ಕಡೆ ವಿದ್ಯಾಥರ್ಿಗಳು ಗಮನಹರಿಸಬೇಕು ಎಂದರು.
ಇಂದಿನ ಯುವಕರು ಕೆಟ್ಟಿಲ್ಲ. ಅವರಲ್ಲಿ ಅದಮ್ಯ ಉತ್ಸಾಹ, ಚೈತನ್ಯ ಇದೆ. ವಿವೇಕಾನಂದರು ಹೇಳುವಂತೆ ಯುವಕರು ಜ್ವಾಲಾಮುಖಿಯಿದ್ದಂತೆ. ಜ್ವಾಲಾಮುಖಿಯ ಬಾಯಿಯನ್ನು ಮುಟ್ಟುವ ಸಾಮಥ್ರ್ಯ ಇಂದಿನ ಯುವಕರಲ್ಲಿದೆ. ಸ್ವಾಮಿ ವಿವೇಕಾನಂದರು, ಸುಭಾಷಚಂದ್ರ ಬೋಸ್ ಅವರು ಕಂಡ ದಾರಿಯಲ್ಲಿ ಯುವಕರು ದೇಶವನ್ನು ಮುನ್ನಡೆಯುವ ಸಾಮಥ್ರ್ಯ ಹೊಂದಿದ್ದು, ಅವರನ್ನು ಸಮರ್ಥವಾಗಿ ಬಳಸಿಕೊಳ್ಳುವ ಮೂಲಕ ದೇಶದ ಪ್ರಗತಿಗೆ ಕಾರಣವಾಗಬೇಕಾಗಿದೆ ಎಂದರು.
ಯುವಜನೋತ್ಸವದಲ್ಲಿ ಸೋಲು-ಗೆಲವು ಮುಖ್ಯವಲ್ಲ. ಭಾಗವಹಿಸುವಿಕೆ ಮುಖ್ಯ. ಹಲವು ಕಾಲೇಜುಗಳ ವಿದ್ಯಾಥರ್ಿಗಳು ಒಂದುಗೂಡಿದ್ದರಿಂದ ಇಲ್ಲಿ ನಿಮ್ಮ ನಡುವೆ ಸ್ನೇಹ ಬೆಳೆದಿದೆ. ಯುವ ಸಮುದಾಯ ಇಂಥ ಕಾರ್ಯಕ್ರಮಗಳ ಮೂಲಕ ನಾಯಕತ್ವ ಬೆಳೆಸಿಕೊಂಡು ಹೊಸ ನಾಡೊಂದನ್ನು ಕಟ್ಟಲು ಮುಂದಾಗಬೇಕು. ಈ ಮೂಲಕ ಸಮಾಜಕ್ಕೆ ಶ್ರೇಷ್ಠ ಕೊಡುಗೆ ನೀಡಲು ಬದ್ದರಾಗಬೇಕು ಎಂದು ಹೇಳಿದರು.
ಬಿ.ವಿ.ಬೆಲ್ಲದ ಕಾನೂನು ಮಹಾ ವಿದ್ಯಾಲಯದ ಸ್ಥಾನಿಕ ಆಡಳಿತ ಮಂಡಳಿ ಅಧ್ಯಕ್ಷ ಆರ್.ಬಿ. ಬೆಲ್ಲದ ಮಾತನಾಡಿ, ಎರಡು ದಿನಗಳ ಕಾಲ ನಡೆದ ಯುವ ಜನೋತ್ಸವ ಯಶಸ್ಸು ಕಂಡಿದೆ. ರಾಜ್ಯದ ವಿವಿಧ ಕಾನೂನು ವಿದ್ಯಾಥರ್ಿಗಳು ಭಾಗವಹಿಸುವ ಮೂಲಕ ತಮ್ಮಲ್ಲಿರುವ ಪ್ರತಿಭೆಯನ್ನು ಬೆಳಕಿಗೆ ತಂದಿದ್ದಾರೆ. ಭವಿಷ್ಯದಲ್ಲೂ ತಮ್ಮ ಪ್ರತಿಭೆ ತೋರಿ ಎಂದು ಕಿವಿ ಮಾತು ಹೇಳಿದರು.
ಬಿ.ವಿ. ಬೆಲ್ಲದ ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಬಿ.ಜಯಸಿಂಹ ಮಾತನಾಡಿ, ಬಿ.ವಿ. ಬೆಲ್ಲದ ಮಹಾವಿದ್ಯಾಲಯ ಕಾನೂನು ಶಿಕ್ಷಣಕ್ಕೆ ಹೆಸರಾಗಿದೆ. ಯುವಜನೋತ್ಸವವನ್ನು ಅತ್ಯಂತ ಅಚ್ಚುಕೊಟ್ಟು ಹಾಗೂ ವ್ಯವಸ್ಥಿತವಾಗಿ ನಡೆಸಿಕೊಟ್ಟಿದೆ. ವಿವಿಧ ಕಾನೂನು ವಿದ್ಯಾಲಯಗಳ ವಿದ್ಯಾಥರ್ಿಗಳು ಅತ್ಯಂತ ಸಂತೋಷದಿಂದ ಬೆಳಗಾವಿಗೆ ಬಂದು ಆತಿಥ್ಯ ಸ್ವೀಕರಿಸಿ ಭಾಗವಹಿಸಿರುವುದು ಖುಷಿ ತಂದಿದೆ. ಕಾನೂನು ಕ್ಷೇತ್ರದಲ್ಲಿ ಭಾರಿ ಬೇಡಿಕೆಯಿದ್ದು, ವಿದ್ಯಾಥರ್ಿಗಳು ಈ ಕ್ಷೇತ್ರದಲ್ಲಿರುವ ಉಜ್ವಲ ಅವಕಾಶಗಳನ್ನು ಬಳಸಿಕೊಂಡು ಮಾದರಿ ವ್ಯಕ್ತಿಯಾಗಬೇಕು ಎಂದರು.
ವಿದ್ಯಾಥರ್ಿಗಳು ಪ್ರಾಥರ್ಿಸಿದರು. ಸುಪ್ರಿಯಾ ಸ್ವಾಮಿ ಬಹುಮಾನ ವಿತರಣೆ ನಡೆಸಿಕೊಟ್ಟರು. ಯುವಜನೋತ್ಸವ ಸಮಿತಿಯ ಸಂಯೋಜಕಿ ಗೋಪಿಕಾ ಹೊಸಮನಿ ಸ್ವಾಗತಿಸಿದರು. ಪೂಣರ್ಿಮಾ ಹಾಗೂ ಕಲ್ಲಯ್ಯ ನಿರೂಪಿಸಿದರು.